ಇದ್ದಕ್ಕಿದ್ದಂತೆಯೇ ಆ ಯುವಕ ಸಮುದ್ರಕ್ಕೆ ಜಿಗಿದಿದ್ದೇಕೆ ? ಕೊನೆಗೆ ಆತ ಏನಾದ ಗೊತ್ತಾ ?

Advertisements

ಕರಾವಳಿಗರ ಜೀವನಾಡಿ ಮೀನುಗಾರಿಕೆ. ಪ್ರತಿನಿತ್ಯ ಸಮುದ್ರಕ್ಕಿಳಿದು ಬಲೆ ಬೀಸದಿದ್ರೆ, ಮೀನುಗಾರರ ಬದುಕು ಸಾಗೋದೇ ಇಲ್ಲ. ಮೀನುಗಾರಿಕೆ ಅವರ ಜೀವಾಳ. ಕುಲಕಸುಬು. ಆದ್ರೆ, ಈ ನಡುವೆ ಶನಿವಾರ ಬೆಳಗ್ಗೆ ಪ್ರತಿಭಟನೆ ಮಾಡ್ತಿದ್ದ ಮೀನುಗಾರರ ಮಧ್ಯೆ ಇದ್ದ ಯುವಕನೊರ್ವ ಇದ್ದಕ್ಕಿದ್ದಂತೆ ಸಮುದ್ರಕ್ಕೆ ಜಿಗಿದು ಆ’ತ್ಮಹ’ತ್ಯೆಗೆ ಯತ್ನಿಸಿದ್ದ. ಸದ್ಯ, ಸ್ಥಳದಲ್ಲೇ ಇದ್ದ ಪೊಲೀಸರು ಮತ್ತು ಕರಾವಳಿ ಪಡೆಯ ಸಮಯ ಪ್ರಜ್ಞೆಯಿಂದ ಆತ ಪ್ರಾ’ಣಾಪಾಯದಿಂದ ಪಾರಾಗಿದ್ದಾನೆ. ಆದ್ರೆ, ಸಮುದ್ರಕ್ಕೆ ಹಾರುತ್ತಿದ್ದವನನ್ನ ರಕ್ಷಿಸಿ, ದಡಕ್ಕೆ ತರುವಷ್ಟರಲ್ಲೇ ಆ ಯುವಕ ಪ್ರಜ್ಞೆ ತಪ್ಪಿದ್ದ. ಇಷ್ಟೆಕ್ಕೆಲ್ಲಾ ಕಾರಣವಾಗಿದ್ದು ಏನು ಗೊತ್ತಾ? ನೂರಾರು ಮೀನುಗಾರರ ಮನೆಗಳನ್ನ ತೆರವು ಮಾಡಲು ಜೆಸಿಬಿ ಇಳಿದಿದ್ದು. ಹೌದು, ಕಾರವಾರ ಜಿಲ್ಲೆಯ ಹೊನ್ನಾವರದ ಕಾಸರಕೋಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೊನ್ನಾವರ ಪ್ರೈವೇಟ್ ಪೋರ್ಟ್ ಲಿಮಿಟೆಡ್ ಕಂಪೆನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ.

[widget id=”custom_html-4″]

ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಮಂಜೂರು ಮಾಡಿದೆ. ಕೆಲ ತಿಂಗಳ ಹಿಂದೆ ಸ್ಥಳೀಯರ ವಿರೋಧದಿಂದ ವಾಣಿಜ್ಯ ಬಂದರು ಕಾಮಗಾರಿಯನ್ನ ಪ್ರಾರಂಭಿಸಿ ಕೈ ಬಿಟ್ಟಿದ್ದ ಕಂಪನಿ, ಇದೀಗ ಅಧಿಕಾರಿಗಳ ನೇತೃತ್ವದಲ್ಲಿ ಬಂದರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಶನಿವಾರ ಬೆಳ್ಳಂಬೆಳಿಗ್ಗೆ ಏಕಾಏಕಿ 500ಕ್ಕೂ ಹೆಚ್ಚು ಪೊಲೀಸರ ಬಿಗಿ ಬಂದೋಬಸ್ತ್​ನಲ್ಲಿ ಜೆಸಿಬಿಗಳನ್ನು ತಂದು ಹತ್ತಾರು ಶೆಡ್​ಗಳನ್ನ ನೆಲಸಮ ಮಾಡಲಾಗಿದೆ. ಇದನ್ನ ವಿರೋಧಿಸಿ ಮೀನುಗಾರರು ಕಾಸರಕೋಡಿನ ಟೊಂಕಾ ಪ್ರದೇಶದಲ್ಲಿ ಪ್ರತಿಭಟನೆಗಿಳಿದಿದ್ರು. ಆದ್ರೂ ಕೂಡ ತೆರವು ಕಾರ್ಯ ನಿಲ್ಲದನ್ನ ವಿರೋಧಿಸಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಕೆಲವರು ಏಕಾಏಕಿ ಸಮುದ್ರಕ್ಕೆ ಹಾರಲು ಯತ್ನಿಸಿದ್ರು. ಈ ವೇಳೆ ಅಲ್ಲೇ ಇದ್ದ ಪೊಲೀಸರು ಮತ್ತು ಕರಾವಳಿ ಕಾವಲು ಪಡೆ ಸಿಬ್ಬಂದಿ ಯುವಕನನ್ನ ರಕ್ಷಣೆ ಮಾಡಿದ್ರು. ಇನ್ನು ಕಾಸರಕೋಡು, ಮಲ್ಲುಕುರ್ವಾ ಪ್ರದೇಶದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ನಂಬಿ ಬದುಕುತ್ತಿವೆ.

[widget id=”custom_html-4″]

Advertisements

ಸರ್ಕಾರ ಸ್ಥಳೀಯರಿಗೆ ಸ್ಪಷ್ಟ ಮಾಹಿತಿ ನೀಡದೆ ಕಾಮಗಾರಿ ನಡೆಸುತ್ತಿದೆ. ಶನಿವಾರ ರಸ್ತೆ ಕಾಮಗಾರಿ ಕೈಗೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿ ನೆಪದಲ್ಲಿ ಮೀನುಗಾರರನ್ನು ಸಂಪೂರ್ಣ ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗಿದೆ. ಆದ್ದರಿಂದ ಕೂಡಲೇ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ. ಇನ್ನೂ, ಈ ಕಾಮಗಾರಿಗೆ ಮಾಜಿ ಶಾಸಕರಿಂದಲೂ ತೀವ್ರ ಆ’ಕ್ಷೇಪ ವ್ಯಕ್ತವಾಗಿದ್ದು, ಮೀನುಗಾರರ ಬದುಕಿಗೆ ಮಾ’ರಕವಾದ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿ’ಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಾಮಗಾರಿಯನ್ನ ಸ್ಥಗಿತಗೊಳಿಸಲಾಗಿದೆ. ಮೊದಲೇ ಕೊರೊನಾ ಸಂಕಷ್ಟದಲ್ಲಿರೋ ಮೀನುಗಾರರ ತೆರವು ಮಾಡ್ತಿರೋದ್ರಿಂದ ಮೀನುಗಾರರಿಗೆ ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ. ಖಾಸಗಿ ಕಂಪನಿಯ ಅಭಿವೃದ್ಧಿಗೆ ಮೀನುಗಾರರ ಮೂಲ‌ ನೆಲೆಯನ್ನೇ ಕಸಿದುಕೊಳ್ಳಲು ಮುಂದಾಗಿರೋದು ಯಾವ ನ್ಯಾಯ ಅಲ್ವಾ..?