ಹಾವೇರಿಯ ಮಾದೇವಕ್ಕ ಈಗ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ! ಇದಪ್ಪಾ ಸವಾಲಿಗೆ ಸವಾಲ್ ಅಂದ್ರೆ..

Inspire
Advertisements

ಸ್ನೇಹಿತರೇ, ಹೆಣ್ಣು ಎಂದರೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುತ್ತಿದ್ದ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಸರಿಸಮನಾಗಿ ಕೆಲಸ ಮಾಡುತ್ತಾ ಸೈ ಎನಿಸಿಕೊಂಡಿದ್ದಾರೆ. ಕೇವಲ ಗಂಡಸರು ಮಾತ್ರ ಮಾಡಬಹುದು ಎನ್ನುತ್ತಿದ್ದ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರ ಪ್ರವೇಶವಾಗಿದೆ. ಇನ್ನು ಕೃಷಿ ಕ್ಷೇತ್ರದಲ್ಲೂ ಕೂಡ ಮಹಿಳೆಯರು ಕೆಲಸ ಮಾಡುತ್ತಾ ಸೈ ಎನಿಸಿಕೊಂಡಿದ್ದಾರೆ. ಇದಕ್ಕೆ ನೈಜ ಉದಾಹರಣೆ ಎಂಬಂತೆ ವ್ಯವಸಾಯ ಮಾಡುವವರಿಗೆ ಮಾದರಿಯಾಗಿ ನಿಂತಿರುವ ಮಾದೇವಕ್ಕ ಎಂಬ ಮಹಿಳೆ.

Advertisements

ಹೌದು, ಹಾವೇರಿ ಜಿಲ್ಲೆಯ ಕೇರವಾಡಿ ಗ್ರಾಮದವರಾದ ಮಾದೇವಕ್ಕ ಎಲ್ಲರಿಗೂ ಮಾದರಿಯಾಗುವ ಕೃಷಿ ಪದ್ದತಿಯನ್ನ ಅನುಸರಿಸುತ್ತಿದ್ದಾರೆ. ಇವರು ಕೃಷಿಯಿಂದಲೇ ಸುಂದರವಾದ ಜೀವನ ಕಟ್ಟಿಕೊಂಡಿದ್ದಾರೆ. ೫ ಎಕರೆ ಕೃಷಿ ಭೂಮಿಯನ್ನ ಹೊಂದಿರುವ ಮಾದೇವಕ್ಕ ಪುರುಷರೂ ಕೂಡ ನಾಚಿಸುವಂತಹ ಚಿನ್ನದ ಬೆಲೆ ತೆಗೆಯುತ್ತಿದ್ದಾರೆ. ಮಾತು ಬರದೇ ಇರೋ ಬಸಪ್ಪ ಲಿಂಗದಹಳ್ಳಿ ಎಂಬ ರೈತನ ೫ ಜನ ಮಕ್ಕಳಲ್ಲಿ ಮಾದೇವಕ್ಕ ಎಲ್ಲರಿಗೂ ದೊಡ್ಡವರು. ಕೇವಲ ಹನ್ನೆರಡನೇ ವಯಸ್ಸಿಗೆ ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತು ತಂದೆಗೆ ಹೆಗಲು ಈ ಮಾದೇವಕ್ಕ. ಇನ್ನು ಚಿಕ್ಕವಯಸ್ಸಿನಿಂದಲೇ ಕೃಷಿಯಲ್ಲಿ ತೊಡಗಿರುವ ಮಾದೇವಕ್ಕನಿಗೆ ಈಗ ೩೬ ವರ್ಷ.ಆದರೆ ಇನ್ನು ಮದುವೆ ಇಲ್ಲ.

ಇನ್ನು ಮಳೆ ಇಲ್ಲದೆ ಇದ್ದಾಗ ಆ ಊರಿನ ರೈತರು ವ್ಯವಸಾಯ ಮಾಡಲು ಹಿಂದೆ ಮುಂದೆ ನೋಡುವ ಸಮಯದ್ಲಲಿ ಜೋಳ ಸೇರಿದಂತೆ ಹಲವಾರು ರೀತಿಯ ಸಿರಿ ಧಾನ್ಯಗಳನ್ನ ಬೆಳೆಯುವ ಮೂಲಕ ಪುರುಷ ರೈತರು ನಾಚುವನಂತೆ ಮಾಡಿದ್ದಾರೆ. ಇನ್ನು ಮ್ ಮಾದೇವಕ್ಕನವರ ಐದು ಎಕರೆ ಜಮೀನಲ್ಲಿ ಕೇವಲ ಮೂರೂ ಎಕರೆಗೆ ಮಾತ್ರ ನೀರಾವರಿ ಸೌಲಭ್ಯವಿದ್ದು, ಉಳಿದ ಎರಡು ಎಕರೆ ಭೂಮಿಯಲ್ಲಿ ತನ್ನ ಸಹೋದರಿಯ ಜೊತೆ ಸೇರಿ ವ್ಯವಸಾಯ ಮಾಡುತ್ತಿದ್ದಾರೆ. ಇನ್ನು ಒಂದು ವರ್ಷಕ್ಕೆ ೩ ಲಕ್ಷಕ್ಕಿಂತ ಆದಾಯ ಗಳಿಸುವ ಮಾದೇವಕ್ಕ ೫ ವರ್ಷಗಳ ಟ್ರ್ಯಾಕ್ಟರ್ ಖರೀದಿ ಮಾಡಿ ವ್ಯವಸಾಯ ಮಾಡುತ್ತಿದ್ದಾರೆ. ಸ್ವತಃ ಅವರೇ ಟ್ರಾಕ್ಟಾರ್ ಓಡಿಸುತ್ತಾರೆ ಕೂಡ. ಇನ್ನು ಇದಲ್ಲದೆ ಜೊತೆಗೆ ತನ್ನ ಸಹೋದರಿಯರ ಇಬ್ಬರು ಮಕ್ಕಳನ್ನ ಸಾಕುತ್ತಿದ್ದಾರೆ ಮಾದೇವಕ್ಕ. ಒಟ್ಟಿನಲ್ಲಿ ವ್ಯವಸಾಯ ಮಾಡಲು ಹಿಂದೆ ಮುಂದೆ ನೋಡುವ ಬಹುತೇಕರಿಗೆ ಈ ಮಾದೇವಕ್ಕ ಮಾದರಿಯಾಗಿದ್ದಾಳೆ.