ಕೇವಲ 12 ಮಾವಿನ ಹಣ್ಣುಗಳನ್ನ ಬರೋಬ್ಬರಿ 1ಲಕ್ಷ 20ಸಾವಿರಕ್ಕೆ ಮಾರಿದ ಬಾಲಕಿ ! ಹೇಗೆ ಗೊತ್ತಾ ?

Kannada Mahiti

ಸ್ನೇಹಿತರೇ, ಇದು ಹಣ್ಣುಗಳ ರಾಜ ಮಾವಿನಹಣ್ಣುಗಳ ಕಾಲ. ಇನ್ನು ನಾವು ಮಾವಿನಹಣ್ಣುಗಳನ್ನ ಕೊಳ್ಳಲು ಹೋದಾಗ ಅಬ್ಬಬ್ಬಾ ಅಂದರೂ ಕೆಜಿಗೆ ನೂರರಿಂದ 250 ಅಥ್ವಾ ಹೆಚ್ಚೆಂದರೆ 300ರೂಗಳವರೆಗೆ ಕೊಡಬಹುದೇನೋ..ಆದರೆ ಇಲ್ಲೊಬ್ಬ ಹುಡುಗಿ ತನ್ನಲ್ಲಿದ್ದ ಹನ್ನೆರಡು ಮಾವಿನ ಹಣ್ಣುಗಳನ್ನ ಲಕ್ಷ ಲಕ್ಷಕ್ಕೆ ಮಾರಾಟ ಮಾಡಿ ಅಚ್ಚರಿ ಮೂಡಿಸಿದ್ದಾಳೆ. ಹಾಗಾದ್ರೆ ಆ ಮಾವಿನಹಣ್ಣುಗಳ್ಳಲ್ಲಿ, ಅಂತದ್ದೇನಿದೆ, ಲಕ್ಷ ಲಕ್ಷ ಕೊಟ್ಟು ಕೇವಲ ೧೨ ಮಾವಿನಹಣ್ಣುಗಳನ್ನ ಆ ವ್ಯಕ್ತಿ ಕೊಂಡಿದ್ದೇಕೆ ಎಂಬ ಕುತೂಹಲ ಇದ್ದೆ ಇದೆ ಆಲ್ವಾ..ನಂಬಲಅಸಾಧ್ಯವಾದರೂ ಇದು ಸತ್ಯ. ಇನ್ನು ಹೀಗೆ ಲಕ್ಷ ಲಕ್ಷಕ್ಕೆ ಮಾವಿನಹಣ್ಣುಗಳನ್ನ ಮಾರಿದ ಹುಡುಗಿಯ ಹೆಸರು ತುಳಸಿ ಕುಮಾರಿ ಎಂದು. ಈಕೆ ಜೇಮ್ ಶೆಡ್ ಪುರದವಳು.

ಇನ್ನು ಬಾಲಕಿ ತುಳಸಿ ಕುಮಾರಿ ಐದನೇ ತರಗತಿರಿಯಲ್ಲಿ ಓದುತ್ತಿದ್ದಾಳೆ. ಓದಿನಲ್ಲಂತೂ ತುಂಬಾ ಮುಂದಿದ್ದಾಳೆ. ಇನ್ನು ಕೊರೋನಾದಿಂದಾಗಿ ತಿಂಗಳು ಗಟ್ಟಲೆ ರಾಜ್ಯಗಳು ಲಾಕ್ ಡೌನ್ ಆಗಿದ್ದು ನಮಗೆಲ್ಲಾ ಗೊತ್ತಿರುವ ವಿಚಾವೇ. ಇನ್ನು ಇದೆ ಕಾರಣದಿಂದಾಗಿ ಶಾಲೆಗಳು ಬಂದ್ ಆಗಿದ್ದು ಆನ್ಲೈನ್ ಕ್ಲಾಸ್ ಗಳು ಶುರುವಾಗಿದ್ದವು. ಇನ್ನು ಆನ್ಲೈನ್ ಕ್ಲಾಸ್ ಕೇಳಬೇಕೆಂದರೆ ಸ್ಮಾರ್ಟ್ ಮೊಬೈಲ್ ಇರಲೇಬೇಕು. ಆದರೆ ಜೀವನ ಸಾಗಿಸುವುದೇ ಕಷ್ಟವಾಗುವ ಸಮಯದಲ್ಲಿ ಮೊಬೈಲ್ ಕೊಳ್ಳಲು ಸಾಧ್ಯವೇ..ಹಾಗಾಗಿ ಬಾಲಕಿ ತುಳಸಿ ಬಳಿಯೂ ಸ್ಮಾರ್ಟ್ ಮೊಬೈಲ್ ಇಲ್ಲದೆ ಆನ್ಲೈನ್ ಕ್ಲಾಸ್ ಗೆ ಅಟೆಂಡ್ ಆಗಲು ಸಾಧ್ಯವಾಗಲಿಲ್ಲ. ಹೇಗಾದರೂ ಮಾಡಿ ಮೊಬೈಲ್ ತೆಗೆದುಕೊಳ್ಳಬೇಕೆಂದು ಲೋಕಲ್ ಮಾಧ್ಯಮ ಬಳಿಯಲ್ಲಿ ತನಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಳು.ಆದರೆ ಈ ಬಾಲಕಿಯ ಮನವಿಗೆ ಯಾರೂ ಸ್ಪಂದಿಸಲಿಲಲ್ಲ. ಆಗ ಈ ಬಾಲಕಿ ಹೇಗಾದರೂ ಮಾಡಿ ಮೊಬೈಲ್ ಕೊಂಡುಕೊಳ್ಳಬೇಕೆಂದು ಮಾವಿನ ಹಣ್ಣುಗಳ ವ್ಯಾಪಾರಕ್ಕೆ ಇಳಿಯುತ್ತಾಳೆ.

ತುಳಸಿ ಮಾವಿನ ಹಣ್ಣುಗಳನ್ನ ಮಾರುತ್ತಿರುವಾಗ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಬಾಲಕಿಯ ಬಳಿ 12 ಮಾವಿನ ಹಣ್ಣುಗಳನ್ನ ತೆಗೆದುಕೊಂಡು ಒಂದು ಹಣ್ಣಿಗೆ ಹತ್ತು ಸಾವಿರದಂತೆ ಬರೋಬ್ಬರಿ 1ಲಕ್ಷದ 20ಸಾವಿರ ರುಗಳನ ನೀಡಿ, ನಿನ್ನ ಬಗ್ಗೆ ನನಗೆ ತಿಳಿದಿದ್ದು ಈ ಹಣದಿಂದ ಸ್ಮಾರ್ಟ್ ಮೊಬೈಲ್ ಖರೀದಿ ಮಾಡುವಂತೆ ಹೇಳಿ ಹೊರಟುಹೋಗುತ್ತಾರೆ. ಇನ್ನು ಈ ಹಣವನ್ನ ಆ ವ್ಯಕ್ತಿ ತುಳಸಿಯ ಬ್ಯಾಂಕ್ ಖಾತೆಗೆ ಅದೇ ಸ್ಥಳದಲ್ಲೇ ವರ್ಗಾವಣೆ ಮಾಡುತ್ತಾರೆ. ಇನ್ನು ಇಷ್ಟೊಂದು ಹಣ ಕೊಟ್ಟು ಮಾನವೀಯತೆ ಮೆರೆದ ವ್ಯಕ್ತಿಯ ಹೆಸರು ಅಮೇಯ ಏಟೆ ಎಂದು. ಇವರು ಶಿಕ್ಷಣ ಸಂಸ್ಥೆಯೊಂದರ ನಿರ್ದೇಶಕರಾಗಿದ್ದಾರೆ. ಒಳ್ಳೆಯ ಉದ್ದೇಶಕ್ಕಾಗಿ ಸತತವಾಗಿ ಪ್ರಯತ್ನ ಪಟ್ಟಲ್ಲಿ ದೇವರೇ ಇಂತಹ ವ್ಯಕ್ತಿಗಳ ಕಡೆಯಿಂದ ಸಹಾಯ ಮಾಡಿಸುತ್ತಾನೆ ಎಂಬುದಕ್ಕೆ ಬಾಲಕಿ ತುಳಸಿಯ ಈ ಸ್ಟೋರಿಯೇ ನೈಜ ನಿದರ್ಶನ.