ಮಹಾ ಮಳೆಯಲ್ಲಿ ವ್ಯಕ್ತಿಯನ್ನ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳಾ ಪೊಲೀಸ್.!ವಿಡಿಯೋ ವೈರಲ್..

Inspire

ಹೌದು ಸ್ನೇಹಿತರೆ ತಮಿಳುನಾಡಿನಲ್ಲಿ ಇದೀಗ ಭೀ’ಕರ ಮಳೆ ಆಗುತ್ತಿದ್ದು, ಅಲ್ಲಿಯ ಜನರ ಜೀವನ ಅಸ್ತವ್ಯಸ್ತ ಆಗಿರೋದು ನಮಗೆಲ್ಲಾ ತಿಳಿದಿರೋ ವಿಷಯವೇ. ಹೆಚ್ಚಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರ ಜೀವದ ಹಂಗನ್ನೇ ತೊರೆದು, ಕಷ್ಟದಲ್ಲಿರುವ ಜನರನ್ನ ಕಾಪಾಡಲು, ಅವರ ಜೀವವನ್ನು ಉಳಿಸಲು ಮುಂದಾಗುತ್ತಿದ್ದಾರೆ. ಅವರನ್ನು ಪ್ರಾ’ಣಾಪಾಯದಿಂದ ಪಾರು ಮಾಡಲು ಎಲ್ಲಾ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅಲ್ಲಿಯ ರಸ್ತೆಗಳೆಲ್ಲಾ ನೀರಿನಿಂದ ತುಂಬಿ ತುಳುಕಾಡುತ್ತಿವೆ. ಇನ್ನೊಂದು ಕಡೆ ಭಾರೀ ಮಳೆ ಮತ್ತು ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ಮೇರೆಗೆ, ಗುರುವಾರ ಸಂಜೆ ಆರು ಗಂಟೆಯವರೆಗೆ ಯಾವುದೇ ವಿಮಾನ ಆಗಮನ ಆಗಬಾರದೆಂದು ಚೆನ್ನೈ ವಿಮಾನ ನಿಲ್ದಾಣ ನಿರ್ಬಂಧ ಹೇರಿದೆ ಎಂದು ತಿಳಿದುಬಂದಿದೆ.

ಹೌದು ಇದೆಲ್ಲದರ ನಡುವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು, ಹೆಚ್ಚು ಮಳೆಯಿಂದ ಪ್ರಜ್ಞೆ ತಪ್ಪಿರುವ ಒಬ್ಬ ಪ್ರಜ್ಞಾಹೀನ ಸ್ಥಿತಿ ವ್ಯಕ್ತಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಜೊತೆಗೆ ಹೆಚ್ಚು ಪ್ರಶಂಸೆಗೆ ಒಳಗಾಗುತ್ತಿದೆ. ವಿಡಿಯೋ ಇದೀಗ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಹೆಗಲಮೇಲೆ ಹೊತ್ತು ಹೋಗುತ್ತಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಅವರ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಜೊತೆಗೆ ಇನ್ಸ್ಪೆಕ್ಟರ್ ರಾಜೇಶ್ವರಿ ಅವರ ಭುಜದ ಶಕ್ತಿ ಯಾರಿಗೂ ಇಲ್ಲ ಎಂದು ಬರೆದು, ಜೊತೆಯಲ್ಲಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲು ಆಟೋ ಹತ್ತಿಸಿದ್ದ ಸಹಾಯ ತುಂಬಾನೇ ಶ್ಲಾಘನೀಯ’ ಎಂದು ಬರೆದುಕೊಂಡಿದ್ದಾರೆ. ಹೌದು ಮಹಿಳಾ ಪೊಲೀಸ್ ಅಧಿಕಾರಿಯಾಗಿ ಇಂಥಾ ಕೆಲ್ಸ ಮಾಡಿದ್ದ ಇನ್ಸ್ಪೆಕ್ಟರ್ ಗೆ ಇದೀಗ ನೆಟ್ಟಿಗರು ಸಹ ಸೆಲ್ಯೂಟ್ ಹೊಡೆಯುತ್ತಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಇಂತಹ ಅಧಿಕಾರಿಗಳು ನಮಗೆ ಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ನೀವು ಕೂಡ ಒಂದು ಬಾರಿ ಈ ವಿಡಿಯೋ ನೋಡಿ, ನಿಮಗೆ ಇಷ್ಟ ಆದ್ರೆ ಹೆಚ್ಚಿನ ಮಟ್ಟದಲ್ಲಿ ವಿಡೀಯೋ ಶೇರ್ ಮಾಡಿ ಧನ್ಯವಾದಗಳು….