ಹಿ’ಟ್ಲ’ರ್ ಕಲ್ಯಾಣ ಸೀರಿಯಲ್ ಖ’ಡಕ್ ವಿ’ಲನ್ ಇನ್ಸ್‌ಪೆಕ್ಟರ್ ದೇವ್ ಅಸಲಿಗೆ ಯಾರು ಗೊತ್ತಾ.?

Entertainment

ಕನ್ನಡ ಕಿರುತೆರೆಯ ಜನಮೆಚ್ಚಿದ್ದ ಚಾನೆಲ್ ಗಳಲ್ಲಿ ಒಂದಾದ ಜೀ-ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನೂತನ ಧಾರವಾಹಿ ಹಿ’ಟ್ಲ’ರ್ ಕಲ್ಯಾಣ ಪ್ರಸಾರವಾದ ಕೆಲವೇ ವಾರಗಳಲ್ಲಿ ಹೆಚ್ಚಿನ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದು ಸಿನಿಮಾ ಶೈಲಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಣವಾಗುತ್ತಿರುವುದು ಈ ಧಾರಾವಾಹಿಯ ವಿಶೇಷ. ಇನ್ನು ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ದಿಲೀಪ್ ರಾಜ್ ಅವರ ಲುಕ್ ಹಾಗೂ ಅವರ ಅಭಿನಯ ವೀಕ್ಷಕರಲ್ಲಿ ಮೋಡಿ ಮಾಡಿದೆ. ಇನ್ನು ಈ ಸಿರಿಯಲ್ಲಿ ನಟಿಸಿರುವ ಪ್ರತಿಯೊಂದು ಪಾತ್ರಗಳಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗಿದೆ. ಅಂತಹ ಪಾತ್ರಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿ ವಿ’ಲನ್ ಆಗಿ ಮಿಂಚಿರುವ ದೇವ್ ಅವರ ಪಾತ್ರ..

ಇನ್ನು ಇನ್ಸ್ಪೆಕ್ಟರ್ ದೇವ್ ಪಾತ್ರದಲ್ಲಿ ವೀಕ್ಷಕರ ಗಮನ ಸೆಳೆಯುವಂತೆ ಮಾಡಿರುವುದು ನಟ ಶೌರ್ಯ ಶಶಾಂಕ್ ಉಂಬ್ರೆ ಎಂದು. ಪೊಲೀಸ್ ಅಧಿಕಾರಿಯಾಗಿದ್ದರು ವಿ’ಲನ್ ರೀತಿ ನಡೆದುಕೊಳ್ಳುವ, ಅದಾಗಲೇ ಮದ್ವೆಯಾಗಿದ್ದರು ಮತ್ತೊಬ್ಬರನ್ನ ಪ್ರೀತಿಸಿ ಮದ್ವೆಯಾಗುವಂತೆ ನಾಟಕ ಮಾಡುವ ಶೌರ್ಯ ಶಶಾಂಕ್ ಅವರ ಪಾತ್ರ ಹೆಚ್ಚು ಗಮನ ಸೆಳೆದಿದೆ. ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ನಟ ಶೌರ್ಯ ಶಶಾಂಕ್ ಇದಕ್ಕೂ ಮುಂಚೆ ನಟಿಸಿದ್ದ ಪಾತ್ರಗಳಿಗಿಂತ, ಈ ಸೀರಿಯಲ್ ನಲ್ಲಿ ನಟಿಸಿರುವ ನನ್ನ ಪಾತ್ರ ತುಂಬಾ ವಿಭಿನ್ನವಾಗಿದ್ದು ನನಗಿದ್ದ ಗುಂಗುರು ಕೂದಲನ್ನ ಹೇರ್ ಸೆಟ್ ಮಾಡಿಸಿ ಸ್ಟ್ಯಲಿಶ್ ಪೊಲೀಸ್ ಅಧಿಕಾರಿಯ ಲುಕ್ ಪಡೆದುಕೊಂಡಿರುವೆ ಎಂದು ಹೇಳಿದ್ದಾರೆ.

ಇನ್ನು ನೆ’ಗಟೀವ್ ಶೇಡ್ ನಲ್ಲಿ ಮಿಂಚಿರುವ ಇನ್ಸಪೆಕ್ಟರ್ ದೇವ್ ಅಲಿಯಾಸ್ ಶೌರ್ಯ ಶಶಾಂಕ್ ಅಪ್ಪಟ ರಂಗಭೂಮಿ ಕಲಾವಿದ. ನಾಟಕಗಳು ಸೇರಿದಂತೆ ಮಾಡೆಲಿಂಗ್ ನಲ್ಲಿ ಕೂಡ ಮಿಂಚುತ್ತಿದ್ದಾರೆ. ಚೆನ್ನೈನಲ್ಲಿ ಓದಿರುವ ಹುಡುಗನಾದ್ರು ಕನ್ನಡದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇನ್ನು ಬಹುಭಾಷಾ ಕಲಾವಿದನಾಗಿರುವ ಶೌರ್ಯ ತಮಿಳಿನ ಧಾರಾವಾಹಿಯಲ್ಲಿ ಕೂಡ ನೆ’ಗಟೀವ್ ಶೇಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡದಲ್ಲಿ ಇದು ಎರಡನೇ ಧಾರಾವಾಹಿಯಾಗಿದ್ದು ಇದಕ್ಕೆ ಮೊದಲು ಮಂಗಳ ಗೌರಿಯ ಸೀರಿಯಲ್ ನಲ್ಲಿ ಸೈ’ಕೋ ಸೂರ್ಯ ಎಂಬ ಪಾತ್ರದಲ್ಲಿ ಮಿಂಚಿದ್ದಾರೆ. ಇಷ್ಟೇ ಅಲ್ಲ ಬಹುಮುಖ ಪ್ರತಿಭೆಯಾಗಿರುವ ಶೌರ್ಯ ಶಶಾಂಕ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆಯುವ ಕವಿತೆಗಳು ತುಂಬಾನೇ ಫೇಮಸ್ ಆಗಿವೆ. ವಿ’ಲನ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವ ಶೌರ್ಯ ಅವರಿಗೆ ಮುಂದೆ ಕನ್ನಡ ಸಿನಿಮಾ ರಂಗದಲ್ಲಿ ಅವಕಾಶಗಳು ಅರಿಸಿ ಬರುವ ಸಾಧ್ಯತೆಗಳಿವೆ..