ನೀರಿಗಾಗಿ ಈ ರೈತ ಮಾಡಿದ ಟೆಕ್ನಿಕ್ ನೋಡಲು ಓಡೋಡಿ ಬರುತ್ತಿರೋ ಜನ ! ರೈತ ಮಾಡಿದ ಆ ಟೆಕ್ನಿಕ್ ಏನು ಗೊತ್ತಾ ?

Inspire

ಸ್ನೇಹಿತರೇ, ದೇಶದ ಬೆನ್ನೆಲುಬಾಗಿರುವ ರೈತ, ತಾನು ಕಷ್ಟಪಟ್ಟು ಬೆವರು ಸುರಿಸಿ ದುಡಿದು ಎಲ್ಲರಿಗೂ ಅನ್ನ ಕೊಡುವ ಅನ್ನದಾತ. ನೀರೊಂದಿದ್ದರೆ ರೈತ ಏನೂ ಬೇಕಾದರೂ ಮಾಡಬಲ್ಲ. ನೀರಿಗಾಗಿ ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿಗಳನ್ನ ಖರ್ಚು ಮಾಡಿ ಬೋರ್ ವೆಲ್ ಗಳನ್ನ ತೊಡಿಸುತ್ತಾನೆ. ಆದ್ರೆ ನೀರು ಸಿಕ್ಕಿದರೆ ಹಣ ಖರ್ಚು ಮಾಡಿದಕ್ಕೂ ಸಾರ್ಥಕ ಆದ್ರೆ, ನೀರು ಸಿಗದೇ ಹೋದ್ರೆ ಆ ರೈತನ ಕಷ್ಟವಂತೂ ಯಾರಿಗೂ ಬೇಡ. ಒಂದು ವೇಳೆ ನೀರು ಸಿಕ್ಕರೂ ಬೇಸಿಗೆ ಕಾಲದಲ್ಲಿ ವ್ಯವಸಾಯಕ್ಕೆ ಬೇಕಾದ ನೀರು ಬರೋದಿಲ್ಲ ಆಗ ರೈತ ವ್ಯವಸಾಯ ಮಾಡುವುದನ್ನ ಬಿಟ್ಟು ಕೆಲಸ ಹುಡುಕಿಕೊಂಡು ನಗರ ಪಟ್ಟಣಗಳ ಕಡೆ ದಾರಿ ಹಿಡಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಆದರೆ ಇಲ್ಲೊಬ್ಬ ರೈತ ವರ್ಷಪೂರ್ತಿ ನೀರು ನಿಲ್ಲುವಂತೆ ದೊಡ್ಡ ಪ್ರಯೋಗವೊಂದನ್ನ ಮಾಡಿದ್ದು, ಈ ರೈತ ಮಾಡಿದ ಟೆಕ್ನಿಕ್ ನ್ನ ನೋಡಲು ದೇಶ ವಿದೇಶಗಳಿಂದ ಜನರು ಬರುತಿದ್ದಾರೆ. ಇನ್ನು ಇಂತಹ ಪ್ರಯೋಗ ಮಾಡಿ ಯಶಸ್ವಿಯಾಗಿರುವ ರೈತನ ಹೆಸರು ಶಂಕರ್ ಎಂದು. ಹಾವೇರಿ ಜಿಲ್ಲೆಗೆ ಸೇರಿದ ಕುಳ್ಳೂರು ಎಂಬ ಗ್ರಾಮದವರು. ಈತ ತನ್ನ ಭಾಗವಾಗಿ ಬಂದಿದ್ದ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಲೆಂದು ಬೋರ್ವೆಲ್ ತೋಡಿಸುತ್ತಾನೆ. ಇನ್ನು ಆತನಿಗೆ ನೀರು ಸಿಕ್ಕಿದ್ದು ಶುರುವಿನಲ್ಲಿ ಎರಡು ಇಂಚಿನಷ್ಟು ನೀರು ಬರುತ್ತಿರುತ್ತದೆ. ಆದ್ರೆ ದಿನಗಳು ಕಳೆದಂತೆ ಬೋರ್ವೆಲ್ ನೀರಿನ ಪ್ರಮಾಣ ಕಡಿಮೆಯಾಗಿದ್ದು ಆತನ ಜಮೀನಿನ ವ್ಯವಸಾಯಕ್ಕೆ ಸಾಕಾಗುತ್ತಿರಲಿಲ್ಲ. ಇನ್ನು ಇದು ಹೀಗೆ ಮುಂದುವರೆದರೆ ತಾನು ವ್ಯವಸಾಯ ಮಾಡುವುದಕ್ಕೆ ಕಷ್ಟವಾಗುತ್ತದೆ ಎಂದು ತಿಳಿದು ಕೃಷಿಗೆ ಸಂಬಂದಿತ ಅಧಿಕಾರಿಗಳನ್ನ ಭೇಟಿ ಮಾಡಿ ಮುಂದೇನು ಮಾಡುವುದು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಾನೆ.

ಬಳಿಕ ಪ್ರಯೋಗವೊಂದಕ್ಕೆ ಮುಂದಾದ ರೈತ ಶಂಕರ್ ತನ್ನ ಬೋರ್ವೆಲ್ ಪಕ್ಕದಲ್ಲೇ ಮೂರೂ ಮೀಟರ್ ನಷ್ಟು ಉದ್ದ ಹಾಗೂ ಎರಡು ಮೀಟರ್ ನಷ್ಟು ಗುಂಡಿಗಳನ್ನ ತೋಡಿದ್ದು, ೩ ಅಡಿ ತನಕ ಮರಳು, ದಪ್ಪನಾದ ಜಲ್ಲಿಕಲ್ಲು ಸೇರಿದಂತೆ ಇದ್ದಿಲನ್ನ ತುಂಬಿಸುತ್ತಾನೆ. ಇನ್ನು ಮಳೆಗಾಲದ ಸಮಯದಲ್ಲಿ ವೆಸ್ಟ್ ಆಗಿ ತನ್ನ ತೋಟದಿಂದ ಹರಿದುಹೋಗುತ್ತಿದ್ದ ನೀರನ್ನ ತಾನು ನಿರ್ಮಿಸಿದ ಗುಂಡಿಗಳಿಗೆ ಬರುವಂತೆ ಮಾಡುತ್ತಾನೆ. ರೈತ ಶಂಕರ್ ಅವರ ಈ ಐಡಿಯಾದಿಂದಾಗಿ ವೆಸ್ಟ್ ಆಗಿ ಹೋಗುತ್ತಿದ್ದ ನೀರೆಲ್ಲಾ ಈ ಗುಂಡಿಗಳಲ್ಲಿ ಇಂಗುತ್ತದೆ. ಇನ್ನು ಇದರ ಪರಿಣಾಮವಾಗಿ ನೀರು ಕಡಿಮೆಯಾಗಿದ್ದ ಬೋರ್ ವೆಲ್ ನಲ್ಲಿ ೪ ಇಂಚು ನೀರು ಬರಲು ಸಾಧ್ಯವಾಗಿದ್ದು, ಬೇಸಿಗೆ ಕಾಲದಲ್ಲೂ ಸಹ ನೀರಿನ ಪ್ರಮಾಣ ಕಡಿಮೆಯಾಗುವುದಿಲ್ಲ. ಹೀಗೆಯೇ ವರ್ಷಪೂರ್ತಿ ಬೋರ್ ವೆಲ್ ನಲ್ಲಿ ನೀರು ಬರಲು ಪ್ರಾರಂಭವಾಗುತ್ತದೆ.

ರೈತ ಶಂಕರ್ ನಿರ್ಮಾಣ ಮಡಿದ ಇಂಗು ಗುಂಡಿಗಳಲ್ಲಿ ೯೦ಕಿಂತ ಹೆಚ್ಚು ನೀರನ್ನ ಇಂಗಿಸಲಾಗುತ್ತಿದ್ದು, ನೀರಿನ ಅಭಾವ ವಿಲ್ಲದೆ ವರ್ಷಪೂರ್ತಿ ವ್ಯವಸಾಯ ಮಾಡುತ್ತಿದ್ದಾರೆ. ರೈತ ಶಂಕರ್ ಮಾಡಿದ ಈ ಒಂದು ಐಡಿಯಾ ಆತನ ಜೀವನವನ್ನೇ ಬದಲಾಯಿಸಿದ್ದು ಇದನ್ನ ನೋಡಲು ದೇಶ ವಿದೇಶಗಳಿಂದ ಜನ ಬರುತ್ತಿದ್ದಾರಂತೆ. ರೈತ ಮನಸ್ಸು ಮಾಡಿದ್ರೆ ವ್ಯವಸಾಯದಲ್ಲಿಏನೂ ಬೇಕಾದರೂ ಸಾಧಿಸಬಹದು ಎಂಬುದಕ್ಕೆ ಈ ರೈತನೇ ಉದಾಹರಣೆ ಹಾಗೂ ಎಷ್ಟೋ ರೈತರಿಗೆ ಮಾದರಿ ಎಂದರೆ ತಪ್ಪಾಗೊದಿಲ್ಲ..