ರಾತ್ರಿಯೆಲ್ಲಾ ನಗರದಾದ್ಯಂತ ರೌಂಡ್ಸ್ ಮಾಡುತ್ತಿದ್ದ ಈ ಮಹಿಳಾ ಅಧಿಕಾರಿಯ ನಿಜ ತಿಳಿದು ಎಲ್ಲರಿಗೂ ಅಚ್ಚರಿ ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ ?

Inspire

ಏನನ್ನ ಬೇಕಾದರೂ ಮಾಡುವಂತಹ ಜನರಿರುವ ಇಂತಹ ಕಾಲದಲ್ಲಿ ನಾವು ಮಧ್ಯರಾತ್ರಿಯು ಕೂಡ ಮಲಗಿ ನೆಮ್ಮದಿಯಾಗಿ ಜೀವನ ಮಾಡುತ್ತೇವೆ ಎಂದರೆ ಅದಕ್ಕೆ ಕಾರಣ ನಮ್ಮಲ್ಲಿರುವ ಕಾನೂನು ವ್ಯವಸ್ಥೆ. ಇನ್ನು ಅದನ್ನ ಸರಿಯಾದ ರೀತಿಯಲ್ಲಿ ಕಾನೂನು ರೂಪಕ್ಕೆ ತಂದು ನ್ಯಾಯವನ್ನ ಕಾಪಾಡುವ ಪೊಲೀಸ್ ವ್ಯವಸ್ಥೆ. ಇನ್ನು ಇದೆ ರೀತಿ ಸಾರ್ವಜನಿಕರು ಮಧ್ಯರಾತ್ರಿಯಲ್ಲೂ ಕೂಡ ನೆಮ್ಮದಿಯಾಗಿ ಮಲಗುವ ಸಲುವಾಗಿ ಇಡೀ ನಗರ ಪೂರ್ತಿ ರೌಂಡ್ಸ್ ಹಾಕುತ್ತಿದ್ದ ಡಿಎಸ್ಪಿ ಮಹಿಳಾ ಪೊಲೀಸ್ ಅಧಿಕಾರಿ ಒಬ್ಬರ ಫೋಟೋವೊಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಹೌದು, ಈ ಮಹಿಳಾ ಅಧಿಕಾರಿಯ ಹೆಸರು ಅರ್ಚನಾ ಎಂದು. ಛತ್ತೀಸ್ಗಢದ ರಾಯಪುರ್ ಠಾಣೆಯಲ್ಲಿ ಡಿಎಸ್ಪಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನಾ ಅವರು ಖಡಕ್ ಹಾಗೂ ನಿಷ್ಠಾವಂತ ಅಧಿಕಾರಿಯಾಗಿದ್ದರು.

ಇನ್ನು ಒಂದು ದಿನ ಈ ಮಹಿಳಾ ಅಧಿಕಾರಿ ಕೆಲಸ ಮಾಡುತ್ತಿದ್ದ ರಾಯ್ ಪುರಕ್ಕೆ ಪ್ರಧಾನಿ ಬರುವವರಿದ್ದು, ಅದೇ ವೇಳೆ ಡಿಎಸ್ಪಿ ಅರ್ಚನಾ ಅವರು ತುಂಬು ಗರ್ಭಿಣಿಯಾಗಿದ್ದು, ಹಾಸಿಗೆ ಮಲಗುವಂತಹಸ್ಥಿತಿಯಲ್ಲಿದ್ದರು. ಆದರೆ ಇಂತಹ ಸಮಯದಲ್ಲೂ ಕೂಡ ಕೆಲಸ ಮಾಡು ಅಲ್ಲಿನ ಸುವ್ಯವಸ್ಥೆ ಕಾಪಾಡಿ ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದರು ಇದೆ ಮಹಿಳಾ ಅಧಿಕಾರಿ. ಇನ್ನು ಇದರ ಬಳಿಕ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಡಿಎಸ್ಪಿ ಅರ್ಚನಾ ಅವರಿಗೆ ಆರು ತಿಂಗಳುಗಳ ಕಾಲ ರಜೆ ತೆಗೆದುಕೊಳ್ಳುವ ಅವಕಾಶ ಇತ್ತು. ಆದರೆ ಆಕೆ ತೆಗೆದುಕೊಂಡಿದ್ದು ಕೇವಲ ನಾಲ್ಕು ತಿಂಗಳು ರಜೆ ಮಾತ್ರ. ಮತ್ತೆ ತನ್ನ ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಮರಳಿದ ಅರ್ಚನಾ ಅವರು ಬೇರೆ ಅಧಿಕಾರಿಗಳು ಅಚ್ಚರಿಗೊಳ್ಳುವಂತೆ ಮಾಡಿದ್ದರು. ಅರ್ಚನಾ ಅವರ ಅಪ್ಟಿ ಬೇರೊಂದು ಊರಿನಲ್ಲಿ ಕೆಲಸದಲ್ಲಿದ್ದ ಕಾರಣ ತಮ್ಮ ಮಗುವನ್ನ ನೋಡಿಕೊಳ್ಳುವುದರ ಜೊತೆಗೆ ಕರ್ತವ್ಯದಲ್ಲಿಯೂ ನಿರತರಾಗಿದ್ದರು.

ಇನ್ನು ಇದೆಲ್ಲದರ ನಡುವೆಯೇ ವಾರಕ್ಕೆರಡು ದಿನ ರಾತ್ರಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಅಧಿಕಾರಿ ಅರ್ಚನಾ ಅವರ ಮೇಲೆ ಬಿತ್ತು. ರಾತ್ರಿ ಪೂರ್ತಿ ಇಡೀ ನಗರವನ್ನೆಲ್ಲಾ ಸುತ್ತಾಡಿ ಕರ್ತವ್ಯ ಕಾಪಾಡಬೇಕಾದ ಜವಾಬ್ದಾರಿ ಡಿಎಸ್ಪಿ ಅರ್ಚನಾ ಅವರ ಮೇಲಿತ್ತು. ಇನ್ನು ನಾಲ್ಕು ತಿಂಗಳ ಹಸುಗೂಸು ಬೇರೆ. ಆಗ ಈ ಮಹಿಳಾ ಅಧಿಕಾರಿ ಮಾಡಿದ್ದೇನು ಗೊತ್ತಾ ? ಡಿಎಸ್ಪಿ ಅರ್ಚನಾ ಅವರು ತಮ್ಮ ಕಂದಮ್ಮನನ್ನ ಮಡಿಲಲ್ಲೇ ಮಲಗಿಸಿಕೊಂಡು ಮಗುವಿನ ಆರೈಕೆಯ ಜೊತೆಗೆ ನಗರದಲ್ಲೆಲ್ಲಾ ರೌಂಡ್ಸ್ ಹಾಕುತ್ತಾ ಕರ್ತವ್ಯ ನಿಷ್ಠೆ ಸಹ ಮೆರೆದು ಕಾನೂನಿನ ಸುವ್ಯವಸ್ಥೆ ಮಾಡುತ್ತಿದ್ದರು. ಸ್ನೇಹಿತರೇ, ಕರ್ತವ್ಯವೇ ದೇವರೆಂದು ಕೆಲಸ ಮಾಡುವ ಇಂತಹ ಅಧಿಕಾರಿಗಳು ಸಿಗುವುದು ತೀರಾ ಕಡಿಮೆ. ಡಿಎಸ್ಪಿ ಅರ್ಚನಾ ಅವರಿಗೆ ಹ್ಯಾಟ್ಸಾಪ್ ಹೇಳಲೇಬೇಕು..