ಹೆಲ್ಮೆಟ್ ಹಾಕದೆ ಬಂದ ಪೊಲೀಸ್ ಅಧಿಕಾರಿ.ತಪಾಸಣೆ ಮಾಡುತ್ತಿದ್ದ ಎಸ್‍ಪಿ ಮಾಡಿದ್ದೇನು ಗೊತ್ತಾ.?

News

ಸಂಚಾರಿ ನಿಯಮಗಳನ್ನ ಪಾಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಇನ್ನು ಈ ನಿಯಮಗಳು ಜನಸಾಮಾನ್ಯರಾಗಲಿ, ಸೆಲೆಬ್ರೆಟಿಗಳಾಗಲಿ, ಸ್ವತಃ ಪೊಲೀಸರೇ ಆಗಲಿ ಎಲ್ಲರಿಗೂ ಒಂದೇ.

ಹೌದು, ಕಾನೂನುಗಳ ಅರಿವು ಮೂಡಿಸಬೇಕಾದ ಪೊಲೀಸರೇ ಆ ಕಾನೂನುಗಳನ್ನ ಮುರಿದರೆ..ಇದೆ ರೀತಿ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಹಾಕದೆ ಸ್ಕೂಟರ್ ಓಡಿಸಿ ದಂಡ ಕಟ್ಟಿದ್ದಾರೆ. ಹಾಸನದ ಸಂತೆ ಪೇಟೆ ಸರ್ಕಲ್ ಬಳಿ ಎಸ್ಪಿ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳ ತಪಾಸಣೆ ಮಾಡುತ್ತಿದ್ದರು.

ಇದೇ ವೇಳೆ ಪೊಲೀಸ್ ಎಎಸ್‍ಐ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದೇ ಸ್ಕೂಟರ್ ನಲ್ಲಿ ಬರುತ್ತಿದ್ದರು. ಇನ್ನು ಇದನ್ನ ಗಮನಿಸಿದ ತಪಾಸಣೆ ಮಾಡುತ್ತಿದ್ದ ಎಸ್ಪಿ ಅವರು ಅವರನ್ನ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಹೆಲ್ಮೆಟ್ ಹಾಕದೆ ಸಂಚಾರಿ ನಿಯಮಗಳನ್ನ ಪಾಲಿಸದ ಪೊಲೀಸ್ ಎಎಸ್‍ಐ ಅಧಿಕಾರಿಗೆ ದಂಡ ಹಾಕುವಂತೆ ಅಲ್ಲಿದ್ದ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

ಇನ್ನು ಇದರ ಮೂಲಕ ಕಾನೂನು ಎಲ್ಲರಿಗೆ ಒಂದೇ. ಸ್ವತಃ ಪೊಲೀಸರು ಸಹ ಕಾನೂನು ನಿಯಮಗಳನ್ನ ಮೀರಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಇನ್ನು ಪೊಲೀಸರಿಗೆ ದಂಡ ವಿಧಿಸುವುದರ ಮುಖಾಂತರ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನ ಎಸ್ಪಿರವರು ತೋರಿಸಿಕೊಟ್ಟಿದ್ದಾರೆ.