ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಪ್ರೀತಿಯ ಮನೆ ಹೇಗಿದೆ ಎಲ್ಲಿದೆ ಗೊತ್ತಾ ?

Cinema
Advertisements

ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ನಾಯಕ ನಟನಾಗಿ ಭಡ್ತಿ ಪಡೆದವರು ಬ್ಲಾಕ್ ಕೋಬ್ರಾ ಖ್ಯಾತಿಯ ನಟ ದುನಿಯಾ ವಿಜಯ್. ಅಲ್ಲಿಯವರೆಗೂ ಸಣ್ಣ ಪುಟ್ಟ ರೋಲ್ ಗಳಲ್ಲಿ ಅಭಿನಯಿಸುತ್ತಿದ್ದ ನಟ ವಿಜಯ್, ದುನಿಯಾ ಚಿತ್ರದ ಬಳಿಕ ದುನಿಯಾ ಎಂಬುದು ಅವರ ಹೆಸರಿನೊಂದಿಗೆ ಬೆರೆತು ಹೋಗಿದೆ. ಇನ್ನು ಇವತ್ತಿಗೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ಫೇಮಸ್ ನಟನಾಗಿ ಹೆಸರು ಮಾಡಿದ್ದಾರೆ ಎಂದರೆ ಅದರ ಹಿಂದೆ ಅವರ ದೊಡ್ಡ ಪರಿಶ್ರಮವೇ ಇದೆ.

[widget id=”custom_html-4″]

Advertisements

ಕಷ್ಟ, ನೋವು, ಅವಮಾನಗಳನ್ನ ಎದುರಿಸಿ ಸ್ಟಾರ್ ನಟನಾಗಿ ಬೆಳೆದಿರುವ ದುನಿಯಾ ವಿಜಯ್ ಅವರು ಕಟ್ಟಿಸಿರುವ ಈಗಿನ ಮನೆ ಹೇಗಿದೆ ಗೊತ್ತಾ..ಸ್ನೇಹಿತರೇ, ಬಿಆರ್.ವಿಜಯ ಕುಮಾರ್ ಎಂಬುದು ದುನಿಯಾ ವಿಜಯ್ ಅವರ ನಿಜವಾದ ಹೆಸರು. ತನ್ನ ತಂದೆಗೆ ತುಂಬಾ ಹೆದುರುತ್ತಿದ್ದ ವಿಜಯ್ ಅವರು ತಮ್ಮ ಶಾಲಾ ದಿನಗಳಲ್ಲಿ ಶಾಲೆಗೆ ಚಕ್ಕರ್ ಒಡೆದು ಸೆಕೆಂಡ್ ಆಪ್ ಸಿನಿಮಾ ನೋಡುತ್ತಿದ್ದರಂತೆ. ಇನ್ನು ಸಿನಿಮಾ ನಟನೆ ಕಡೆ ತುಂಬಾ ಆಕರ್ಷಿತರಾಗಿದ್ದ ದುನಿಯಾ ವಿಜಯ್ ಅವರು ಫೈಟ್ ಮಾಸ್ಟರ್ ಅಸಿಸ್ಟೆಂಟ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ.

[widget id=”custom_html-4″]

ಬಳಿಕ ಸಣ್ಣ ಪುಟ್ಟ ವಿಲನ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಯ್, ಸೂರಿ ಅವರ ದುನಿಯಾ ಚಿತ್ರದ ಮುಖಾಂತರ ಸ್ಯಾಂಡಲ್ವುಡ್ ನಲ್ಲಿ ನಟನಾಗಿ ಗುರುತಿಸಿಕೊಳ್ಳುತ್ತಾರೆ. ಇನ್ನು ಸಾಕಷ್ಟು ಕಷ್ಟಗಳ ನಡುವೆ ಬೆಳೆದು ಬಂದಿರುವ ದುನಿಯಾ ವಿಜಯ್ ಅವರು ಬೆಂಗಳೂರಿನ ಕತ್ರಿಗುಪ್ಪೆಯಲಿ ವಾಸಮಾಡುತ್ತಿದ್ದಾರೆ. ಇನ್ನು ತಮ್ಮ ಪತ್ನಿಯ ವಿಚಾರದಲ್ಲಿ ಸುದ್ದಿಯಾಗಿದ್ದ ದುನಿಯಾ ವಿಜಯ್ ಅವರ ಜೀವನದಲ್ಲಿ ಈಗ ಸಮಸ್ಯೆಗಳು ಪರಿಹಾರವಾಗಿದ್ದು ಸುಖ ಜೀವನ ನಡೆಸುತ್ತಿದ್ದಾರೆ.

ಬಡತನದಲ್ಲೇ ಬೆಳೆದು ಬಂದಿರುವ ದುನಿಯಾ ವಿಜಯ್ ಅವರು ಸಾಮಾಜಿಕ ಕಳಕಳಿ ಹೊಂದಿದ್ದು ಕಷ್ಟ ಅಂತ ಬಂದವರಿಗೆ ಸಹಾಯದ ಹಸ್ತ ಚಾಚಿದ್ದಾರೆ. ಇನ್ನು ದುನಿಯಾ ವಿಜಯ್ ಅವರು ಕತ್ರಿಗುಪ್ಪೆಯಲ್ಲಿರುವ ಮನೆಗೆ ಬಂದ ಮೇಲೆ ಸ್ವತಃ ತಾವೇ ನಿರ್ದೇಶಸಿ ನಟಿಸಿರುವ ಸಲಗ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಅವಮಾನ ಕಷ್ಟಗಳ ನಡುವೆ ಬೆಳೆದು ಬಂದ ದುನಿಯಾ ವಿಜಯ್ ಈಗ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವುದು ಅವರ ಪ್ರತಿದಿನದ ಶ್ರಮಕ್ಕೆಸಿಕ್ಕ ಫಲವಾಗಿದೆ. ಸ್ನೇಹಿತರೇ, ದುನಿಯಾ ವಿಜಯ್ ಅವರ ಯಾವ ಸಿನಿಮಾ ನಿಮಗೆ ತುಂಬಾನೇ ಇಷ್ಟವಾಯಿತು ಎಂದು ನಿಮ್ಮ ಅನಿಸಿಕೆ ತಿಳಿಸಿ..