1ವರ್ಷದ ಬಳಿಕ ಮತ್ತೆ ಬಂದ ಡ್ರೋನ್ ಪ್ರತಾಪ್ ! ಹೇಳಿದ್ದೇನು ಗೊತ್ತಾ?

Kannada News

ತನ್ನ ಮಾತಿನ ಮೋಡಿಯ ಮೂಲಕ ಇಡೀ ಕರ್ನಾಟಕದ ಜನಕ್ಕೆ ಕಾಗೆ ಆರಿಸಿದ್ದ, ದ್ರೋಣಾಚಾರ್ಯ, ಯುವವಿಜ್ಞಾನಿ, ಕನ್ನಡಿಗರ ಹೆಮ್ಮೆಯ ಮಂಡ್ಯದ ಹುಡುಗ, ಹೀಗೆಲ್ಲಾ ಸಖತ್ ಫೇಮಸ್ ಆಗಿದ್ದವನು ಡ್ರೋನ್ ಪ್ರತಾಪ್. ಕನ್ನಡ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ತನ್ನ ತಾಯಿಯ ತಾಳಿ ಅಡವಿಡಬೇಕಾಯಿತು ಎಂದು ತನ್ನ ಸಾಧನೆ ಬಗ್ಗೆ ಹೇಳಿಕೊಂಡಿದ್ದನ್ನ ಕೇಳಿ ಆ ಕಾರ್ಯಕ್ರಮ ನೋಡಿದ ಸಾವಿರಾರು ಜನ ಕಣ್ಣೀರು ಹಾಕಿದ್ದರು. ನಮಗಿಂತಹ ಮಗ ಹುಟ್ಟಲಿಲ್ಲವೇ ಎಂದು ಮನಸಿನಲಿ ಕೊರಗಿದ್ದರು. ಆದರೆ ಎರಡು ವರ್ಷಗಳ ಕಾಲ ಕನ್ನಡಿಗರ ಕಿವಿಗಳಿಗೆ ಹೂ ಇಟ್ಟಿದ್ದ ಡ್ರೋನ್ ಪ್ರತಾಪ್ ನ ನಿಜರೂಪ ಬಯಲಾಗುತ್ತಲೇ ಪುಂಗಿ ಪ್ರತಾಪ, ಕಾಗೆ ಪ್ರತಾಪ್ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದು ನಮಗೆಲ್ಲಾ ತಿಳಿದಿರುವ ವಿಷಯವೇ..

ಡ್ರೋನ್ ಪ್ರತಾಪ್ ನ ಸುಳ್ಳು ಮಾತುಗಳ ಕಲೆ ಹೇಗಿತ್ತೆಂದರೆ ಜಗ್ಗೇಶ್ ರಂತಹ ಸಿನಿಮಾ ನಟರು ಸೇರಿದಂತೆ, ರಾಜಕಾರಣಿಗಳಿಗೂ ಕೂಡ ಕಾಗೆ ಆರಿಸಿದ್ದ. ಇನ್ನು ಅಂತಾರಾಷ್ಟ್ರೀಯ ಯುವ ವಿಜ್ನ್ಯಾನಿ ಎಂದೇ ತನ್ನಣ್ಣ ಕರೆದುಕೊಂಡಿದ್ದ ಡ್ರೋನ್ ಪ್ರತಾಪ್ ನ ಸುಳ್ಳು ಸಾಧನೆಯ ಕತೆಗಳನ್ನ ಕೇಳಿ, ಮಠಗಳು ಸೇರಿದಂತೆ ಹಲವು ಕಡೆಯಿಂದ ಹಣ ಕೂಡ ಹರಿದುಬಂದಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರ ಮೂಲಕ ರಾತ್ರೋ ರಾತ್ರಿ ಇಡೀ ರಾಜ್ಯದಂತ ಫೇಮಸ್ ಆಗಿದ್ದ ಪ್ರತಾಪ್ ನನ್ನ ನೋಡಿ ನಟ ಜಗ್ಗೇಶ್ ಅವರು ಹೊಗಳಿದ್ದಲ್ಲದೆ, ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದರು. ಇವನ ನಿಜ ಬಣ್ಣ ಬಯಲಾದ ಮೇಲೆ ನನ್ನ ಜೀವನದಲ್ಲಿ ಎನ್ನೆಂದಿಗೂ ಕೂಡ ಇಂತಹವರಿಗೆ ಸಹಾಯ ಮಾಡುವುದೇ ಇಲ್ಲ ಎಂದು ತಮ್ಮ ಬೇಸರ ಹೊರಹಾಕಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಡ್ರೋನ್ ಪ್ರತಾಪ್ ಬರೋಬ್ಬರಿ ೭೨ಲಕ್ಷ ಫಾಲ್ಲೋರ್ಸ್ ಗಳನ್ನ ಗಳಿಸಿಕೊಂಡಿದ್ದ. ಆದರೆ ಆತನ ಅಸಲಿ ಬಣ್ಣ ಗೊತ್ತಾಗುತ್ತಿದ್ದಂತೆ ಸದ್ಯಕೆ ಆತನ ಫಾಲ್ಲೋರ್ಸ್ ಗಳ ಸಂಖ್ಯೆ ಕೇವಲ ೩೨ಸಾವಿರಕ್ಕೆ ಬಂದು ನಿಂತಿದೆ. ಇದೆಲ್ಲದರ ಬಳಿಕ ಸಾಮಾಜಿಕ ಜಾಲತಾಣ ಸೇರಿದಂತೆ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಡ್ರೋನ್ ಪ್ರತಾಪ್ ಈಗ ಒಂದು ವರ್ಷದ ಬಳಿಕ ಮತ್ತೆ ತನ್ನ ಸೋಷಿಯಲ್ ಮೀಡಿಯಾ ಖಾತೆಗೆ ಮರಳಿದ್ದು ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾನೆ. ಫ್ಲೈಟ್ ನಲ್ಲಿ ಕುಳಿತು ನಾನು ಲಂಡನ್ ಏರ್ಪೋರ್ಟ್ ನಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಒಟ್ಟಿನಲ್ಲಿ ಒಂದು ವರ್ಷದ ಬಳಿಕ ಮತ್ತೆ ಸುದ್ದಿಯಲ್ಲಿಲ್ಲಿದ್ದಾನೆ ಡ್ರೋನ್ ಪ್ರತಾಪ್..