ರೈತ ಮಹಿಳೆಯ ಕಮಾಲ್-ದೇಶಿಯ ವಾಷಿಂಗ್ ಮಷಿನ್ ನಲ್ಲಿ ಬೆಣ್ಣೆ ಕೂಡ ತೆಗೆಯಬಹುದು ! ಹೇಗೆ ಅಂತ ನೋಡಿ..

Inspire
Advertisements

ಸ್ನೇಹಿತರೆ, ವಾಷಿಂಗ್ ಮಷಿನ್ ನ್ನ ಮನೆಯಲ್ಲಿರುವ ಬಟ್ಟೆಗಳನ್ನ ವಾಷ್ ಮಾಡಲು ಬಳಸುತ್ತಾರೆ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ನೀವು ಎಂದಾದರೂ ವಾಷಿಂಗ್ ಮಷಿನ್ ನಲ್ಲಿ ಮೊಸರನ್ನ ಹಾಕಿ ಬೆಣ್ಣೆ ತೆಗೆಯುವುದನ್ನ ನೋಡಿದ್ದೀರಾ.! ಇದು ನಿಮಗೆ ವಿಚಿತ್ರ ಅನ್ನಿಸಿದರೂ ನೀವು ನಂಬಲೇಬೇಕಾದ ಸತ್ಯ. ಹೌದು, ಈ ದೇಶಿಯ ವಾಷಿಂಗ್ ಮಷಿನ್ ಬಂಡಿ ಬಂಡಿ ಬಟ್ಟೆಗಳನ್ನ ವಾಷ್ ಮಾಡುವುದರ ಜೊತೆಗೆ ಮೊಸರನ್ನ ಕಡಿದು ಬೆಣ್ಣೆ ಮಾಡುವ ಕೆಲಸವನ್ನ ಸಹ ಮಾಡುತ್ತದೆ.

Advertisements

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕಅರಸಿನಕೆರೆಯ ಕೆ.ಶೆಟ್ಟಳ್ಳಿ ಗ್ರಾಮದಲ್ಲಿನ ರೈತ ದಂಪತಿಗಳೊಬ್ಬರ ಮನೆಯಲ್ಲಿ ಈ ದೇಶಿಯ ವಾಷಿಂಗ್ ಮಷಿನ್ ಇದೆ. ಇದರಿಂದ ಬಟ್ಟೆಗಳನ್ನ ಕ್ಲೀನ್ ಮಾಡಬಹದು, ಜೊತೆಗೆ ಮೊಸರಿನಿಂದ ಬೆಣ್ಣೆಯನ್ನು ಕೂಡ ಮಾಡಬಹುದು. ವಿಡಿಯೋದಲ್ಲಿರುವಂತೆ ಆ ರೈತ ದಂಪತಿಗಳು ಹೇಳುವ ಪ್ರಕಾರ ನೋಡುವ ಎಂದು ಒಂದು ಬಾರಿ ಮೊಸರನ್ನ ದೇಶಿಯ ವಾಷಿಂಗ್ ಮಷಿನ್ ಗೆ ಹಾಕಿದ್ದು ಬೆಣ್ಣೆ ಬಂದಿದೆ. ಅದು ಕೇವಲ ೧೫ ನಿಮಿಷಗಳಲ್ಲಿ. ಬಳಿಕ ಬೆಣ್ಣೆ ಚೆನ್ನಾಗಿ ಬಂದಿದ್ದು, ಇದೆ ಪ್ರಯೋಗವನ್ನ ಮುಂದುವರಿಸಿದ್ದಾರೆ.

ವಾಷಿಂಗ್ ಮಷಿನ್ ನಲ್ಲಿ ಬೆಣ್ಣೆಯನ್ನ ಹೇಗೆ ತೆಗೆಯುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಇದೆ ಅಲ್ಲವೇ..ತಿಳಿಯಲು ಕೆಳಗಿರುವ ಈ ವಿಡಿಯೋ ನೋಡಿ..

ಒಂದು ಬಾರಿಗೆ 20 ಲೀಟರ್ ಮೊಸರನ್ನ ಈ ದೇಶಿಯ ವಾಷಿಂಗ್ ಮಷಿನ್ ನಲ್ಲಿ ಹಾಕಬಹುದಾಗಿದ್ದು, 4 ರಿಂದ 5 ಸೇರು ಬೆಣ್ಣೆ ತೆಗೆಯಬಹುದಾಗಿದೆ ಎಂದು ಆ ದಂಪತಿಗಳು ಹೇಳುತ್ತಾರೆ. ಬಳಿಕ ಇದೆ ವಾಷಿಂಗ್ ಮಷಿನ್ ನ್ನ ಬಿಸಿನೀರಿನಲ್ಲಿ ತೊಳೆದು ಬಟ್ಟೆಗಳನ್ನ ವಾಷ್ ಮಾಡುತ್ತೇವೆ ಎಂದು ಆ ರೈತ ಮಹಿಳೆ ಹೇಳಿದ್ದಾರೆ.ನೋಡಿದ್ರಾ ಹೇಗಿದೆ ದೇಶಿಯ ವಾಷಿಂಗ್ ಮಷಿನ್ ಮಹತ್ವ. ರೈತ ಮಹಿಳೆ ಮಡಿದ ಈ ಹೊಸಪ್ರಯೋಗ ನಿಮಗೆ ಇಷ್ಟವಾಗಿದ್ದಲ್ಲಿ ಕಾಮೆಂಟ್ ಮಾಡಿ ಶೇರ್ ಮಾಡಿ..