ಈ ಒಂದೇ ಒಂದು ಮಾವಿನ ಮರಕ್ಕೆ 6 ನಾಯಿ 4 ಜನ ಭದ್ರತಾ ಪಡೆ ನೇಮಿಸಿದ ರೈತ ! ಜಗತ್ತಿನಲ್ಲೇ ಅತೀ ಹೆಚ್ಚು ದುಬಾರಿ ಇದು..

Kannada Mahiti
Advertisements

ಸ್ನೇಹಿತರೇ, ಇದು ಮಾವಿನ ಹಣ್ಣಿನ ಯುಗ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ರಸಭರಿತವಾದ ಮಾವಿನಹಣ್ಣುಗಳು ಸಿಗುತ್ತಿವೆ. ಆದರೆ ಜಗತ್ತಿನ ಅತೀ ದುಬಾರಿಯಾದ ಮಾವಿನ ಹಣ್ಣಿನ ಬಗ್ಗೆ ಕೇಳಿದ್ದೀರಾ..ಹೌದು, ಆ ಮಾವಿನ ಎಷ್ಟು ದುಬಾರಿಯೆಂದರೆ ತಾನು ಬೆಳೆದ ಮಾವಿನ ಹಣ್ಣಿನ ಮರಗಳನ್ನ ಕಾಯಲೆಂದೇ ಭದ್ರತಾಪಡೆಯನ್ನೇ ನೇಮಿಸಿದ್ದಾನೆ. ಅದು ಕೇವಲ ಏಳು ಮಾವಿನ ಮರಗಳಿಗೆ ಭದ್ರತಾ ಪಡೆ ನೇಮಿಸಿದ್ದಾನೆ ಎಂದರೆ ಆ ಮಾವಿನ ಹಣ್ಣುಗಳಿಗೆ ಇರೋ ಬೆಳೆಯನ್ನ ಊಹಿಸಿ ನೋಡಿ..ನಮ್ಮಲ್ಲಿರುವ ಯಾವುದೇ ವಿಶೇಷ ವಸ್ತುವಿನ ಬಗ್ಗೆ ಬೇರೆಯವರು ಹೇಳಿದಾಗ ಮಾತ್ರ ಆ ವಸ್ತುವಿನ ಬೆಲೆ ನಮಗೆ ಅರ್ಥವಾಗುತ್ತದೆ. ಇನ್ನು ನಾವು ಹೇಳುತ್ತಿರುವ ದುಬಾರಿಯಾದ ಈ ಮಾವಿನ ಹಣ್ನನ್ನ ಬೆಳೆದವರು ಮಧ್ಯ ಪ್ರದೇಶದ ಜಬಲ್ ಪುರದ ಕೃಷಿಕುಟುಂಬಕ್ಕೆ ಸೇರಿದ ರೈತ..

[widget id=”custom_html-4″]

Advertisements

ಹೌದು, ರೈತರು ಬೆಳೆದ ವಸ್ತುಗಳಿಗೆ ಸೂಕ್ತ ಬೆಲೆ ಸಿಗದೇ ತಾವು ಬೆಳೆದ ಬೆಳೆಗಳನ್ನ ರಸ್ತೆಗೆ ಸುರಿಯುವುದನ್ನ ನಾವು ನೋಡಿದ್ದೇವೆ. ಆದರೆ ಮಧ್ಯಪ್ರದೇಶದ ಸಂಕಲ್ಪ್ ಪರಿಹಾರ್ ಮತ್ತು ರಾಣಿ ಎಂಬ ಈ ದಂಪತಿ ಬೆಳೆದ ಮಾವಿನ ಹಣ್ಣುಗಳಿಗೆ ಜಗತ್ತಿನಲ್ಲೇ ದುಬಾರಿಯಾದ ಬೆಲೆ ಸಿಗುತ್ತಿದೆ. ಇಷ್ಟೊಂದು ದುಬಾರಿಯಾದ ಮಾವಿನ ಹಣ್ಣು ಈ ರೈತನ ಬಳಿ ಬಿಟ್ಟು ಬೇರೆಲ್ಲೆಯೂ ಸಿಗುತ್ತಿಲ್ಲ ಕಾರಣವಾದ್ದರಿಂದ ಮಿಯಾಝಕೀ ಅನ್ನೋ ಈ ವಿಶೇಷವಾದ ಮಾವಿನ ಹಣ್ಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತೀ ಕೇಜಿಗೆ ಬರೋಬ್ಬರಿ 2.70 ಲಕ್ಷಕ್ಕಿಂತ ಹೆಚ್ಚು ಬೆಲೆ ಸಿಗುತ್ತಿದೆ. ಅಸಲಿಗೆ ಜಪಾನ್ ಮೂಲದ ಮಾವಿನ ತಳಿಯಾಗಿರುವ ಇದರ ಬಗ್ಗೆ ತಿಳಿಯದ ಈ ರೈತ ದಂಪತಿ ಧಾಮಿನಿ ಎಂದು ಹೆಸರಿಟ್ಟಿದ್ದರು.

[widget id=”custom_html-4″]

ಇನ್ನು ಇಂತಹ ದುಬಾರಿಯಾದ ಹಣ್ಣು ಬೆಳೆಯುತ್ತಿದ್ದಾರೆ ಎಂದರೆ ಕಳ್ಳರು ಬಿಡುತ್ತಾರೆಯೇ ಹೇಳಿ..ಹಾಗಾಗಿ ಸಂಕಲ್ಪ್ ಪರಿಹಾರ್ ಮತ್ತು ರಾಣಿ ರೈತ ದಂಪತಿ ವಿಶೇಷವಾದ ದುಬಾರಿ ಬೆಲೆ ಬಾಳುವ ಮಾವಿನ ಮರಗಳನ್ನ ಕಾಯುವುದೋಕೋಸ್ಕರ ಆರು ನಾಯಿಗಳ ಜೊತೆಯಲ್ಲಿ ನಾಲ್ಕು ಜನ ಇರುವ ಬೆಂಗಾವಲು ಪಡೆಯನ್ನೇ ನೇಮಿಸಿದ್ದಾರೆ. ಇನ್ನು ಇವರ ತೋಟದಲ್ಲಿ ಏಳು ಮರಗಳಿದ್ದು, ಅದರಲ್ಲಿ ಒಂದೇ ಒಂದು ಮಾವಿನ ಮರದ ಹಣ್ಣುಗಳಿಗೆ ಅಂತರಾಷ್ತ್ರೀಯ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದ್ದು, ದುಬಾರಿ ಬೆಲೆ ಬಾಳುತ್ತಿದೆ ಎಂದರೆ ಅಚ್ಚರಿ ಆಗದೆ ಇರೋದಿಲ್ಲ. ಸ್ನೇಹಿತರೇ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..