10 ವರ್ಷಗಳ ಕಾಲ ಕಾನ್ಸ್ಟೇಬಲ್ ಆಗಿ ಕೆಲಸ ಮಾಡಿದ ವ್ಯಕ್ತಿ ಈಗ ಐಪಿಎಸ್ ಅಧಿಕಾರಿ ! ಆಗಿದ್ದೇಗೆ ಗೊತ್ತಾ ?

Inspire
Advertisements

ಸ್ನೇಹಿತರೇ, ಛಲ ಹಾಗೂ ಧೈರ್ಯದಿಂದ ಮುನ್ನುಗ್ಗಿದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು, ಯಾವ ಹಂತಕ್ಕೆ ಬೇಕಾದರೂ ಏರಬಹುದು, ಯಾವ ಕನಸನ್ನ ಬೇಕಾದರೂ ಈಡೇರಿಸಕೊಳ್ಳಬಹುದು ಎಂಬುದಕ್ಕೆ ಈ ಗುಜರಿ ವ್ಯಾಪಾರಿಯ ಮಗನೇ ನೈಜ ನಿದರ್ಶನ. ಉತ್ತರಪ್ರದೇಶಕ್ಕೆ ಸೇರಿದ ಹಾಪುರ್ ಜಿಲ್ಲೆಯ ಪಿಲ್ಖುವಾ ಹಳ್ಳಿಗೆ ಸೇರಿದ ಫ್ಹಿರೋಜ್ ಆಲಂ ಎಂಬುವವರು ಕಾನ್ಸ್ಟೇಬಲ್ ನಿಂದ ಐಪಿಎಸ್ ಅಧಿಕಾರಿ ಆದ ಸ್ಫೂರ್ತಿಯ ಸ್ಟೋರಿ ಇದು. ಹೌದು, ಈ ಫ್ಹಿರೋಜ್ ಆಲಂ ಅವರು ದೆಹಲಿಯ ಪೊಲೀಸ್ ಇಲಾಖೆಯಲ್ಲಿ 2011 ರಿಂದ, ಅಂದರೆ ಕಳೆದ ಹತ್ತು ವರ್ಷಗಳಿಂದ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

[widget id=”custom_html-4″]

Advertisements

ಹೌದು, ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಫ್ಹಿರೋಜ್ ಆಲಂ ಅವರಿಗೆ ತಾನೂ ಕೂಡ ಐಪಿಎಸ್ ಅಧಿಕಾರಿ ಆಗಲೇಬೇಕು ಎಂಬ ಕನಸು ಅವರಲ್ಲಿ ಇತ್ತು. ಹತ್ತು ವರ್ಷಗಳ ಕಾಲ ಕಾನ್ಸ್ಟೇಬಲ್ ಆಗಿ ಕೆಲಸ ಮಾಡಿದ ಫ್ಹಿರೋಜ್ ಆಲಂ ಅವರು UPSC ಪರೀಕ್ಷೆಗಾಗಿ ತಮ್ಮ ಕೆಲಸದ ನಡುವೆಯೂ ಕಷ್ಟಪಟ್ಟು ಓದುತ್ತಾರೆ. ಆರು ಬಾರಿ ಆಲಂ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಯತ್ನ ಪಟ್ಟು ಕೊನೆಗೆ ಆರನೇ ಬಾರಿ ಕಳೆದ ವರ್ಷ ತಾನೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಆಲಂ ಅವರು ಅದೇ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಆಫ್ ಪೊಲೀಸ್ ಕಮಿಷನರ್ (ACP) ಆಗಿ ಮತ್ತೆ ಸೇವೆಗೆ ಸೇರಿಕೊಳ್ಳುತ್ತಾರೆ. ಇನ್ನು ಫ್ಹಿರೋಜ್ ಆಲಂ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು, ಇವರ ತಂದೆ ಓದಿರೋದು ಕೇವಲ ಆರನೇ ತರಗತಿವರೆಗೂ ಮಾತ್ರ. ಜೀವನಕ್ಕಾಗಿ ಇವರ ತಂದೆ ಗುಜರಿ ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದರು.

[widget id=”custom_html-4″]

ಇದರೆಲ್ಲದರ ನಡುವೆ ಪೊಲೀಸ್ ಪೇದೆ ಆಗಿದ್ದ ಫ್ಹಿರೋಜ್ ಆಲಂ ಅವರು ಕಷ್ಟಪಟ್ಟು ಓದಿ ಈಗ ಐಪಿಎಸ್ ಪಾಸ್ ಮಾಡಿದ್ದು ಈಗ ACP ಆಗಿ ಮತ್ತೆ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ಫ್ಹಿರೋಜ್ ಆಲಂ ಅವರು ಹೇಳಿರುವ ಪ್ರಕಾರ ನಾನು ಈಗಾಗಲೇ ಹತ್ತು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ, ಇನ್ನು ಮುಂದೆಯೂ ಕೂಡ ನಾನು ಉತ್ತಮ ಸೇವೆ ಸಲ್ಲಿಸುವೆ ಎಂದು ಆಲಂ ಹೇಳಿದ್ದಾರೆ. ನಾನು ಅಧಿಕಾರಿಗಳನ್ನ ಬಹಳ ಹತ್ತಿರದಿಂದ ನೋಡಿರುವುದರಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದೇ ಹೇಗೆ ಎಂದು ಚೆನ್ನಾಗಿ ತಿಳಿದಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇನ್ನು ನಾನು ಕಾನ್ಸ್ಟೇಬಲ್ ಆಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿರುವ ಕಾರಣ ಪೊಲೀಸ್ ಪೇದೆಗಳ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಅರಿತಿದ್ದು, ಅವರಿಗಾಗಿ ಏನನ್ನಾದರೂ ಮಾಡಲು ಯೋಚಿಸುತ್ತೇನೆ ಎಂದು ಆಲಂ ಅವರು ಹೇಳಿದ್ದಾರೆ.ಕಾನ್ಸ್ಟೇಬಲ್ ನಿಂದ ಐಪಿಎಸ್ ಆದ ಫ್ಹಿರೋಜ್ ಆಲಂ ಅವರ ಈ ಸ್ಟೋರಿ ಎಷ್ಟೋ ಯುವಕರಿಗೆ ಸ್ಫೂರ್ತಿಯಾಗಲಿದೆ.