ನಿಮ್ಮ ಮನೆಯ, ಜಮೀನಿನ ಆಸ್ತಿ ಪಾತ್ರಗಳು ಅಸಲಿಯೋ ನಕಲಿಯೋ ಅನ್ನೋದನ್ನ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ..

Kannada Mahiti

ಸ್ನೇಹಿತರೇ, ಸರ್ಕಾರದ ಉಪನೋಂದಣಿಧಿಕಾರಿಗಳ ಕಚೇರಿಯ ರಿಜಿಸ್ಟರ್ ಇಲಾಖೆಯಲ್ಲಿ ರಿಜಿಸ್ಟರ್ ಮಾಡಿಸುವ ದಾನ ಪತ್ರ, ಸೇಲ್ ಡಿಡ್ ಗಳು ಅಸಲಿಯೋ ಅಥ್ವಾ ನಕಲಿಯೋ ಎಂಬುವುದನ್ನ ತಿಳಿಯುವುದು ತುಂಬಾನೇ ಇಂಪಾರ್ಟೆನ್ಟ್ ಆಗಿದೆ. ಹಾಗಾದ್ರೆ ಇದನ್ನ ತಿಳಿಯುವುದು ಹೇಗೆ ಅಂತ ಮುಂದೆ ನೋಡೋಣ ಬನ್ನಿ..ಇದಕ್ಕಾಗಿ ನಿಮ್ಮಲ್ಲಿ ಸ್ಮಾರ್ಟ್ ಮೊಬೈಲ್ ಇದ್ದರೆ ಸಾಕು. ನಿಮ್ಮ ಮೊಬೈಲ್ ನಾಲ್ ಗೂಗಲ್ ಬ್ರೌಸರ್ ನ್ನ ಓಪನ್ ಮಾಡಿ Kaveri Online Services ಅಂತ ಸರ್ಚ್ ಮಾಡಿದಾಗ kaverionline.karnataka.gov.in ಎಂಬ ವೆಬ್ಸೈಟ್ ನೇಮ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ..ಆಗ ಈ ವೆಬ್ಸೈಟ್ ಪುಟಗಳು ತೆರೆದುಕೊಳ್ಳುತ್ತವೆ.

ನೀವು ಒಂದು ವೇಳೆ ಈಗಾಗಲೇ ಕಾವೇರಿ ಆನ್ಲೈನ್ ನಲ್ಲಿ ರಿಜಿಸ್ಟರ್ ಆಗಿಲ್ಲದಿದ್ದರೆ ರಿಜಿಸ್ಟರ್ ಮಾಡಿಕೊಳ್ಳಿ..Register as new user ಲಿಂಕ್ ಮೇಲೆ ಕ್ಲಿಕ್ ಮಾಡಿ..ಆಗ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಿರುವ ಮಾಹಿತಿಗಳನ್ನೆಲ್ಲಾ ತುಂಬಿದ ಮೇಲೆ ನಿಮಗೆ ಯೂಸರ್ ನೇಮ್ ಪಾಸ್ವರ್ಡ್ ಸಿಗುತ್ತದೆ. ಬಳಿಕ ಲಾಗಿನ್ ಪೇಜ್ ಗೆ ಬಂದು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿ. ಇದೆ ವೇಳೆ ನೀವು ಕೊಟ್ಟಿರುವ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. OTP ನಂಬರ್ ನ್ನ ತುಂಬಿ ಲಾಗಿನ್ ಮೇಲೆ ಕ್ಲಿಕ್ ಮಾಡಿ. ಆಗ ಕಾವೇರಿ ಆನ್ಲೈನ್ ಸರ್ವಿಸ್ ನಲ್ಲಿನ ಮಾಹಿತಿಗಳೆಲ್ಲಾ ನಿಮಗೆ ಕಾಣಿಸುತ್ತವೆ.

ಅಲ್ಲಿ ಕಾಣಿಸುವ servicesನ ಕೆಳಗಡೆ ಇರುವ online cc ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಮತ್ತೊಂದು ಪೇಜ್ ಓಪನ್ ಆಗುತ್ತೆ. ಅಲ್ಲಿ ಕೆಲವೊಂದು ಮಾಹಿತಿಯನ್ನ ನೀವು ತುಂಬಬೇಕಾದ ಕಾರಣ, ನೀವು ಚೆಕ್ ಮಾಡಬೇಕಾಗಿರುವ ರಿಜಿಸ್ಟ್ರೇಷನ್ ಪತ್ರವನ್ನ ತೆಗೆದುಕೊಂಡು ಕೇಳಲಾದ ಮಾಹಿತಿಗಳನ್ನ ಸರಿಯಾಗಿ ತುಂಬಿ. ಬಳಿಕ document registration ಎಂಬ ಒಪ್ಶನ್ ಆಯ್ಕೆ ಮಾಡಿದ ಬಳಿಕ ನಿಮ್ಮ ಜಿಲ್ಲೆ ಆಗೂ ತಾಲೂಕಿನ ಹೆಸರನ್ನ ತುಂಬಿ. ಇದೆಲ್ಲಾ ಆದ ಬಳಿಕ ನೀವು ರಿಜಿಸ್ಟ್ರೇಷನ್ ಮಾಡಿಕೊಂಡ ದಿನ ಕೊಟ್ಟಿರುವ document ನಂಬರ್ ನ್ನ ತುಂಬಿ book 1 ಎಂದು ಸೆಲೆಕ್ಟ್ ಮಾಡಿ.

ಬಳಿಕ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ..ಬಳಿಕ ನೀವು ಅಂದು ರಿಜಿಸ್ಟೇಷನ್ ಮಾಡಿಸಿದ ಪತ್ರ ಕಾಣಿಸುತ್ತದೆ. ಇದನ್ನ ನೀವು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ನಿಮ್ಮ ಬಳಿ ಇರೋ ರಿಜಿಸ್ಟ್ರೇಷನ್ ಪತ್ರದ ಜೊತೆ ಇದು ನಕಲಿಯೋ ಅಥ್ವಾ ಅಸಲಿಯೋ ಎಂಬುದನ್ನ ಚೆಕ್ ಮಾಡಬಹುದಾಗಿದೆ..ಹೆಚ್ಚಿನ ಮಾಹಿತಿಗಾಗಿ ಮೇಲಿರುವ ವಿಡಿಯೋವನ್ನ ನೋಡಿ..ಹಾಗೂ ಈ ಉಪಯುಕ್ತ ಮಾಹಿತಿಯನ್ನ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..ಮಾಹಿತಿ ಎಲ್ಲರಿಗೂ ಉಪಯೋಗವಾಗಲಿ..