ಅಕ್ಕಿಯಲ್ಲಿ ಹುಳ ಬೀಳತ್ತಿದೆಯೇ ?ಇಲ್ಲಿದೆ ನೋಡಿ ಹುಳ ಬೀಳದಂತೆ ತಡೆಗಟ್ಟುವ ವಿಧಾನ

Kannada News
Advertisements

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಅಕ್ಕಿಯನ್ನು ಅತೀ ಹೆಚ್ಚು ದಿನ ಶೇಖರಿಸಿ ಇಟ್ಟಾಗ ಅದರಲ್ಲಿ ಹುಳುಗಳು ಹುಟ್ಟುತ್ತವೆ. ಹೀಗೆ ಅಕ್ಕಿಯಲ್ಲಿ ಹುಳ ಬೀಳುವುದರಿಂದ ಅಕ್ಕಿ ಹಾಳಾಗುವುದರ ಜೊತೆಗೆ ಉಪಯೋಗಕ್ಕೂ ಸಹ ಯೋಗ್ಯವಾಗಿರುವುದಿಲ್ಲ.

Advertisements

ಹಾಗಾದ್ರೆ ಅಕ್ಕಿಯಲ್ಲಿ ಹುಳ ಬೀಳದಂತೆ ತಡೆಗಟ್ಟುವುದು ಹೇಗೆ.?ಹೌದು, ಈ ವಿಧಾನಗಳಿಂದ ನೀವು ಸಂಗ್ರಹಿಸಿ ಇಟ್ಟ ಅಕ್ಕಿಯಲ್ಲಿ ಹೂಲ ಬೀಳದಂತೆ ಎಷ್ಟು ದಿವಸ ಬೇಕಾದ್ರೂ ಸಂಗ್ರಹಿಸಿ ಇಡಬಹುದು. ಅವಶ್ಯಕತೆ ಇರುವಷ್ಟು ಬೇವಿನ ಸೊಪ್ಪನ್ನು ತೆಗೆದುಕೊಳ್ಳಿ. ಅದನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಿ. ಜೊತೆಗೆ ಬೆಳ್ಳುಳ್ಳಿ ಸಿಪ್ಪೆಯ ಒಂದು ಕಪ್ ಪುಡಿ, ಹಾಗೂ ಹುರಿದ ಲವಂಗದಿಂದ ಕಾಲು ಕಪ್ ಪುಡಿ ಮಾಡಿಟ್ಟುಕೊಳ್ಳಿ.

ಬಳಿಕ ಬೇವಿನ ಸೊಪ್ಪಿನ ಪುಡಿ, ಬೆಳ್ಳುಳ್ಳಿ ಲವಂಗದ ಪುಡಿ ಮತ್ತು ಲವಂಗದ ಪುಡಿ, ಈ ಮೂರನ್ನು ಸೇರಿಸಿ ಒಂದು ಪಾತ್ರೆಯಲ್ಲಿ ಹಾಕಿ ನೀರನ್ನು ಸೇರಿಸಿ ಗಟ್ಟಿಯಾಗಿ ಕಲಿಸಿ. ನಂತರ ಚಿಕ್ಕ ಚಿಕ್ಕ ಉಂಡೆಯಾಗಿ ಮಾಡಿ, ಎರಡು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿಕೊಳ್ಳಿ.