ತಾಮ್ರದ ಪಾತ್ರೆಯಲ್ಲಿ ನೀರಿಟ್ಟು ಕುಡಿದ್ರೆ ಎಷ್ಟೊಂದು ಲಾಭ ಇದೆ ಗೊತ್ತಾ ?

Health
Advertisements

ತಾಮ್ರದ ಬಾಟಲ್ ಗಳಲ್ಲಿ ನೀರು ಕುಡಿದರೆ ಏನಾಗುತ್ತದೆ? ಇದು ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ನಿಮಗೆ ಇದ್ದರೆ ಅದಕ್ಕೆ ಉತ್ತರ ತುಂಬಾ ಉಪಯೋಗಕಾರಿ. ಕಾಪರ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ತುಂಬಾ ಪ್ರಯೋಜನಕಾರಿ. ಆದರೆ ಖಾಲಿ ಹೊಟ್ಟೆಯಲ್ಲಿ ಇರುವಾಗ ದಿನಕ್ಕೆ ಎರಡು ಬಾರಿ ಬೆಳಗ್ಗೆ ಮತ್ತು ಸಂಜೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿದರೆ ಸಾಕು. ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿಯುವುದರಿಂದ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ.

[widget id=”custom_html-4″]

Advertisements

ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : ದಿನವೂ ಒಂದು ಬಾರಿ ತಾಮ್ರದ ನೀರು ಕುಡಿಯುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೋ’ರೋನಾದಂತ ಈ ಸಮಯದಲ್ಲಿ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿದರೆ ತುಂಬಾ ಒಳ್ಳೆಯದು.

ಥೈರಾಯ್ಡ್ ಸಮಸ್ಯೆ ಪರಿಹಾರ : ಈ ಸಮಸ್ಯೆಯಿಂದ ಸಂಕಷ್ಟದಲ್ಲಿರುವವರು ತಾಮ್ರದ ನೀರು ಕುಡಿಯುವುದರಿಂದ ಹಾರ್ಮೋನ್ ಬ್ಯಾಲೆನ್ಸ್ ಆಗಿ ಈ ಸಮಸ್ಯೆ ಕಡಿಮೆಯಾಗುವುದು ಎಂದು ಅಧ್ಯಯನಗಳ ವರದಿಯೊಂದು ತಿಳಿಸುತ್ತದೆ.

[widget id=”custom_html-4″]

ಚರ್ಮದ ಆರೋಗ್ಯ ವೃದ್ಧಿಸುತ್ತದೆ : ಚರ್ಮ ಕಾಯಿಲೆಯಿಂದ ಬಳಲುವವರು ತಾಮ್ರದ ಬಾಟಲ್ ನೀರು ಕುಡಿಯುವುದರಿಂದ ಸಮಸ್ಯೆ ಸುಧಾರಿಸುತ್ತದೆ. ಅಲ್ಲದೆ ತಾಮ್ರದ ನೀರು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ನೈಸರ್ಗಿಕ ಹೊಳಪು ಕಾಂತಿ ತ್ವಚೆಗೆ ಸಿಗುತ್ತದೆ.

ಕಾನ್ಸರ್ ತಡೆಗಟ್ಟುತ್ತದೆ : ಚರ್ಮದ ಕಾನ್ಸರ್ ಇತ್ಯಾದಿ ಖಾಯಿಲೆಗಳನ್ನು ತಡೆಗಟ್ಟುವ ಗುಣ ತಾಮ್ರಕ್ಕೆ ಇದೆ. ನೀರಿನೊಂದಿಗೆ ಇದು ನಮ್ಮ ದೇಹ ಸೇರಿದಾಗ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

ಉತ್ತಮ ಜೀರ್ಣಕ್ರಿಯೆ : ತಿಂದ ಆಹಾರ ಚೆನ್ನಾಗಿ ಜೀರ್ಣವಾಗಲು ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ತುಂಬಾ ಉಪಯೋಗಕಾರಿ. ಅಲ್ಲದೆ ಜೀರ್ಣ ಸಮಸ್ಯೆ ಇರುವವರಿಗೂ ಇದು ಒಂದು ಒಳ್ಳೆಯ ಉಪಾಯ. ಹೀಗೆ ತಾಮ್ರದ ಬಾಟಲ್ ಅಥವಾ ಪಾತೆಯಲ್ಲಿ ನೀರು ಶೇಕರಿಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಆದ್ದರಿಂದಲೇ ಏನೋ ನಮ್ಮ ಹಿರಿಯರು ಹಿಂದೆ ತಾಮ್ರದ ಕೊಡಗಳಲ್ಲಿ ನೀರನ್ನು ಶೇಖರಿಸಿ ಇಡುತ್ತಿದ್ದರು. ನಮ್ಮ ಪುರಾತನ ಸಂಪ್ರದಾಯದ ಮಹತ್ವ ಅರಿತು ಪಾಲಿಸಬೇಕಾದ ಸಮಯ ಈಗ ಬಂದಿದೆ ಎನ್ನಬಹುದು.