ಮದ್ವೆ ಗಂಡು ಕಲ್ಯಾಣ ಮಂಟಪಕ್ಕೆ ಬರೋದು ಲೇಟ್ ಆಗಿದ್ದಕ್ಕೆ ವಧು ಮಾಡಿದ್ದೇನು ಗೊತ್ತಾ.!?

Advertisements

ನಮಸ್ತೇ ಸ್ನೇಹಿತರೇ, ಈಗಿನ ಮದ್ವೆಗಳೇ ವಿಚಿತ್ರ, ಗಂಡಾಗಲಿ, ಹೆಣ್ಣಾಗಲಿ ತಾಳಿ ಕಟ್ಟುವವರೆಗೂ ಮದ್ವೆ ಆಗುತ್ತೆ ಅನ್ನೋದು ಗ್ಯಾರಂಟಿ ಇಲ್ಲ. ಮದ್ವೆ ಮಂಟಪದಲ್ಲೇ ವಿಚಿತ್ರ ಕಾರಣಗಳಿಗಾಗಿ ಮದ್ವೆಗಳು ನಿಂತುಹೋದ ನಿದರ್ಶನಗಳು ಸಾವಿರಾರು ಇವೆ. ಇತ್ತೀಚೆಗಂತೂ ಈತರದ ನಿದರ್ಶನಗಳು ನಡೆಯುವುದು ಹೆಚ್ಚಾಗಿಬಿಟ್ಟಿದೆ. ಈಗ ಮದ್ವೆ ಮಂಟಪದಲ್ಲಿಯೇ ಇದೆ ತರಹದ ಘಟನೆಯೊಂದು ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು. ಇಲ್ಲಿ ಮದುವೆ ನಡೆಯುವ ಸಲುವಾಗಿ ಎಲ್ಲಾ ಸಿದ್ದತೆಗಳು ನಡೆದಿದ್ದವು. ಅದಾಗಲೇ ವಧು ಮತ್ತು ಅವರ ಕುಟುಂಬದವರು ಕಲ್ಯಾಣ ಮಂಟಪಕ್ಕೆ ಬಂದು ವರನ ಆಗಮನಕ್ಕಾಗಿ ಕಾಯುತ್ತಿದ್ದರು. ಸಂಜೆ ನಾಲ್ಕು ಗಂಟೆಯ ಸಮಯಕ್ಕೆ ಮದುವೆಯ ಶುಭಮಹೂರ್ತ ನಿಗದಿಯಾಗಿತ್ತು.. ಇನ್ನು ಈ ಘಟನೆ ನಡೆದಿರುವುದು ಮುಂಬೈನ ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಂಗ್ರಾ ಎಂಬ ಗ್ರಾಮದಲ್ಲಿ.

Advertisements

ಆದರೆ ವರ ಮಾತ್ರ ಇನ್ನು ಕಲ್ಯಾಣ ಮಂಟಪಕ್ಕೆ ಬಂದೆ ಇರಲಿಲ್ಲ. ಮಹೂರ್ತ ಫಿಕ್ಸ್ ಆಗಿದ್ದ ನಾಲ್ಕು ಗಂಟೆ ಕೂಡ ಮುಗಿದು ಹೋಗಿ ಸಮಯ ಮುಂದೆ ಹೋಗಿತ್ತು. ಅಸಲಿಗೆ ಮಧುಮಗ ನಾಲ್ಕು ಗಂಟೆ ಇರಲಿ, ಗಂಟೆ ಎಂಟಾದರೂ ಮದ್ವೆ ಮಂಟಪಕ್ಕೆ ಬರುವ ಸುಳಿವೇ ಸಿಗಲಿಲ್ಲ. ಇನ್ನು ವರನ ಬರುವಿಕೆಗಾಗಿ ಕಾದು ಕಾದು ಸುಸ್ತಾಗಿದ್ದ ವಧು ಮತ್ತು ಅವರ ಕುಟುಂಬದವರು, ಕೊನೆಗೆ ವಧುವಿನ ತಂದೆ ಮದುವೆಗೆ ಬಂದಿದ್ದ ತಮ್ಮ ಸಂಬದಿಕರಲ್ಲೇ ಒಬ್ಬರಿಗೆ ಅದೇ ಮದ್ವೆ ಮಂಟಪದಲ್ಲಿ ತಮ್ಮ ಮಗಳಿಗೆ ಕೊಟ್ಟು ಮದ್ವೆ ಮಾಡಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡಿರುವ ವಧುವಿನ ತಾಯಿ ನಾವು ಎಂಟು ಗಂಟೆಯವರೆಗೂ ವರನ ಬರುವಿಕೆಗಾಗಿ ಕಾದೆವು. ಆದರೆ ಎಂಟು ಗಂಟೆಯ ಬಳಿಕ ಮದ್ವೆ ಮಂಟಪಕ್ಕೆ ಬಂದಿದ್ದ ವರ ಕು’ಡಿದಿದ್ದ. ಸ್ನೇಹಿತರ ಜೊತೆ ಸೇರಿ ಸಿಕ್ಕಾಪಟ್ಟೆ ಕು’ಡಿದಿದ್ದು, ಅದರ ಅಮಲಿನಲ್ಲೇ ಕುಣಿದು ಕುಪ್ಪಳಿಸಿ ಮದ್ವೆ ಮಂಟಪಕ್ಕೆ ಬಂದಿದ್ದ.

ನಾಲ್ಕು ಗಂಟೆಗೆ ಇದ್ದ ಮಹೂರ್ತಕ್ಕೆ ಬಾರದೆ, ಎಂಟು ಗಂಟೆಯ ಮೇಲೆ ಅದು ಪಾ’ನಮತ್ತನಾಗಿ ಬಂದು ನಮ್ಮ ಮೇಲೆಯೇ ಜ’ಗಳ ಮಾಡಿದ್ದ. ಮದ್ವೆಯ ದಿನವೇ ಈಗಾದ್ರೆ, ಮದ್ವೆ ಆದ ಮೇಲೆ ನಮ್ಮ ಮಗಳ ಪರಿಸ್ಥಿತಿ ಹೇಗಿರಬೇಡ ಎಂದು ತಿಳಿದು,ನಮ್ಮ ಸಂಬದಿಕರಲ್ಲೇ ಒಬ್ಬರಿಗೆ ನಮ್ಮ ಮಗಳನ್ನ ಕೊಟ್ಟು, ಇದೆ ಮದ್ವೆ ಮಂಟಪದಲ್ಲಿ ಮದ್ವೆ ಮಾಡಿದ್ದೇವೆ. ವರ ಮತ್ತು ಆತನ ಜೊತೆಗಿದ್ದವರು ಕು’ಡಿದು ಕುಣಿದು ಕಪ್ಪಳಿಸುತ್ತಿದ್ದರು. ಅವರಿಗೆ ಮದ್ವೆ ಕಡೆ ಗಮನವೇ ಇರಲಿಲ್ಲ. ಆಗಾಗಿ ಮದ್ವೆಗೆ ಬಂದಿದ್ದ ನಮ್ಮ ಸಂಬದಿಕರನ್ನ ಕಾಂಟಾಕ್ಟ್ ಮಾಡಿ ಅವರಲ್ಲಿ ಒಬ್ಬರಿಗೆ ನಮ್ಮ ಮಗಳ ಜೊತೆ ಮದ್ವೆ ಮಾಡಿದ್ದೇವೆ ಎಂದು ವಧುವಿನ ತಂದೆ ಹೇಳುತ್ತಾರೆ.