ಲಾಕ್ ಡೌನ್ ಇದ್ರೂ ಮನೆಯ ಟೆರೇಸ್ ಮೇಲೆ ಮದ್ವೆಯಾದ ಬಿಗ್ ಬಾಸ್ ವಿನ್ನರ್

Advertisements

ಕೊರೋನಾ ಹಬ್ಬುತ್ತಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆಗಿದ್ದು, ಯಾವುದೇ ಸಭೆ ಸಮಾರಂಭ ಮದುವೆಗಳನ್ನ ಮಾಡುವಂತಿಲ್ಲ. ಒಂದು ವೇಳೆ ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನ ಮಾಡಿದ್ರೆ, ಇಂತಿಷ್ಟೇ ಜನ ಸೇರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮಗಳಲಿವೆ.

Advertisements

ಇದೇ ಕಾರಣದಿಂದಲೇ ಹಲವಾರು ಮದುವೆಗಳು, ಸಭೆ ಸಮಾರಂಭಗಳು ಈಗಾಗಲೇ ರದ್ದಾಗಿವೆ. ಆದರೆ ಬಿಗ್ ಬಾಸ್ ಭಾಗ ಎರಡರ ವಿನ್ನರ್ ಲಾಕ್ ಡೌನ್ ಇದ್ದರೂ ಮದುವೆಯಾಗಿದ್ದು ಬಾರಿ ಸುದ್ದಿಯಲ್ಲಿದ್ದಾರೆ. ಹೌದು, ಹಿಂದಿ ಬಿಗ್ ಬಾಸ್ ಭಾಗ ಎರಡು ವಿನ್ನರ್ ಆಗಿದ್ದ ಅಶುತೋಷ್ ಕೌಶಿಕ್ ಅವರು ಲಾಕ್ ಡೌನ್ ಇದ್ದರೂ ತಮ್ಮಗೆಳತಿ ಅರ್ಪಿತಾ ತಿವಾರಿ ಅವರ ಜೊತೆ ಅವರ ಮನೆಯ ಟೆರೇಸ್ ಮೇಲೆ ಮದುವೆ ಆಗಿದ್ದಾರೆ. ನೋಯ್ಡಾದ ಅವರ ಮನೆಯ ಟೆರೇಸ್ ಮೇಲೆ ಮದುವೆಯಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಟುಂಬದವರಷ್ಟೇ ಭಾಗಿಯಾಗಿದ್ದ ಈ ಮದುವೆಯಲ್ಲಿ ನವ ವಧು ಕೆಂಪು ಬಣ್ಣದ ಡ್ರೆಸ್ ಧರಿಸಿದ್ದರೆ, ಬಿಗ್ ಬಾಸ್ ವಿನ್ನರ್ ಅಶುತೋಷ್ ಬಿಳಿ ಬಣ್ಣದ ಶರ್ಟ್ ಜೊತೆಗೆ, ಕಡು ನಿಲ್ಲೆ ಬಣ್ಣದ ಪ್ಯಾಂಟ್ ಧರಿಸಿದ್ದರು.

ಇನ್ನು ತನ್ನ ಮದುವೆ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ್ದ ಅಶುತೋಷ್ ಅವರು ಲಾಕ್ ಡೌನ್ ಘೋಷಣೆಯಾಗುವ ಮುನ್ನವೇ ಅಕ್ಷಯ ತೃತೀಯದಂದು ಮದುವೆಯಾದ್ರೆ ಒಳ್ಳೆಯದು ಎಂದು ಮದುವೆ ದಿನಾನಕವನ್ನ ಫಿಕ್ಸ್ ಮಾಡಲಾಗಿತ್ತು. ಆದರೆ ಬಳಿಕ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ಮದುವೆಯನ್ನ ಮುಂದಕ್ಕೆ ಹಾಕಲು ನಮ್ಮಿಬ್ಬರಿಗೂ ಇಷ್ಟವಿರಲಿಲ್ಲ. ಹಾಗಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ಹೇಳಿದ್ದಾರೆ.