ಪಾಕೆಟ್ ಕಾಫಿ ಬೆಲೆ 7ಸಾವಿರ !ಇನ್ನು ಕೆಜಿ ಬಾಳೆಹಣ್ಣು ಬೆಲೆ ಕೇಳಿದ್ರೆ ಶಾಕ್! ಸರ್ವಾಧಿಕಾರಿ ದೇಶದಲ್ಲಿ ಆಹಾರ ಕ್ಷಾಮ..

Kannada News

ಸ್ನೇಹಿತರೇ, ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಬಗ್ಗೆ ನೀವು ಕೇಳಿರುತ್ತೀರಿ..ಇವನ ಹುಚ್ಚು ಕಾನೂನಿಗಳಿಂದಾಗಿ ಹುಚ್ಚುದೊರೆ ಅಂತಲೇ ಕಿಮ್ ಜಾಂಗ್ ಜಗತ್ತಿನಲ್ಲಿ ಪೇಮಸ್ ಆಗಿದ್ದಾನೆ. ಇನ್ನು ಮಿಲಿಟರಿಯಲ್ಲಿ ಸೂಪರ್ ಪವರ್ ರಾಷ್ಟ್ರವಾಗಬೇಕೆಂಬ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದ ಕಾರಣ ಜಗತ್ತಿನ ಹಲವು ದೇಶಗಳು ಉತ್ತರ ಕೊರಿಯಾ ಮೇಲೆ ನಿರ್ಭಂದ ಹೇರಿವೆ..

ಇದೇ ಕಾರಣದಿಂದಾಗಿ ಉತ್ತರ ಕೊರಿಯಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಇನ್ನು ಉತ್ತರ ಕೊರಿಯಾ ಕೊರೋನಾ ಸೇರಿದಂತೆ ಚಂಡಮಾರುತ ಹಾಗೂ ಪ್ರವಾಹದ ಪರಿಣಾಮವಾಗಿ ಆಹಾರ ಸಮಸ್ಯೆ ಹೆಚ್ಚಾಗಿದೆ. ಎಷ್ಟರ ಮಟ್ಟಿಗೆ ಎಂದರೆ, 1 ಕೆಜಿ ಬಾಳೆಹಣ್ಣಿನ ಬೆಲೆ 3300ರೂ ಆದರೆ, ಒಂದು ಬ್ಲಾಕ್ ಟೀ ಪಾಕೆಟ್ ನ ಬೆಲೆ 7 ಸಾವಿರ ಆಗಿದೆ..ಉತ್ತರ ಕೊರಿಯಾದ ಸಿರಿವಂತರು ಹೇಗೋ ಜೀವನ ಮಾಡುತ್ತಾರೆ, ಆದರೆ ಬಡವರು ಬದುಕುವುದಾದರೂ ಹೇಗೆ ಹೇಳಿ..ಇನ್ನು ಉತ್ತರ ಕೊರಿಯಾದಲ್ಲಿ ಇಷ್ಟೊಂದು ಬಾರೀ ಆಹಾರ ಸಮಸ್ಯೆ ಉಂಟಾಗಿರುವುದೇಕೆ ಗೊತ್ತಾ..

ಇನ್ನು ಉತ್ತರ ಕೊರಿಯಾ ಕೊರೋನಾ ಕಾರಣದಿಂದಾಗಿ ತನ್ನ ದೇಶದ ಗಡಿಯನ್ನು ಮುಚ್ಚಿದ್ದು ರಫತ ಮಾಡುವ ವಸ್ತುಗಳ ಸಂಖ್ಯೆ ಕಡಿಮೆಯಾಗಿದ್ದು ಆಮಧೀಕರಣ ನಡೆಯುತ್ತಿಲ್ಲ. ಇದು ಭಾರೀ ಆರ್ಥಿಕ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಇನ್ನು ಬಾರೀ ಚಂಡಮಾರುತ, ಪ್ರವಾಹದ ಕಾರಣದಿಂದಾಗಿ ರೈತರು ಬೆಳೆದ ಬೆಳೆಗಳೆಲ್ಲಾ ಹಾಳಾಗಿತ್ತು. ಈಗ ಆಹಾರದ ಉತ್ಪನ್ನಗಳ ಬೆಲೆಯೇ ಹೆಚ್ಚಾಗಿರುವ ಕಾರಣ ಅಲ್ಲಿನ ಸರ್ಕಾರ ರಸಗೊಬ್ಬರವನ್ನ ಕೊಳ್ಳಲು ಆಗುತ್ತಿಲ್ಲ, ಆ ಕಡೆ ಆಮದು ಕೂಡ ಮಾಡಿಕೊಳ್ಳಲಾಗುತ್ತಿಲ್ಲ.

ಇದೇ ಕಾರಣದಿಂದಾಗಿ ಉತ್ತರ ಕೊರಿಯಾ ತನ್ನ ದೇಶದ ರೈತರಿಗೆ ಪ್ರತೀ ದಿನ ಎರಡು ಲೀಟರ್ ನಷ್ಟು ತಮ್ಮ ಮೂತ್ರವನ್ನೇ ಸಂಗ್ರಹ ಮಾಡಿ ರಸಗೊಬ್ಬರ ತಯಾರು ಮಾಡುವಂತೆ ಆದೇಶ ಮಾಡಿದೆ. ಮಿಲಿಟರಿಯಲ್ಲಿ ಸೂಪರ್ ಪವರ್ ರಾಷ್ಟ್ರವಾಗಬೇಕೆಂದು ಅದಕ್ಕಾಗಿಯೇ ತುಂಬಾ ಹಣವನ್ನ ಉಪಯೋಗಿಸಿ, ಆಹಾರ ಉತ್ಪನ್ನಗಳ ಕಡೆ ನಿರ್ಲಕ್ಷ್ಯ ಮಾಡಿದ್ದ ಕಾರಣ ಬಾರೀ ಆಹಾರ ಸಮಸ್ಯೆ ಉಂಟಾಗಿದೆ.