ತಿಮಿಂಗಿಲ ವಾಂ’ತಿಯಿಂದ ಇವ್ರು ಕೋಟಿ ಕೋಟಿ ಆಸ್ತಿಯ ಒಡೆಯರಾಗಿದ್ದೇಗೆ ! ಈ ವಾಂ’ತಿಯಲ್ಲಿರುವುದೇನು ಗೊತ್ತಾ ?

Kannada Mahiti
Advertisements

ಯು’ದ್ಧದಿಂದ ಬೇಸತ್ತಿದ್ದ, ನ’ಲುಗಿದ, ಸುಸ್ತಾಗಿದ್ದ ಆ ಪುಟ್ಟ ರಾಷ್ಟ್ರದಲ್ಲಿ ತುತ್ತು ಅನ್ನಕ್ಕೂ ಹಾ’ಹಾಕಾ’ರ. ಅಲ್ಲಿಯ ಬಡತನ ಬೇಗುದಿ ಹೇಳತೀರದು. ಈ ನಡುವೆ ಮೀನುಗಾರಿಕೆ ಕಾಯಕ ಮಾಡ್ತಿದ್ದ 35 ಬಡಪಾಯಿಗಳು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಗಳಾಗಿದ್ದಾರೆ. ಆ ಫಿಷರ್ ಮ್ಯಾನ್ ಜಾಕ್‍ಪಾಟ್ ಕಥೆ ಏನು ಅನ್ನೋದನ್ನು ಹೇಳ್ತೀವಿ ಕೇಳಿ. ಅದೃಷ್ಟ ಖುಲಾಯಿಸಿದ್ರೆ ಯಾರು ಏನು ಬೇಕಾದ್ರೂ ಆಗಬಹುದು. ಅಷ್ಟೆ ಅಲ್ಲ ಲಕ್ಷ್ಮಿ ಮನೆ ಬಾಗಿಲಿಗೆ ಯಾವಾಗ ಬೇಕಾದರೂ ಬರಬಹುದು. ಆದರೆ, ಯಾರಿಗೇ ಆದರೂ ಕಾಯಕ ನಿಷ್ಠೆ ಬೇಕೇ ಬೇಕು. ಇಲ್ಲಿ ನಡೆದಿದ್ದು ಇದೇ ಕಥೆ. ಆದ್ರೆ ಇದೊಂದು ಅಚ್ಚರಿಯ ವಿಚಾರ. ಸುಮ್ಮನೇ ಈ ಬಡವರು ರಾತ್ರೋ ರಾತ್ರಿ ಶ್ರೀಮಂತರಾಗಿಲ್ಲ. ತಮ್ಮ ಕಾಯಕದಲ್ಲಿ ನಿಷ್ಠೆಯಿಂದ ತೊಡಗಿಕೊಂಡಿದ್ದವರಿಗೆ ಅದೃಷ್ಟ ಒ’ದ್ದುಕೊಂಡು ಬಂದಿದೆ. ಇದು ಪುಟ್ಟ ರಾಷ್ಟ್ರ ಯೆಮನ್. ಇಲ್ಲಿ ಮ’ದ್ದು ಗುಂ’ಡುಗಳ ಸದ್ದೇ ಹೆಚ್ಚು. ಕಾರಣ ಇಲ್ಲಿಯ ಬಂ’ಡುಕೋ’ರರು ಸರ್ಕಾರವನ್ನು ಕೆ’ಡವಿ ತಮ್ಮದೇ ಸರ್ಕಾರ ರಚಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಬಂ’ಡುಕೋ’ರರ ನಡೆ ಅಕ್ಕಪಕ್ಕದ ಅರಬ್ ರಾಷ್ಟ್ರಗಳ ನಿದ್ದೆ’ಗೆಡಿಸಿದೆ. ಹೇಗಾದ್ರೂ ಮಾಡಿ ಬಂ’ಡುಕೋರರ ಸದೇ ಬಡಿಯಲೇ ಬೇಕು ಅನ್ನುವುದು ಸೌದಿ ಅರೇಬಿಯಾ ಸೇರಿದಂತೆ ಇತರೆ ಅರಬ್ ರಾಷ್ಟ್ರಗಳ ತೀರ್ಮಾನ. ಇದರ ಪರಿಣಾಮವೇ ದಿನ ಬೆಳಗಾದರೆ ಯೆಮನ್‍ನಲ್ಲಿ ಮ’ದ್ದು ಗುಂ’ಡುಗಳ ಸದ್ದು.

[widget id=”custom_html-4″]

Advertisements

ವಿಮಾನ ಹಾರಾಟದ ಸದ್ದು ಕೇಳಿದ್ರೂ ಸಾಕು ಎಲ್ಲಿ ವೈ’ಮಾನಿಕ ದಾ’ಳಿ ಆಯ್ತೋ ತಮ್ಮ ಪ್ರಾ’ಣ ಹೋಯ್ತೋ ಅಂತ ಭ’ಯ ಬೀಳ್ತಾರೆ. ಕೆಲಸ ಇಲ್ಲದೇ ಹೊಟ್ಟೆಗೆ ಹಿಟ್ಟಿಲ್ಲದೇ ನ’ರಳುವ ಸ್ಥಿತಿ ಅಲ್ಲಿಯ ಜನರದ್ದು. ಇತ್ತೀಚಿನ ವರ್ಷದಲ್ಲಿ ಸುಮಾರು 85 ಸಾವಿರ ಮಕ್ಕಳು ಅ’ಪೌಷ್ಠಿಕತೆ ಇಂದ ಸಾ’ವನ್ನ’ಪ್ಪಿದ್ದಾರೆ ಅಂದ್ರೆ ಆ ರಾಷ್ಟ್ರದ ಬಡತನ, ನ’ರಳಾ’ಟ ಎಂತಹದ್ದು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಈ ರಾಷ್ಟ್ರದಲ್ಲಿ ಕಂಡುಬಂದಿದ್ದೇ ಫೀಷರ್ ಮ್ಯಾನ್ ಜಾಕ್‍ಪಟ್ ಸ್ಟೋರಿ. ಅವರ ಕಾಯಕವೇ ಮೀನುಗಾರಿಕೆ. ತುತ್ತು ಅನ್ನ ಸಿಗಬೇಕು, ಹೊಟ್ಟೆ ತುಂಬಬೇಕು ಅಂದ್ರೆ ಸಮುದ್ರಕ್ಕೆ ಇಳಿಯಲೇ ಬೇಕು, ಮೀನುಗಾರಿಕೆ ಮಾಡಲೇಬೇಕು. ಅಂದು ಕೂಡ ತುತ್ತು ಅನ್ನದ ದುಡಿಮೆಗಾಗಿಯೇ 35 ಜನರ ತಂಡ ಯೆಮನ್‍ನ ದಕ್ಷಿಣ ತೀರದಲ್ಲಿ ಮೀನುಗಾರಿಕೆಗೆ ಇಳಿದಿತ್ತು. ಮೀನು ಸಿಗುತ್ತವೋ ಇಲ್ಲವೋ, ಮೀನು ಸಿಗದಿದ್ದರೇ ತಮ್ಮ ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸುವುದು ಹೇಗೆ ಅನ್ನೋ ಚಿಂತೆ ಅವರನ್ನು ಕಾಡ್ತಾ ಇತ್ತು. ಅವರ ಅದೃಷ್ಟಕ್ಕೆ ಕಡಲಿಗೆ ಇಳಿದ ಸ್ವಲ್ಪ ಸಮಯದಲ್ಲಿಯೇ ಅಲ್ಪ ಸ್ವಲ್ಪ ಮೀನು ಬಲೆಗೆ ಬಿದ್ದಾಗಿತ್ತು. ಆದ್ರೆ, ಆದ್ರೆ ಬೋಟ್‍ನಲ್ಲಿ ಇದ್ದ ಒಬ್ಬ ಮೀನುಗಾರನಿಗೆ ದೂರದಲ್ಲಿ ಒಂದು ದೊಡ್ಡ ಗಾತ್ರದ ಮೀನು ಕಾಣಿಸುತ್ತೆ. ದೊಡ್ಡ ಗಾತ್ರದ ಮೀನು ಕಂಡ ತಕ್ಷಣವೇ 35 ಜನರ ತಂಡ ಭಯ ಬೀಳಲಿಲ್ಲ. ಎಲ್ಲಿ ತಮ್ಮ ಬೋಟ್ ಪಲ್ಟಿ ಮಾಡಿಸುತ್ತೋ ತಮ್ಮನ್ನು ತಿಂದು ಬಿಡುತ್ತೋ ಅನ್ನೋ ಯೋಚನೆ ಸುಳಿಯಲಿಲ್ಲ. ಸ್ವಲ್ಪ ಸಮಯ ಅದು ಯಾವ ಮೀನಿರಬಹುದು ಅಂತ ಅಲ್ಲೇ ಇದು ಗಮನಿಸಿದ್ದಾರೆ. ನಿಧಾನಕ್ಕೆ ಆ ಮೀನಿನ ಹತ್ತಿರ ಹತ್ತಿರ ಹೋಗುತ್ತಾರೆ.

[widget id=”custom_html-4″]

ಅದು ನೋಡಿದ್ರೆ, ಬದುಕಿರುವ ಮೀನಲ್ಲ, ದೈತ್ಯಾಕಾರದ ತಿಮಿಂಗಿಲ ಸ’ತ್ತು ತೇಲುತ್ತಿದೆ. ಇದು ತಿನ್ನಲು ಬರಲ್ಲ, ಅದನ್ನು ಸಮುದ್ರದಿಂದ ಎಳೆದೊಯ್ದ್ರೆ ಮಾರಾಟ ಮಾಡಲು ಆಗಲ್ಲ ಅಂತ ಸುಮ್ಮನಾಗಿದ್ದಾರೆ. ಆದ್ರೆ, ಸ’ತ್ತ ತಿಮಿಂಗಿಲದಿಂದ ವಿಪರೀತ ಗ’ಬ್ಬು ವಾಸನೆ ಬರುತ್ತಿತ್ತು. ಆ ವಾಸನೆಯಲ್ಲಿಯೇ ಅದೃಷ್ಟ ಇತ್ತು. ನಿಧಿಯೊಂದು ಅವರನ್ನು ಕೈ ಬೀಸಿ ಕರೆಯುತ್ತಿತ್ತು. ಸ’ತ್ತ ದೊಡ್ಡ ಗಾತ್ರದ ತಿಮಿಂಗಿಲ ಮೀನಿಂದ ಹೊರಬರುತ್ತಿದ್ದ ವಿ’ಪರೀತ ಗ’ಬ್ಬು ವಾಸನೆ ಮೀನುಗಾರರಲ್ಲಿ ಅನುಮಾನ ಹುಟ್ಟಿಸಿಬಿಟ್ಟಿದೆ. ಇಲ್ಲಿಯವರೆಗೆ ಅದೆಷ್ಟೋ ತಿಮಿಂಗಿಲ ಮೀನು ಸಮುದ್ರದಲ್ಲಿ ಸ’ತ್ತು ತೆಲುವುದನ್ನು ನೋಡಿದ್ರು. ಆದ್ರೆ, ಇಷ್ಟೊಂದು ಗಬ್ಬು ವಾಸನೆ ಅವರ ಜೀವಮಾನದಲ್ಲಿಯೇ ನೋಡಿರಲಿಲ್ಲ. ಹಾಗಾದ್ರೆ ಏನಿರಬಹುದು, ಯಾವುದಾದ್ರೂ ಸಮುದ್ರ ಜೀವಿಯನ್ನು ತಿಮಿಂಗಿಲ ತಿಂ’ದಿರಬಹುದೆ. ಅದೇ ಸಮಯಕ್ಕೆ ತಿಮಿಂಗಿಲ ಸ’ತ್ತಿ’ರಬಹುದೆ, ಆ ಸಮುದ್ರ ಜೀವಿ ತಿಮಿಂಗಿಲದ ಹೊಟ್ಟೆಯೊಳಗೆ ಜೀರ್ಣವಾಗದೇ ಈ ರೀತಿ ವಾಸನೆ ಬರುತ್ತಿರಬಹುದೆ…ಹೀಗೆ ನಾನಾ ರೀತಿಯ ಅನುಮಾನ 35 ಜನ ಮೀನುಗಾರರಲ್ಲಿ ಹುಟ್ಟಿಸಿತ್ತು. ಅದೇನದು ಅಂತ ನೋಡೇ ಬಿಡೋಣ ಅಂತ ಆ ಮೀನನ್ನು ಸಮುದ್ರದ ದಡಕ್ಕೆ ಎಳೆದೊಯ್ಯುತ್ತಾರೆ. ಸಮುದ್ರದ ದಡಕ್ಕೆ ಮೀನನ್ನು ಎಳೆ ತಂದ 35 ಜನರ ತಂಡ ಕ’ತ್ತ’ರಿಸಲು ಆರಂಭಿಸುತ್ತೆ.

[widget id=”custom_html-4″]

ಅಲ್ಲಿರುವ ಅಕ್ಕಪಕ್ಕದ ಜನ ಇವರಿಗೆ ಮಾಡಲು ಬೇರೆ ಕೆಲಸ ಇಲ್ಲವೇ ಅಂತ ಆ ಗ’ಬ್ಬು ವಾಸನೆ ಸಹಿಸಲಾಗದೇ ದೂರ ಓಡೋಡಿ ಹೋಗ್ತಾರೆ. ಇತ್ತ ಮೀನುಗಾರರು ವಾಸನೆ ಸಹಿಸಿಕೊಳ್ಳುತ್ತಾ ತಿಮಿಂಗಿಲ ಕ’ತ್ತ’ರಿಸುತ್ತಾ ಸಾಗುತ್ತಾರೆ. ಆರಂಭದಲ್ಲಿ ಏನೂ ಕಂಡುಬರಲ್ಲ. ಆದ್ರೆ, ಅವರ ಕುತೂಹಲ ಅಷ್ಟಕ್ಕೆ ನಿಂತಿಲ್ಲ. ನೋಡೇ ಬಿಡೋಣ ಅಂತ ಮತ್ತಷ್ಟು ಕ’ತ್ತ’ರಿಸಿದ್ದಾರೆ. ಆಗ ಅವರ ಕಣ್ಣಿಗೆ ಬಿದ್ದಿದ್ದೇ ಸಮುದ್ರ ಚಿನ್ನ. ಅದೇನದು ಸಮುದ್ರ ಚಿನ್ನ ಅನ್ನೋದನ್ನು ಹೇಳ್ತೀವಿ ಕೇಳಿ. ಹೌದು, ತಿಮಿಂಗಿಲ ಕ’ತ್ತ’ರಿಸಿದಾಗ ಮೀನುಗಾರರಿಗೆ ಸಿಕ್ಕಿದ್ದೇ ಸಮುದ್ರ ಚಿನ್ನ ಎಂದೇ ಗುರುತಿಸಿಕೊಳ್ಳುತ್ತಿರುವ ತಿಮಿಂಗಿಲ ವಾಂತಿ. ಅದನ್ನು ಅಂಬಗ್ರ್ರಿಸ್ ಅಂತ ಕರೆಯಲಾಗುತ್ತದೆ. ಅದನ್ನು ಒಮ್ಮೆ ನೋಡಿದ ಮೀನುಗಾರರು ಹೌ’ಹಾರಿ ಬಿಟ್ಟಿದ್ದಾರೆ. ತಮ್ಮ ಅದೃಷ್ಟ ಖುಲಾಯಿಸಿದ್ದು ಅವರಿಗೆ ಅದಾಗಲೇ ಅರ್ಥವಾಗಿ ಬಿಡುತ್ತೆ. ಅದಕ್ಕೆ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಬೆಲೆ ಇದೆ ಅನ್ನೋದು ಅವರಿಗೆ ತಿಳಿಯುತ್ತೆ. ಅದನ್ನು ಹೊರ ತೆಗೆದು ತೂಕ ಹಾಕಿದಾಗ ಬಂದಿದ್ದು ಬರೋಬ್ಬರಿ 127 ಕೆಜಿ. ಅಬ್ಬಾ! ಅದೇನು ಅದೃಷ್ಟ ನೋಡಿ. ತಾವಾಯಿತು ತಮ್ಮ ಕೆಲಸ ಆಯಿತು ಅಂತ ಇದ್ದವರಿಗೆ ಅದೃಷ್ಟ ಲಕ್ಷ್ಮೀ ಹುಡಿಕೊಂಡು ಮನೆ ಬಾಗಿಲಿಗೆ ಹೇಗೆ ಬಂದೇ ಬಿಟ್ಲು ಅಂಥ.

[widget id=”custom_html-4″]

ಯೆಮನ್ ಮೀನುಗಾರಿಗೆ ತಿಮಿಂಗಿಲ ವಾಂತಿ ಸಿಕ್ಕಿದೆ ಅನ್ನೋದು ದೊಡ್ಡ ದೊಡ್ಡ ವ್ಯಾಪಾರಿಗಳಿಗೂ ಗೊತ್ತಾಗಿಬಿಡುತ್ತೆ. ಪ್ರಸಿದ್ಧ ಅರಬ್ ವ್ಯಾಪಾರಿಯೊಬ್ಬರು ಅದನ್ನು ಖರೀದಿಸುತ್ತಾರೆ. ಒಂದೊಂದು ಕೆಜಿ ತಿಂಗಿಲ ವಾಂತಿಗೆ ಕೋಟಿಗಟ್ಟಲೇ ಹಣ ಇದೆ. ಅಂಥದ್ರಲ್ಲಿ ಇವರಿಗೆ ಸಿಕ್ಕಿದ್ದು ಬರೊಬ್ಬರಿ 127 ಕೆಜಿ. ಅದೆಷ್ಟು ಕೋಟಿ ಕೋಟಿ ಹಣ ಮೀನಿಗಾರರ ಪಾಲಿಗೆ ಸಿಕ್ಕಿರಬಹುದು ಅನ್ನೋದನ್ನು ಉಹಿಸಿನೋಡಿ. ಜೀವಮಾನದಲ್ಲಿ ಇಂತಹವೊಂದು ಜಾಕ್‍ಪಟ್ ಹೊಡೆಯುತ್ತೆ, ತಮ್ಮ ಜೀವನವೇ ಬದಲಾಗುತ್ತೆ ಅಂತ ಯಾವತ್ತೋ ಕನಸು ಮನಸಿನಲ್ಲಿಯೂ ಯೋಚಿಸಿದವರಲ್ಲ. ಆದ್ರೆ ದಿಢೀರ್ ಶ್ರೀಮಂತಿಕೆ ಅವರನ್ನು ಬದಲಿಸಿಲ್ಲ. ಒಂದು ಕೆಜಿ ತಿಮಿಂಗಿಲ ವಾಂತಿಯ ಬೆಲೆಯೇ ಕೋಟಿ ಕೋಟಿ ರೂಪಾಯಿ ಅಂದ್ರೆ ಅದಕ್ಕೇಕೆ ಅಷ್ಟೊಂದು ಬೆಲೆ, ಅದರ ಉಪಯೋಗ ಆದ್ರೂ ಏನು ಅನ್ನೋದು ಅನುಮಾನ ಬರುತ್ತೆ. ಅಷ್ಟಕ್ಕೊ ಅದರ ಉಪಯೋಗ ಏನು ಅನ್ನೊದನ್ನು ಜಾಲಾಡುತ್ತಾ ಹೋದರೆ ಸಿಗುವುದು ದುಬಾರಿ ಬೆಲೆಯ ಸುಗಂಧ ದ್ರವ್ಯ. ಹೌದು, ದುಬಾರಿ ಬೆಲೆಯ ಸುಗಂಧ ದ್ರವ್ಯಕ್ಕೆ ತಿಮಿಂಗಿಲ ವಾಂತಿ ಬಳಸಲಾಗುತ್ತೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೀನುಗಾರರು ಕೋಟಿ ಕೋಟಿ ಒಡೆಯರಾಗಿದ್ದಾರೆ. ಅದೆಷ್ಟೇ ಕೋಟಿ ಹಣ ಬಂದ್ರೂ ಅವನ ಜೀವನ ಶೈಲಿ ಬದಲಾಗುತ್ತಿಲ್ಲ, ಬಡತನ ಕಲಿಸಿದ ಪಾಠ ಮರೆಯಲಿಲ್ಲ ಅನ್ನೋದೆ ಹೆಮ್ಮೆಯ ವಿಷಯ.