ಚಿನ್ನ ಪ್ರಿಯರಿಗೆ ಬಾರಿ ಗುಡ್ ನ್ಯೂಸ್.!ಚಿನ್ನದ ಬೆಲೆ ಬಾರಿ ಇಳಿಮುಖ..ಎಷ್ಟಾಗಿದೆ ನೋಡಿ?

Kannada News

ಸ್ನೇಹಿತರೆ, ಇದೀಗ ದೇಶದಲ್ಲಿ ಬಂಗಾರದ ನಿಗದಿತ ಬೆಲೆ ಯಥಾಸ್ಥಿತಿಯಾಗಿ ಕಾಯ್ದುಕೊಂಡಿದೆ ಎಂದು ಈಗ ತಿಳಿದುಬಂದಿದೆ. ಬಂಗಾರದ ಬೆಲೆ ಇಷ್ಟರಮಟ್ಟಿಗೆ ಒಂದೇ ರೀತಿ ಯಥಾಸ್ಥಿತಿಯಲ್ಲಿ ಇರೋದು ಆಶ್ಚರ್ಯವಾಗಿದೆ. ನಮ್ಮ ಭಾರತದಲ್ಲಿ ನಿನ್ನೆ ಚಿನ್ನದ 22 ಕ್ಯಾರೆಟ್ ಬೆಲೆ 1 ಗ್ರಾಂಗೆ 46,740 ರೂಪಾಯಿ ನಿಗದಿಯಾಗಿತ್ತು. ಅದೇ ರೀತಿ ಇಂದು ಕೂಡ ಇದೇ ದರವು ಚಾಲ್ತಿಯಲ್ಲಿದೆ. ಹಾಗೆ 24 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂ ಗೆ 47,740 ರೂ. ನಿಗದಿ ಆಗಿದ್ದು, ಇಂದು ಅದೇ ಬೆಲೆ ಚಾಲ್ತಿಯಲ್ಲಿದೆ. ಹೌದು ಕಳೆದ ಮೂರು ದಿನಗಳ ಹಿಂದೆ ಬೆಳ್ಳಿ ಮತ್ತು ಚಿನ್ನದ ದರದಲ್ಲಿ ಬಾರಿ ಇಳಿಮುಖ ಕಂಡಿದ್ದು, ಚಿನ್ನದ ಹಾಗೆ ಬೆಳ್ಳಿ ದರ ಕೂಡಾ ಒಂದೇ ರೀತಿ ಚಾಲ್ತಿಯಲ್ಲಿದೆ. ನಿನ್ನೆಯಷ್ಟೇ ಒಂದು ಕೆಜಿ ಬೆಳ್ಳಿಗೆ 64,600 ರೂಪಾಯಿ ದರವಿತ್ತು ಅದರಂತೆ ಇಂದು ಅದೇ ದರ ಚಾಲ್ತಿಯಲ್ಲಿದೆ.
ಹೌದು ಸ್ನೇಹಿತರೆ ನೀವೇನಾದರೂ ಇದೀಗ ಚಿನ್ನವನ್ನು ಖರೀದಿ ಮಾಡಲು ಮುಂದಾಗುತ್ತಿದ್ದರೆ, ಯಾವ ಯಾವ ನಗರಗಳಲ್ಲಿ ಎಷ್ಟು ಚಿನ್ನದ ಬೆಲೆಯು ನಿಗದಿಯಾಗಿದೆ ಎಂಬುದಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ನಮ್ಮ ಬೆಂಗಳೂರಿನಲ್ಲಿ 10 ಗ್ರಾಂ ನ ಬೆಲೆ 24 ಕ್ಯಾರೆಟ್ ಗೋಲ್ಡ್ ಹೊಂದಿದ್ದು, 48,770 ರೂಪಾಯಿ ಇದೆಯಂತೆ. ಜೊತೆಗೆ 22 ಕ್ಯಾರೆಟ್ ಬಂಗಾರಕ್ಕೆ 10 ಗ್ರಾಂ ನ ಬೆಲೆ 44,700 ರೂಪಾಯಿ ಬೆಲೆ ಇದೆ. ಜೊತೆಗೆ ಮೈಸೂರಿನಲ್ಲಿ ಹಾಗೂ ಮಂಗಳೂರಿನಲ್ಲಿ ಇದೇ ಬೆಲೆ ನಿಗದಿಯಾಗಿದ್ದು, ನಮ್ಮ ದೇಶದಲ್ಲಿ ಹೆಚ್ಚು ಬಂಗಾರ ಕೊಳ್ಳುವವರ ಸಂಖ್ಯೆಯಿದೆ. ಆಪತ್ಕಾಲದಲ್ಲಿ ಬಂಗಾರ ನೆರವಿಗೆ ಬರುತ್ತದೆಂದು ಹೆಚ್ಚು ಜನರು ಈ ಚಿನ್ನದ ಮೇಲೆ ಹಣ ಹೂಡಿಕೆ ಮಾಡುತ್ತಾರೆ. ಅತ್ತ ಆಂಧ್ರಪ್ರದೇಶದಲ್ಲಿ ಬಂಗಾರದ ಬೆಲೆ ನೋಡುವುದಾದರೆ, ಅಲ್ಲಿ ಕೂಡ ಬಂಗಾರದ ಬೆಲೆ ಕಳೆದ ಮೂರ್ನಾಲ್ಕು ದಿನಗಳಿಂದ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿರಿಸಿದೆ ಎಂದು ಹೇಳಲಾಗಿದೆ. ವಿಶಾಖಪಟ್ಟಣಂ, ಹೈದರಾಬಾದ್, ಭುಬನೆಸ್ವರ್, ಪುಣೆ ಕೇರಳದಲ್ಲಿಯೂ ಕೂಡ ಇಂದಿನ ದಿನ 24 ಕ್ಯಾರೆಟ್ ಗೋಲ್ಡ್ ನ ಬೆಲೆ 48000 ಹಾಗೂ 49000 ಆಸುಪಾಸಿನಲ್ಲಿ ಬೆಲೆ ನಿಗದಿತವಾಗಿದೆ.

ಮುಂಬೈನಲ್ಲಿ 47,740 ರೂ. ಚೆನ್ನೈನಲ್ಲಿ 49,160 ರೂ. ಆದರೆ ದೆಹಲಿಯಲ್ಲಿ 51500 ರೂಪಾಯಿ ನಿಗದಿ ಆಗಿದೆ. ಹೀಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಬಂಗಾರದ ಬೆಲೆಗಳು ಸ್ವಲ್ಪ ವ್ಯತ್ಯಾಸ ಕಾಣುತ್ತವೆ. ಆದರೆ ಮುಖ್ಯ ವಿಷಯ ಏನಪ್ಪಾ ಅಂದ್ರೆ, ಸಾಮಾನ್ಯ ಚಿನ್ನದ ಬೆಲೆ ಹಾಗೂ ಹಾಲ್ಮಾರ್ಕ್ ಚಿನ್ನದ ಬೆಲೆಯ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ನಿಮಗೆ ಹಾಲ್ಮಾರ್ಕ್ ಮಾಡಿದ ಚಿನ್ನದ ಬೆಲೆ ನೀಡಲು ಯಾರು ಕೂಡ ಹೆಚ್ಚು ಶುಲ್ಕವನ್ನು ವಿಧಿಸುವುದಿಲ್ಲ. ಸಾಮಾನ್ಯ ಬಂಗಾರವನ್ನು ಮಾರಾಟ ಮಾಡುವ ದರ ಕೂಡ ಇದೇ ಆಗಿರುತ್ತದೆ

. ಮತ್ತೆ ಚಿನ್ನದ ವಿಷಯದಂತೆ ಬೆಳ್ಳಿ ವಿಷಯಕ್ಕೆ ಬಂದರೆ, ದೇಶದಲ್ಲಿ ಈಗ 1ಕೆಜಿ ಬೆಳ್ಳಿಗೆ 64,600 ನಿಗದಿಯಾಗಿದೆ. ನಮ್ಮ ಬೆಂಗಳೂರು ಮತ್ತು ಆಸುಪಾಸಿನ ನಗರಗಳಲ್ಲಿ ಒಂದು ಕೆಜಿ ಬೆಳ್ಳಿಗೆ 64000 ರೂಪಾಯಿ ಇದೆ. ಬೇರೆ ಸ್ಟೇಟ್ ಗಳಲ್ಲಿ 68,000 ರೂಪಾಯಿ ನಿಗದಿಯಾಗಿದೆ ಎಂದು ಕೇಳಿಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ, ಮತ್ತು ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು….