ಮಾಸ್ಕ್ ಧರಿಸಿ ಎಂದಿದಕ್ಕೆ ಅಂಗವಿಕಲ ಮಹಿಳೆ ಮೇಲೆ ಅಧಿಕಾರಿ ನಡೆದುಕೊಂಡ ರೀತಿ ನೋಡಿದ್ರೆ ಶಾಕ್ ಆಗ್ತೀರಾ !

News
Advertisements

ಮಹಾಮಾರಿ ಕೊರೋನಾ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಖಡ್ಡಾಯವಾಗಿದೆ. ಆದರೆ ಈ ನಿಯಮಗಳನ್ನ ಸರ್ಕಾರಿ ಅಧಿಕಾರಿಗಳೇ ಪಾಲನೆ ಮಾಡದೆ ದರ್ಪ ತೋರುತ್ತಿದ್ದಾರೆ ಹ್ಯಾಂಡಿಕ್ಯಾಪ್ಟ್ ಮಹಿಳೆಯೊಬ್ಬರು ಮಾಸ್ಕ್ ಧರಿಸಿ ಅಂತ ತಮ್ಮ ಅಧಿಕಾರಿಗೆ ಹೇಳಿದ ಕಾರಣಕ್ಕೆ ಆ ಅಧಿಕಾರಿ ಹಿಂದೂ ಮುಂದೆ ನೋಡದೆ ಆ ಮಹಿಳೆ ಮೇಲೆ ನಡೆದುಕೊಂಡಿರುವ ರೀತಿ ಸಮಾಜವೇ ತಲೆತಗ್ಗಿಸುವಂತಹ ಘಟನೆ ಆಂಧ್ರದಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪ್ರವೋಸೋದ್ಯಮ ಇಲಾಖೆಯ ಓರ್ವ ಅಧಿಕಾರಿಯಾಗಿರುವ ಭಾಸ್ಕರ್ ಎನ್ನುವವರು ಮಾಸ್ಕ್ ಧರಿಸಿರಲಿಲ್ಲ. ಈ ವೇಳೆ ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಹದ್ಯೋಗಿ ದಿವ್ಯಾಂಗ ಮಹಿಳೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಇದರಿಂದ ಕೋಪಗೊಂಡ ಆ ಕಿರಾತಕ ಅಧಿಕಾರಿ ಮಹಿಳೆ ಕುಳಿತಿದ್ದ ಟೇಬಲ್ ಕಡೆ ಹೋಗಿ ಆಕೆಯ ಕೂದಲನ್ನ ಹಿಡಿದು ಎಳೆದಾಡಿ ಅವಮಾನವೀಯವಾಗಿ ನಡೆದುಕೊಂಡಿದ್ದಾನೆ.

ಆದರೆ ಅದೇ ಕಚೇರಿಯಲ್ಲಿದ್ದ ಮತ್ತೊಬ್ಬ ಮಹಿಳಾ ಸಿಬ್ಬಂದಿ ಇದನ್ನ ತಡೆಯುವುದು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಮತ್ತಿಬ್ಬ ಪುರುಷ ಸಿಬ್ಬಂದಿಗಳು ಸುಮ್ಮನೆ ನೋಡುತ್ತಾ ನಿಂತಿದ್ದಾರೆ. ಆಗ ಅಲ್ಲಿಗೆ ಬಂದ ಮತ್ತೊಬ್ಬ ಪುರುಷ ಸಿಬ್ಬಂದಿ ಅಧಿಕಾರಿಯನ್ನ ತಡೆದಿದ್ದು ಅಲ್ಲಿಗೆ ದಿವ್ಯಾಂಗ ಮಹಿಳೆ ಮೇಲೆ ಆತನ ದೌರ್ಜನ್ಯ ನಿಂತಿದ್ದು ಅಲ್ಲಿಂದ ಹೋಗಿದ್ದಾನೆ. ಆದರೆ ಈ ಘಟನೆಯ ಬಳಿಕ ಆ ಮಹಿಳಿಗೆ ಒಂದು ಸಮಾಧಾನದ ಮಾತನ್ನು ಹೇಳುವ ಸೌಜನ್ಯ ಅಲ್ಲಿದ್ದರವರಲ್ಲಿ ಕಂಡುಬರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಇನ್ನು ಆ ಮಹಿಳೆ ದೂರು ನೀಡಿದ್ದು ಆ ಅಧಿಕಾರಿಯನ್ನ ಬಂಧಿಸಿದ್ದು ಸರ್ಕಾರ ಸೇವೆಯಿಂದ ಅಮಾನತು ಮಾಡಿದೆ ಎಂದು ಹೇಳಲಾಗಿದೆ.