ಅಯ್ಯೋ..ಇಲ್ಲಿ ನೋಡಿ ತಮಿಳು ಇಳವರಸಿ ಕನ್ನಡ ಪ್ರೇಮವ ! ಇವರೇ ಲೇಸು ಎಂದ ಕನ್ನಡಿಗರು..

Kannada News

ಇತ್ತೀಚೆಗಷ್ಟೆ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅಲಿಯಾಸ್ ಚಿನಮ್ಮ ಪರಪ್ಪನ ಅಗ್ರಹಾರ ಜೈ’ಲಿನಿಂದ ಬಿಡುಗಡೆಯಾಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ನೂರಾರು ಕಾರುಗಳಲ್ಲಿ ರಸ್ತೆಗಳನ್ನು ಬಂದ್ ಮಾಡಿಕೊಂಡು ಚೆನ್ನೈಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟು ಸುದ್ದಿಯಲ್ಲಿದ್ದಾರೆ. ಇವರ ಜೊತೆ ಇವರ ಸ್ನೇಹಿತೆ ಇಳವರಿಸಿ ಕೂಡ ಜೈ’ಲು ಶಿ’ಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ.

ಆಶ್ಚರ್ಯದ ವಿಷಯ ಎಂದರೆ ತಮಿಳಿನ ಇಳವರೆಸಿ ಕನ್ನಡ ಪ್ರೆಮಿಯಂತೆ. ಹಬ್ಬಾ.! ಕೇಳಲು ಆಶ್ಚರ್ಯವಾಗುತ್ತದೆ ತಮಿಳು ಖೈ’ದಿ ಕನ್ನಡ ಪ್ರೇಮಿಯೇ ಎನಿಸುತ್ತದೆ..ಇದು ನಿಜವಂತೆ. ಇಳವರಸಿ ಜೈಲಿನಲ್ಲಿ ಶಶಿಕಲಾಗೆ ಕನ್ನಡ ಟೀಚರ್ ಅಂತೆ. ಚಿನ್ನಮ್ಮಗಿಂತ ತುಂಬಾ ಬೇಗ ಕನ್ನಡ ಕಲಿತರಂತೆ. ಜೈಲಿನಲ್ಲಿ ಎಲ್ಲರ ಜೊತೆ ಕನ್ನಡದಲ್ಲೇ ಮಾತನಾಡುತ್ತಿದ್ದರಂತೆ. ಶಶಿಕಲಾಗೆ ಕನ್ನಡ ಅರ್ಥವಾಗದೇ ಇದ್ದಾಗ ಇವರು ತಿಳಿಸಿ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ ಅವರು ಜೈಲಿನಲ್ಲಿ ಕನ್ನಡ ಮಾತನಾಡಿಕೊಂಡು ಖುಷಿ ಖುಷಿಯಾಗಿ ಇರುತಿದ್ದರಂತೆ.

ಬೇಜಾರು ಮಾಡಿಕೊಂಡು ಮೂಲೆಯಲ್ಲಿ ಕೂರದೆ ಕೃಷಿ ಮಾಡುತ್ತಿದ್ದರಂತೆ. ತೊಗರಿ ಸೇರಿ ಹಲವಾರು ಬೆಳೆ ಬೆಳೆದು ಜೈಲಿಗೆ ಲಾಭ ಮಾಡಿಕೊಟ್ಟಿದ್ದಾರಂತೆ. ಜೈಲಿನಲ್ಲೇ ತುಳಸಿ ಕಟ್ಟೆಯನ್ನು ಸಿದ್ಧಗೊಳಿಸಿ ದಿನವೂ ಪೂಜೆ ಮಾಡುತ್ತಿದ್ದರಂತೆ. ಜೈಲಿನ ಕೈದಿಗಳಿಗೆ ಪ್ರವಚನ ಹೇಳುತ್ತಿದ್ದರಂತೆ. ಹೀಗೆ ಅವರು ಎಲ್ಲರೊಂದಿಗೆ ನಮ್ಮ ಕನ್ನಡದಲ್ಲಿ ಮಾತನಾಡುತ್ತಾ ಸಾಧ್ಯವಾದಷ್ಟು ಸಂತೋಷದಿಂದ ಇರಲು ಪ್ರಯತಿಸುತಿದ್ದರು. ಮತ್ತು ಬಿಡುಗಡೆಯಾಗಿ ಜೈ’ಲಿನಿಂದ ಹೊರ ಬರುವಾಗ ಜೈಲು ಸಿಬ್ಬಂದಿಗಳಿಗೆ ಕನ್ನಡದಲ್ಲೇ ಧನ್ಯವಾದ ಹೇಳಿ ಹೋದ ವಿಷಯಗಳು ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿವೆ.

ಇಳವರಸಿಯ ಕನ್ನಡ ಪ್ರೇಮಕ್ಕೆ ಕನ್ನಡಿಗರು ಶಬಾಸ್ ಎಂದಿದ್ದಾರೆ. ಕೆಲ ಕನ್ನಡ ನಟ ನಟಿಯರೇ ಕನ್ನಡವನ್ನು ಕಡೆಗಾಣಿಸುತ್ತಾರೆ. ಕನ್ನಡ ಮಾತನಾಡುವುದು ಕಷ್ಟ ಕಷ್ಟ ಎಂದು ಹೇಳಿ ಬಿಲ್ಡ್ ಅಪ್ ತೆಗೆದುಕೊಳ್ಳುತ್ತಾರೆ. ಇಂತಹ ನಾಡ ದ್ರೋ’ಹಿಗಳಿಗಿಂತ ಇಳವರಿಸಿಯೇ ಲೇಸು ಎನ್ನುತ್ತಿದ್ದಾರೆ ಕನ್ನಡಿಗರು. ಅಂದ ಹಾಗೆ ಶಶಿಕಲಾ ಮತ್ತು ಇಳವರಸಿಯನ್ನು ಭ್ರ’ಷ್ಟಚಾರದ ಆರೋಪದ ಮೇಲೆ ಬಂ’ಧಿಸಿದ್ದರು. ನಂತರ ನ್ಯಾಯಾಲಯ ಇವರಿಗೆ ನಾಲ್ಕು ವರ್ಷ ಜೈ’ಲು ಶಿ’ಕ್ಷೆ ವಿಧಿಸಿತ್ತು. ಪರಪ್ಪನ ಅಗ್ರಹಾರದಲ್ಲಿ ಇವರು ನಾಲ್ಕು ವರ್ಷ ಕಳೆದು ಈ ವರ್ಷ ಬಿಡುಗಡೆಗೊಂಡಿದ್ದಾರೆ.