ರೌಡಿ ಬೇಬಿ ಅಮೂಲ್ಯ ಅವರ ತಂದೆ ಇವರೇ ನೋಡಿ? ಮೊದಲ ಸೀರಿಯಲ್ ಯಾವುದು ಗೊತ್ತಾ ?

Entertainment Uncategorized

ಕನ್ನಡ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ಪ್ರತೀ ವಾರ ಅತ್ತ್ಯತ್ತಮ ಟಿಆರ್ಪಿ ರೇಟ್ ನ್ನ ಹೊಂದಿದ್ದು ಹೆಚ್ಚೆಚ್ಚು ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ಅಭಿನಯಿಸಿರುವ ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ. ಇನ್ನು ರೌಡಿ ಬೇಬಿ ಪಾತ್ರದಲ್ಲಿ ಮಿಂಚಿರುವ ಅಮೂಲ್ಯ ಪಾತ್ರವಂತೂ ಕರ್ನಾಟಕದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಮೂಲ್ಯ ಪಾತ್ರದಾರಿಯ ನಿಜವಾದ ಹೆಸರು ನಿಶಾ ಮಿಲನ ಎಂದು. ಇನ್ನು ಪಕ್ಕಾ ಬಜಾರಿಯಂತೆ ಸಿರಿಯಲಿ ಪಾತ್ರದಲ್ಲಿ ಮೂಡಿಬಂದಿರುವ ಅಮೂಲ್ಯ ನಿಜಜೀವನದಲ್ಲಿ ಮಾತ್ರ ತಮ್ಮ ಪಾತ್ರಕ್ಕೆ ತದ್ವಿರುದ್ದವಾಗಿದ್ದಾರೆ.

ಮಾಧ್ಯಮ ಕುಟುಂಬದಲ್ಲಿ ಬೆಳೆದು ಬಂದಿರುವ ಅಮೂಲ್ಯ ಅಲಿಯಾಸ್ ನಿಶಾ ಮಿಲನ ತುಂಬಾ ಸರಳ ವ್ಯಕ್ತಿತ್ವ ಮತ್ತು ಸೈಲೆಂಟ್ ವ್ಯಕ್ತಿತ್ವದವರಾಗಿದ್ದಾರೆ. ಧಾರಾವಾಹಿಯಲ್ಲಿ ಯಾವಾಗಲು ತನ್ನ ತಂದೆಯನ್ನ ಗೋಳು ಹೊಯ್ದುಕೊಳ್ಳುವ ಪಾತ್ರದಲ್ಲಿ ಮಿಂಚಿರುವ ಅಮೂಲ್ಯ ಅವರಿಗೆ ತಂದೆಯೆಂದರೆ ತುಂಬಾ ಪ್ರೀತಿ. ನಿಶಾ ಮಿಲನ ಅವರ ತಂದೆಯ ಹೆಸರು ರವಿಕೃಷ್ಣನ್, ತಾಯಿಯ ಹೆಸರು ಉಷಾ. ೯ ಜೂನ್ ೨೦೦೦ನೇ ವರ್ಷದಲ್ಲಿ ಜನಿಸಿದ ನಟಿ ನಿಶಾ ಮಿಲನ ಅವರಿಗೆ ಕೇವಲ ೨೧ವರ್ಷ. ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ. ಚಿಕ್ಕಂದಿನಿಂದಲೇ ರಂಗ ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಇತ್ತು ನಟಿ ಅಮೂಲ್ಯಗೆ.

ಬಿಕಾಂ ಪದವಿದರಾಗಿರುವ ನಟಿ ನಿಶಾ ಮಿಲನ, ಕನ್ನಡ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸರ್ವ ಮಂಗಳ ಮಾಂಗಲ್ಯ ಎನ್ನೋ ಸೀರಿಯಲ್ ನಲ್ಲಿ ನಿತ್ಯಾ ಅನ್ನೋ ಪಾತ್ರದ ಮೂಲಕ ೨೦೧೮ರಲ್ಲಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ‘ಅಂದೊಂದಿತ್ತು ಕಾಲ’ ಎಂಬ ಸಿನಿಮಾದಲ್ಲಿ ಕೂಡ ನಿಶಾ ಮಿಲನನಟಿಸಿದ್ದಾರೆ. ಈ ಸಿನಿಮಾ ಇನ್ನು ಬಿಡುಗಡೆಯಾಗಬೇಕಿದೆ. ಗಟ್ಟಿಮೇಳದಲ್ಲಿನ ತಮ್ಮ ಪಾತ್ರಕ್ಕಾಗಿ ಜಿ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ ಅಮೂಲ್ಯ ಖ್ಯಾತಿಯ ನಿಶಾ ಮಿಲನ.