ಹಣೆಗೆ ಸಿಂಧೂರ ಕೈಗೆ ಬಳೆ ತೊಡದ ಪತ್ನಿಯಿಂದ ಡೈವರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ! ಆ ವ್ಯಕ್ತಿಗೆ ಡೈವರ್ಸ್ ಸಿಕ್ತಾ ?ಹೈಕೋರ್ಟ್ ಹೇಳಿದ್ದೇನು ?

News
Advertisements

ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರು ಹಣೆಗೆ ಕುಂಕುಮ ಹಾಗೂ ಕೈಗೆ ಬಳೆ ತೊಡುವುದು ಸಂಪ್ರದಾಯ. ಅದರಲ್ಲೂ ಮದುವೆಯ ಬಳಿಕ ಹೆಚ್ಚಾಗಿ ಮಹಿಳೆಯರು ಇದನ್ನ ಪಾಲಿಸುತ್ತಾರೆ ಕೂಡ. ಹಣೆಗೆ ಸಿಂಧೂರ ಹಾಗೂ ಕೈಗೆ ಬಳೆ ಇದು ಒಂದು ರೀತಿಯಲ್ಲಿ ಮಹಿಳೆಯರ ಜನ್ಮಸಿದ್ಧ ಹಕ್ಕು ಎಂದೇ ಹೇಳಬಹುದು. ಇನ್ನು ಈ ಸಂಪ್ರದಾಯವನ್ನ ಪಾಲನೆ ಮಾಡುವುದು ಬಿಡುವುದು ಅವರವರಿಗೆ ಬಿಟ್ಟ ವಿಷಯ.

Advertisements

ಆದರೆ ತನ್ನ ಪತ್ನಿ ಹಣೆಗೆ ಕುಂಕುಮ ಇಡುವುದಿಲ್ಲ ಕೈಗೆ ಬಳೆ ತೊಡುವುದಿಲ್ಲ ಎಂದು ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿರುವ ಅಪರೂಪದ ಘಟನೆ ನಡೆದಿದೆ. ಇನ್ನು ತನಗೆ ಡೈವರ್ಸ್ ಕೊಡಿಸಬೇಕೆಂದು ಗುವಾಹಟಿ ಕೋರ್ಟ್ ಗೆ ತನ್ನ ಕೋರಿಕೆ ಸಲ್ಲಿಸಿದ್ದಾನೆ. ವಾದ ವಿವಾದಗಳನ್ನ ಆಲಿಸಿದ ನ್ಯಾಯಾಲಯ ಮದುವೆಯಾದ ಬಳಿಕವೂ ಮಹಿಳೆ ಹಣೆಗೆ ಸಿಂಧೂರ ಇಡಲು ಕೈಗೆ ಬಳೆ ತೊಡಲು ನಿರಾಕರಣೆ ಮಾಡುತ್ತಾಳೆ ಎಂದಾದಲ್ಲಿ ಆಕೆಗೆ ಈ ಮದುವೆ ಇಷ್ಟವಿಲ್ಲ ತನ್ನ ಗಂಡನನ್ನ ಪತಿಯಾಗಿ ಸ್ವೀಕರಿಸಲು ಆಕೆಗೆ ಇಷ್ಟವಿಲ್ಲ ಎಂದೇ ಅರ್ಥ ಎಂದು ಗುವಾಹಟಿ ಹೈಕೋರ್ಟ್ ಹೇಳಿದೆ.

ಇನ್ನು ಇದೆ ಸಂಧರ್ಭದಲ್ಲಿ ಇಷ್ಟೇ ಇಲ್ಲದೆ ಇದ್ದರೂ ಪತಿ ನನ್ನ ಜೊತೆಯೇ ಜೀವನ ನಡೆಸಬೇಕು ಎಂದು ಹೇಳುವುದು ಅದು ಪತಿಯ ಮೇಲೆ ಮಾಡುವ ದೌರ್ಜನ್ಯ ಎಂದು ಹೈಕೋರ್ಟ್ ತೀರ್ಮಾನ ಮಾಡಿದ್ದು (ಗಂಡನಿಗೆ) ಆ ವ್ಯಕ್ತಿಗೆ ಡೈವರ್ಸ್ ಬೇಕೆಂಬ ಕೋರಿಕೆಯನ್ನ ಮಾನ್ಯ ಮಾಡಿದೆ.