ಇಡೀ ಜಗತ್ತಿನಾದ್ಯಂತ ಕೊರೋನಾ ರುದ್ರ ತಾಂಡವವಾಡುತ್ತಿದೆ. ಇನ್ನು ಅಮೆರಿಕದಲ್ಲಂತೂ ಇದು ಮಿತಿ ಮೀರಿದೆ. ದೊಡ್ಡಣ್ಣ ಎನಿಸಿಕೊಂಡಿರುವಅಮೆರಿಕಾದಲ್ಲಿ ನಿಯಂತ್ರಣಕ್ಕೆ ಬರದೇ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ವೈದ್ಯರು ರಕ್ಷಕರಾಗಿ ನಿಂತಿದ್ದು, ಭಾರತೀಯ ವೈದ್ಯರು ಕೂಡ ಇದಕ್ಕೆ ಸಾತ್ ಕೊಟ್ಟಿದ್ದಾರೆ.

ಇನ್ನು ಈ ಮಾರಕ ಕೊರೋನಾ ವಿರುದ್ಧ ಅಮೆರಿಕಾದಲ್ಲಿ ಹೋರಾಡುತ್ತಿರುವ ವೈದ್ಯರಲ್ಲಿ ಮೈಸೂರಿನ ವೈದ್ಯರೊಬ್ಬರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಅಮೆರಿಕಾದಲ್ಲಿ ಡ್ರೈವ್ ಆಫ್ ಹಾನರ್ ಗೌರವ ನೀಡಿ ಗೌರವಿಸಲಾಗಿದೆ. ಕೆಳಗಿರುವ ಈ ವಿಡಿಯೋ ನೋಡಿ..
ಹೌದು, ಅಮೇರಿಕಾದಲ್ಲಿ ಮೈಸೂರಿನ ಮೂಲದ ವೈದ್ಯೆ ಡಾ. ಉಮಾ ಮಧುಸೂದನ್ ಅವರು ಅಲ್ಲಿನ ಸೌಥ್ ವಿಂಡ್ಸರ್ ಎಂಬ ಆಸ್ಪತ್ರೆಯಲ್ಲಿ ಹಗಲಿರುಳು ದುಡಿಯುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು.ಇನ್ನು ಇವರ ಸೇವೆಗಾಗಿ ಅವರಿಗೆ ಅಲ್ಲಿನ ಜನರು ಮತ್ತು ಸ್ಥಳೀಯ ಆಡಳಿತದವರು ಡ್ರೈವ್ ಆಫ್ ಹಾನರ್ ಗೌರವ ಸಲ್ಲಿಸಿದ್ದಾರೆ.

ವೈದ್ಯೆ ಉಮಾರವರು ತಮ್ಮ ಮನೆಯ ಮುಂದೆ ನಿಂತಿದ್ದಾಗ ಅಲ್ಲಿನ ಸ್ಥಳೀಯ ಆಡಳಿತದ ಅಧಿಕಾರಿಗಳು, ಅಗ್ನಿಶಾಮಕ ದಳದವರು, ಭದ್ರತಾ ಸಿಬ್ಬಂದಿಗಳು ವಾಹನಗಳಲ್ಲಿ ಬಂದು ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಿದ್ದಾರೆ.