ಮದುವೆಯೆಂದರೆ ಅದು ಎಲ್ಲಾರ ಜೀವನದಲ್ಲಿ ಬರುವ ಒಂದು ಅತ್ಯುತ್ತಮ ಘಟ್ಟ. ಆದರೆ ನಮ್ಮ ಭಾರತದಲ್ಲಿ ಸಂಬಂಧಿಗಳ ನಡುವೆ ಹೆಚ್ಚಾಗಿ ಮದುವೆಯಾಗುವುದು ಸಾಮಾನ್ಯವಾಗಿದೆ. ಹೌದು, ರಕ್ತ ಸಂಬಂಧಿಗಳಾದ ಮಾವನ ಮಕ್ಕಳು, ಅಕ್ಕನ ಮಕ್ಕಳ ಜೊತೆಗೆ ಹೆಚ್ಚಾಗಿ ಮದುವೆಯಾಗುತ್ತಾರೆ.

ಆದರೆ ರಕ್ತಸಂಬಂಧಿಗಳಲ್ಲಿ ಮದುವೆಯಾಗುವುದರಿಂದ ಅಪಾಯವೇ ಹೆಚ್ಚು.ಸಂಶೋಧನೆಯೊಂದರ ಪ್ರಕಾರ ಸಂಬಂಧಿಗಳಲ್ಲಿ ಮದುವೆಯಾದ ದಂಪತಿಗಳಲ್ಲಿ ಹುಟ್ಟುವ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ ಎಂದು ಸಂಶೋಧನೆ ಹೇಳುತ್ತದೆ. ಆದರೆ ಈ ಅಪಾಯ ೪೦ವರ್ಷದ ವಯಸ್ಸಿನ ಮಹಿಳೆಯರ ಜನಿಸುವ ಮಕ್ಕಳಿಗೆ ಕಡಿಮೆ ಎಂದು ಸಂಶೋಧನೆಯಲ್ಲಿ ವರದಿಯಾಗಿದೆ.

ಇನ್ನು ರಕ್ತಸಂಬಂಧಿಗಳಲ್ಲಿ ಮದುವೆಯಾದ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಸಂಭಾವ್ಯತೆ ಶೇಕಡಾ ಎರಡರಷ್ಟು ಹೆಚ್ಚಿರುತ್ತದೆ ಎಂದು ಹೇಳಲಾಗಿದೆ. ಆದರೆ ೪೦ ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಜನಿಸುವ ಮಕ್ಕಳಿಗೆ ಈ ಅಪಾಯ ಶೇ 4.4ರಷ್ಟಿರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಹೀಗಾಗಿ ರಕ್ತಸಂಬಂಧಿಗಳಲ್ಲಿ ಹುಟ್ಟುವ ಮಕ್ಕಳು ಹೆಚ್ಚಾಗಿ ಅಂಗವಿಕಲತೆಗೆ ತುತ್ತಾಗುತ್ತಾರೆ. ಆದ್ದರಿಂದ ಸಂಬಂಧಿಗಳಲ್ಲಿ ಮದುವೆಯಾಗುವುದು ಸೂಕ್ತವಲ್ಲ ಎಂದು ಸಂಶೋಧನೆಗಳು ಹೇಳುತ್ತವೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ..