ಹಂಸಲೇಖ ಪರ ನಿಂತ ಹೈಕೋರ್ಟ್..ನಾದ ಬ್ರಹ್ಮನಿಗೆ ಮೊದಲನೇ ಜಯ..

Kannada News

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಬರಹಗಾರ ಹಂಸಲೇಖ ಅವರು ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮ ಒಂದರಲ್ಲಿ ಆಡಿದ ಮಾತುಗಳು ಭಾರೀ ವಿ’ವಾದವನ್ನೇ ಸೃಷ್ಟಿಸಿತ್ತು. ಹಂಸಲೇಖ ಪರ ಮತ್ತು ವಿರೋಧದ ಚರ್ಚೆ ನಡೆದಿದ್ದವು. ಈ ವಿಷಯವಾಗಿ ಹಂಸಲೇಖ ವಿರುದ್ಧವಾಗಿ ಬಸವನಗುಡಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಒಮ್ಮೆ ಹಂಸಲೇಖ ಅವರ ವಿಚಾರಣೆಯನ್ನೂ ನಡೆಸಲಾಗಿತ್ತು. ಈಗ ಕರ್ನಾಟಕ ಹೈಕೋರ್ಟ್ ಇದಕ್ಕೆ ತ’ಡೆಯಾಜ್ಞೆ ನೀಡಿದೆ.

ಪೇಜಾವರ ಶ್ರೀಗಳ ಹಾಗೂ ರಾಜಕಾರಣಿಗಳ ವಾಸ್ಥವ್ಯವನ್ನು ಟೀ’ಕಿಸುವ ಭರದಲ್ಲಿ ಪೇಜಾವರ ಶ್ರೀಗಳು ಅವರ ಮನೆಗಳಲ್ಲಿ ಮಾಂ’ಸಾಹಾರ ಸೇವಿಸಲು ಸಾಧ್ಯವೇ? ಎಂದು ಹಸಲೇಖ ವಿ’ವಾದಾ’ತ್ಮಕ ಹೇಳಿಕೆ ನೀಡಿದ್ದರು. ಈ ಮಾತುಗಳು ವೈರಲ್ ಆದದ್ದೇ ತಡ ಇದರ ಪರ ಹಾಗೂ

ವಿರೋಧದ ಚರ್ಚೆಗಳು ಸಾಮಾಜಿಕ ಜಾತಾಣಗಳಲ್ಲಿ ನಡೆದವು. ನಂತರ ನನ್ನ ಮಾತಿನಿಂದ ಯಾರಿಗಾದರೂ ನೋ’ವಾಗಿದ್ದರೆ ನನ್ನನು ಕ್ಷಮಿಸಿ ಎಂದು ಹಂಸಲೇಖ ಕ್ಷಮೆಯಾಚಿಸಿದರು. ಇದು ಅಷ್ಟಕ್ಕೇ ಮುಗಿಯಲಿಲ್ಲ ಹಂಸಲೇಖ ವಿರುದ್ಧ ಬ್ರಾ’ಹ್ಮಣ ಸಮುದಾಯದವರು ಬಸವನಗುಡಿ ಪೊಲೀಸ್ ಠಾಣೆ ಸೇರಿ ಹಲವೆಡೆ ದೂರು ನೀಡಿದ್ದರು.

ನಂತರ ಈ ವಿಷಯವಾಗಿ ಹಂಸಲೇಖ ಅವರ ವಿಚಾರಣೆ ನಡೆಸಲಾಗಿತ್ತು. ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರ, ನಟ ಚೇತನ್ ಮತ್ತು ಕನ್ನಡ ಪರ ಸಂಘಟನೆಗಳು ಹಂಸಲೇಖ ಪರ ನಿಂತರೆ ಕೆಲ ಹಿಂ’ದೂ ಪರ ಸಂಘಟನೆಗಳು ಹಂಸಲೇಖ ವಿರುದ್ಧ ಪ್ರ’ತಿಭ’ಟನೆ ನಡೆಸಿದವು. ಠಾನೆಯ ಎದುರೇ ಇದೆಲ್ಲ ನಡೆದಿತ್ತು.

ಹಂಸಲೇಖ ಪರ ವಕೀಲರು ಪ್ರಕರಣದ ವಿಚಾರಣೆಯನ್ನು ಕೈಬಿಡುವಂತೆ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ ಹಂಸಲೇಖ ವಿಚಾರಣೆಯನ್ನು ನಿಲ್ಲುವಸುವಂತೆ ತಡೆಯಾಜ್ಞೆ ನೀಡಿದೆ. ಈ ಮೂಲಕ ಸದ್ಯ ಹಂಸಲೇಖ ಅವರಿಗೆ ಮೊದಲೇ ನೇ ಹಂತದ ಜಯ ಎಸ್ ಸಿಕ್ಕಿದೆ. ಮುಂದೆ ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಾಗಿದೆ.