6 ವರ್ಷಗಳ ಬಳಿಕ ಮತ್ತೊಂದು ಸಿಹಿ ಸುದ್ದಿಯನ್ನ ಹಂಚಿಕೊಂಡ ಬಿಗ್ ಬಾಸ್ ಖ್ಯಾತಿಯ ನಟ ಹರೀಶ್ ರಾಜ್..

Cinema

ನಮಸ್ತೇ ಸ್ನೇಹಿತರೇ, ಕೊರೋನಾ ಲಾಕ್ ಡೌನ್ ನಡುವೆಯೇ ಈ ವರ್ಷ ಬಹಳಷ್ಟು ಕಿರುತೆರೆ ಹಾಗೂ ಹಿರಿತೆರೆ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಸಾಕಷ್ಟು ಸೀರಿಯಲ್ ಹಾಗೂ ಸಿನಿಮಾ ಕಲಾವಿದರು ಖುಷಿ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ. ಹೌದು, ಈಗ ನಟ ಹರೀಶ್ ರಾಜ್ ಕೂಡ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಹರೀಶ್ ರಾಜ್ ರವರು ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ ೭ರಲ್ಲಿ ಕೂಡ ಸ್ಪರ್ಧಿಸಿ ಮತ್ತಷ್ಟು ಫೇಮಸ್ ಆದರು.

ಈಗ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿರುವ ನಟ ಹರೀಶ್ ರಾಜ್ ಎರಡನೇ ಬಾರಿಗೆ ತಂದೆಯಾಗುತ್ತಿದ್ದಾರೆ. ಹರೀಶ್ ರಾಜ್ ರವರು ಶ್ರುತಿ ಲೋಕೇಶ್ ಅವರೊಂದಿಗೆ ೨೦೧೪ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಈ ದಂಪತಿಗಳಿಗೆ ಈಗಾಗಲೇ ಮುದ್ದಾದ ಹೆಣ್ಣು ಮಗುಹೊಂದಿದೆ. ಈಗ ಮತ್ತೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹರೀಶ್ ರಾಜ್ ರವರು ತನ್ನ ಪತ್ನಿ ಎರಡನೇ ಮಗುವಿಗೆ ತಾಯಿಯಾಗುತ್ತಿರುವ ಸಂತಸದ ವಿಚಾರವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಕುಟುಂಬ ಬೆಳೆಯುತ್ತಿರುವುದರ ಜೊತೆಗೆ ನಮ್ಮ ಪ್ರೀತಿ ಕೂಡ ಅರಳುತ್ತಲೇ ಇದೆ. ನಾವು ನಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಮಗುವಿನ ಸ್ವಾಗತ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಶುಭಾಶಯ ಹಾಗೂ ಆಶೀರ್ವಾದಗಳು ನಮ್ಮ ಕುಟುಂಬದ ಮೇಲಿರಲಿ ಎಂದು ನಟಿ ಹರೀಶ್ ರಾಜ್ ರವರು ತಮ್ಮ ಪತ್ನಿ ಮಗಳ ಜೊತೆಗಿರುವ ಫೋಟೋವನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ನಮ್ಮಣ್ಣ ಆರೈಸಿ ಎಂದು ಬರೆದುಕೊಂಡಿದ್ದಾರೆ.