ಮಹತ್ವದ ಯೋಜನೆ ಘೋಷಿಸಿದ ಮೋದಿ – 5 ತಿಂಗಳು 80 ಕೋಟಿ ಜನಕ್ಕೆ ಇದೆಲ್ಲಾ ಉಚಿತ !

News

ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು, ಬಡವರಿಗೆ ಕೆಲವೊಂದು ಉಚಿತ ಯೋಜನೆಯ ಘೋಷಣೆಗಳನ್ನ ಮಾಡಿದ್ದಾರೆ. ಇನ್ನು ದೇಶದ ಜನರಲ್ಲಿ ಮನವಿ ಮಾಡಿಕೊಂಡಿರುವ ಮೋದಿಯವರು ಕೊರೋನಾದ ಗಂಭೀರತೆಯನ್ನ ಅರಿತು ಎಚ್ಚರದಿಂದಿರಬೇಕು ಎಂದು ಹೇಳಿದ್ದಾರೆ.

ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿದ್ದ ಜನರ ಹಸಿವು ನೀಗಿಸುವ ಸಾಲುವಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನ ಜಾರಿಗೊಳಿಸಲಾಗಿತ್ತು. ಇನ್ನು ಮಳೆಗಾಲ ಆರಂಭವಾಗಲಿರುವ ಕಾರಣ ಕೃಷಿ ಚಿಟುವಟಿಕೆಗಳು ಹೆಚ್ಚಾಗಲಿದ್ದು, ಜೊತೆಗೆ ಹಬ್ಬ ಆಚರಣೆಗಳು ಕೂಡ ಹೆಚ್ಚಾಗಲಿವೆ. ಇದರಿಂದ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಹಾಗಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನ ನವೆಂಬರ್ ತಿಂಗಳಿನವರೆಗೂ ವಿಸ್ತರಿಸಲಾಗುವುದು ಎಂಬ ಮಹತ್ವದ ಆದೇಶವನ್ನ ಹೊರಡಿಸಿದ್ದಾರೆ ಮೋದಿ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅನ್ವಯ ಇನ್ನು ಇದೆ ಜುಲೈನಿಂದ ನವೆಂಬರ್ ವರೆಗೆ ಅಂದರೆ ೫ ತಿಂಗಳು (ಪ್ರತೀ ತಿಂಗಳಿಗೆ) ಕುಟುಂಬದ ಪ್ರತೀ ಸದಸ್ಯನಿಗೂ ತಲಾ ೫ ಕೆಜಿ ಗೋಧಿ/ಅಕ್ಕಿಯನ್ನ ಉಚಿತವಾಗಿ ೫ ತಿಂಗಳು ನೀಡಲಾಗುವುದು. ಇದಾರೆ ಜೊತೆಗೆ ಒಂದು ಕೆಜಿ ಬೇಳೆಕಾಳು ಸಹ ಉಚಿತವಾಗಿ ದೊರೆಯಲಿದೆ. ಇನ್ನು ಈ ಯೋಜನೆಯಿಂದ ೯೦ ಸಾವಿರ ಕೋಟಿ ವೆಚ್ಚ ಆಗಲಿದೆ ಎಂದು ಹೇಳಲಾಗಿದೆ.

ಇನ್ನು ಒಂದೇ ದೇಶ ಒಂದೇ ರೇಷನ್ ಕಾರ್ಡ್ ಯೋಜನೆ ಜಾರಿಯಾಗಲಿದ್ದು ಇದರಿಂದ ಕೆಲಸಕ್ಕಾಗಿ ಬೇರೆ ನಗರ ರಾಜ್ಯಗಳಿಗೆ ಹೋಗುವ ಬಡವರಿಗೆ ಇದು ಅನುಕೂಲವಾಗಲಿದೆ. ಈ ಯೋಜನೆಯಿಂದ ಯಾವುದೇ ಯಾವುದೇ ರಾಜ್ಯಕ್ಕೂ ವಲಸೆ ಹೋದಲ್ಲಿ ಅಲ್ಲಿಯೇ ರೇಷನ್ ತೆಗೆದುಕೊಳ್ಳಬಹುದಾಗಿದೆ.