ಈ ಲಕ್ಷಣಗಳು ಇದ್ದರೆ ಅದು ನಿಮ್ಮ ರಕ್ತ ಕೆಟ್ಟಿರುವ ಸಂಕೇತ..ರಕ್ತದ ಶುದ್ದಿಗೆ ಪರಿಹಾರವಾಗಿ ಇಲ್ಲಿವೆ ಸರಳ ಮನೆ ಮದ್ದುಗಳು..

Health

ನಮ್ಮ ರ’ಕ್ತವು ಶುದ್ಧಿಯಾಗಿರುವುದು ಅತ್ಯಗತ್ಯ. ರ’ಕ್ತವು ಆಮ್ಲಜನಕ, ಹಾರ್ಮೋನ್ ಗಳು, ವಿಟಮಿನ್, ಮಿನರಲ್, ಮುಂತಾದ ಪೋಷ ಕಾಂಶಗಳಗಳನ್ನು ನಮ್ಮ ದೇಹದ ಪ್ರತಿಯೊಂದು ಜೀವ ಕೋಶಗಳಿಗೂ ತಲುಪಿಸುವ ಮಾಧ್ಯಮವಾಗಿದೆ. ರ’ಕ್ತದಲ್ಲಿ ವಿ’ಷಪೂರಿತ ಅಂಶಗಳು ಸೇರಿಕೊಂಡು ಆಶುದ್ಧಿಯಾದಾಗ ಇವುಗಳ ಸಾಗಣಿಕೆಯು ಸಾಧ್ಯವಾಗದೆ ದೇಹದಲ್ಲಿ ಅನೇಕ ರೋಗಗಳು ಉಲ್ಭಣಗೊಳ್ಳುತ್ತವೆ. ರ’ಕ್ತ ವಿ’ಷಮಯವಾಗಲು ಕಾರಣಗಳು, ಲಕ್ಷಣಗಳು ಮತ್ತು ಪರಿಹಾರ ಏನೆಂದು ತಿಳಿಯೋಣ.

ಚರ್ಮದರೋಗ ಅಂದರೆ ಮೈಮೇಲೆ ಗುಳ್ಳೆಗಳು, ಅಲರ್ಜಿ, ಮೊಡವೆಗಳು, ಸೋರಿಯಾಸಿಸ್, ಮಹಿಳೆಯರಲ್ಲಿ ಮುಟ್ಟಿನ ವೇಳೆ ಹೆಚ್ಚು ರ’ಕ್ತಸ್ರಾ’ವ ವಾಗುವುದು, ತಲೆನೋವು ಕೂದಲಿನ ಸಮಸ್ಯೆ ಇವೆಲ್ಲಾ ನಮ್ಮ ದೇಹದಲ್ಲಿ ರ’ಕ್ತ ವಿ’ಷಮಯವಾಗಿರುವ ಸಂಕೇತಗಳು. ರ’ಕ್ತವು ಅಶುದ್ಧ ಗೊಳ್ಳಲು ಮುಖ್ಯ ಕಾರಣವೆಂದರೆ ವಾಯುಮಾಲಿನ್ಯ, ಋಣಾತ್ಮಕ ಆಲೋಚನೆಗಳು, ಅತಿ ಹೆಚ್ಚು ಮಾಂ’ಸ ಸೇವನೆ, ಮಾ’ದಕ ದ್ರವ್ಯಗಳ ಸೇವನೆ, ಧೂ’ಮಪಾನ, ಹೆಚ್ಚು ಕರೆದ ತಿಂಡಿಗಳನ್ನು ತಿನ್ನುವುದು ಮತ್ತು ದೇಹದಲ್ಲಿ ಪಿತ್ತದ ಅಂಶ ಹೆಚ್ಚಾಗಿ ಇರುವುದು. ಕೆಲವು ಮನೆ ಮದ್ದುಗಳಿಂದ ನಮ್ಮ ರ’ಕ್ತವನ್ನು ಯಾವುದೇ ಚಿಕಿತ್ಸೆ ಇಲ್ಲದೆ ಶುದ್ಧಿಗೊಳಿಸಬಹುದಾಗಿದೆ. ಇದರಿಂದ ಚರ್ಮ ರೋಗಗಳು, ಕೂದಲು ಉದುರುವುದಕ್ಕೆ, ಪೋಷಕಾಂಶಗಳ ಕೊರತೆ ಎಲ್ಲಾ ಸಮಸ್ಯೆಗಳೂ ದೂರಾಗುತ್ತದೆ.

ದಾಸವಾಳ : ದಾಸವಾಳದ ಹೂ ಚರ್ಮ, ಹೃದಯದ ಆರೋಗ್ಯಕ್ಕೆ ಉತ್ತಮ ಔಷಧಿ. ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಪಾಲಿಫೇನಲ್ ಹೇರಳವಾಗಿರುತ್ತವೆ. ದಾಸವಾಳದ ಹೂವುಗಳನ್ನು ಒಣಗಿಸಿ ಅದರ ಟೀ ಸೇವಿಸುವುದರಿಂದ ರ’ಕ್ತವು ಶುದ್ಧಿ ಗೊಳ್ಳುತ್ತದೆ. (ಒಣಗಿದ ದಾಸವಾಳದ ಹೂವುಗಳನ್ನು ಸುಮಾರು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ) ಹೀಗೆ ಒಂದು ವಾರ ಅಥವಾ ನಿಮಗೆ ಬೇಕೆನಿಸಿದಾಗಲೆಲ್ಲ ದಾಸವಾಳದ ಹೂವಿನ ಟೀ ಸೇವಿಸಿ.

ಕಹಿ ಪದಾರ್ಥಗಳ ಸೇವನೆ: ಕಹಿ ಅಂಶವನ್ನು ಹೊಂದಿರುವ ತರಕಾರಿ ಅಥವಾ ಆಹಾರ ಪದಾರ್ಥಗಳು ಸ್ವಾಭಾವಿಕವಾಗಿ ರ’ಕ್ತವನ್ನು ಶುದ್ಧಿಗೊಳಿಸುವ ಗುಣವನ್ನು ಹೊಂದಿರುತ್ತವೆ. ಪ್ರತೀ ದಿನ ಅಥವಾ ಆಗಾಗ್ಗೆ ಹಾಗಲ ಕಾಯಿ ಸೇವಿಸುವುದರಿಂದ ರ’ಕ್ತದ ಅಶುದ್ದಿಯನ್ನು ನಿವಾರಿಸಬಹುದು.

ಬೇವು: ಬೇವು ಎಲ್ಲೆಡೆ ಕಂಡು ಬರುವ ಸಸ್ಯ. ಇದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಪ್ರತೀದಿನ ಬೆಳಗ್ಗೆ ಎರಡರಿಂದ ಮೂರು ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ನಮ್ಮ ರಕ್ತವು ಪರಿಶುದ್ಧಗೊಳ್ಳುತ್ತದೆ. ಈ ಯಾವುದಾದರೂ ಒಂದು ಮನೆ ಮನೆ ಮದ್ದಿನ ಜೊತೆಗೆ ಸರಿಯಾದ ಆಹಾರ ಕ್ರಮ, ಆಹಾರದಲ್ಲಿ ಕ್ಯಾರೆಟ್, ಬೀಟ್ರೂಟ್, ಸೌತೆ ಕಾಯಿ, ಸೊಪ್ಪು ಸೇರಿದಂತೆ ಹಸಿರು ತರಕಾರಿಗಳನ್ನು ಸೇವಿಸಿ. ಹರಿಷಿನದ ಹಾಲು, ಮೆಂತ್ಯ, ಕಲ್ಲುಸಕ್ಕರೆ, ಬೆಲ್ಲ ಸೇವನೆ ಕೂಡ ರ’ಕ್ತದ ಆರೋಗ್ಯಕ್ಕೆ ಉತ್ತಮ. ದಿನವೂ ಕನಿಷ್ಟ ಹದಿನೈದು ನಿಮಿಷ ಯೋಗ, ಕರೆದ ಆಹಾರ, ಧೂಮಪಾನ, ಮಧ್ಯಪಾನ ಮತ್ತು ವಾಯು ಮಾಲಿನ್ಯದಿಂದ ದೂರ ವಿರುವುದರಿಂದ ರಕ್ತದ ಶುದ್ಧಿಯನ್ನು ಕಾಪಾಡಿಕೊಳ್ಳ ಬಹುದು. ಹುಳಿ ಪದಾರ್ಥ ಗಳ ಸೇವನೆ, ಹಾಲಿನೊಂದಿಗೆ ಉಪ್ಪಿನ ಸೇವನೆ, ಸೋಡಾ ಚಿಪ್ಸ್ ಮೊದಲಾದ ಕರೆದೆ ತಿಂಡಿಗಳು ರ’ಕ್ತದ ಆರೋಗ್ಯಕ್ಕೆ ಮಾರಕ. ಆದ್ದರಿಂದ ಇವೆಲ್ಲವನ್ನೂ ಕಡಿಮೆ ಮಾಡಿ ಮೇಲೆ ತಿಳಿಸಿದಂತೆ ಸರಿಯಾದ ಮನೆ ಮದ್ದು ಆಹಾರಗಳನ್ನು ಸೇವಿಸಿ. ಇದರಿಂದ ರ’ಕ್ತ ಶುದ್ದಿಯಾಗುವುದಲ್ಲದೆ ದೇಹದಲ್ಲಿ ಉಂಟಾಗುವ ಇತರೆ ಕಾಯಿಲೆಗಳಿಂದಲೂ ಪಾರಾಗಬಹುದು.