ಜಬರ್ದಸ್ತ್ ನರೇಶ್ ಹೆಂಡತಿ ಮಾಡಿಕೊಂಡಿದ್ದೇನು ಗೊತ್ತಾ? ಖ್ಯಾತ ಕಾಮೆಡಿಯನ್ ವಯಸ್ಸು ಕೇಳಿದ್ರೆ ನೀವು ನಂಬೋಲ್ಲ..

Entertainment

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿದೆ. ತೆಲುಗಿನ ಖ್ಯಾತ ಕಾಮಿಡಿ ಕಾರ್ಯಕ್ರಮ ಜಬರ್ದಸ್ತ್ ನ ಸ್ಟಾರ್ ಕಾಮಿಡಿಯನ್ ಆಗಿರುವ ನರೇಶ್ ಇದಕ್ಕೊಂದು ನಿದರ್ಶನ. ತುಂಬಾ ಕಡಿಮೆ ಸಮಯದಲ್ಲಿ ಜಬರ್ದಸ್ತ್ ಕಾಮಿಡಿ ಕಾರ್ಯಕ್ರಮದ ಮೂಲಕ ತುಂಬಾ ಫೇಮಸ್ ಆಗಿದ್ದಾನೆ ಹಾಸ್ಯ ಕಲಾವಿದ ನರೇಶ್. ಈತನ ಮೂಲ ಹೆಸರು ಪೊಟ್ಟಿ ರಮೇಶ್ ಎಂದು. ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಜಬರ್ದಸ್ತ್ ನರೇಶ್ ಅಂತಲೇ ಫೇಮಸ್ ಆಗಿದ್ದಾನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ನರೇಶ್ ಅವರ ಹಾಸ್ಯ ಇಷ್ಟಪಡುವ ಲಕ್ಷಾಂತರ ಮಂದಿ ವೀಕ್ಷಕರಿದ್ದಾರೆ. ಪುಟ್ಟ ಬಾಲಕನಂತೆ ಕಾಣುವ ನರೇಶ್ ತನ್ನ ವಿಭಿನ್ನ ಕಾಮಿಡಿಯ ಪಂಚ್ ಗಳಿಂದ ವೀಕ್ಷಕರನ್ನ ಹಾಸ್ಯದ ಕಚಗುಳಿಯಲ್ಲಿ ತೇಲಿಸುವಲ್ಲಿ ಚತುರನೆ ಸರಿ..

ಅಭ್ಯಾಸ ಮಾಡದೆಯೇ ಸ್ಕಿಟ್ ಗಳನ್ನ ತುಂಬಾ ಸುಲಭವಾಗಿ ಲೀಲಾಜಾಲವಾಗಿ ಅಭಿನಯ ಮಾಡುತ್ತಾನೆ ನರೇಶ್. ಇನ್ನು ಇವರ ತಂಡದ ನಾಯಕ ಕೂಡ ತಮ್ಮ ತಂಡಕ್ಕೆ ಉತ್ತಮ ಹೆಸರು ಬರುವಲ್ಲಿ ನರೇಶ್ ಅವರ ಪಾತ್ರ ಕೂಡ ದೊಡ್ಡದಿದೆ ಎಂದು ಹೇಳಿದ್ದಾರೆ. ತನ್ನ ದೇಹದ ಕಾರಣದಿಂದಾಗಿ ನೋವು ಅವಮಾನಗಳನ್ನ ಎದುರಿಸಿದ್ದ ನರೇಶ್, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದು, ಜಬರ್ದಸ್ತ್  ಕಾರ್ಯಕ್ರಮಕ್ಕೆ ಬಂದ ಮೇಲೆ ತುಂಬಾ ಹೆಸರು ಮಾಡಿದ್ದು, ಅವಮಾನ ಪಟ್ಟಿದ್ದಕ್ಕೆ ಈಗ ಸನ್ಮಾನ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ಇನ್ನು ಆರ್ಥಿಕವಾಗಿಯೂ ಕೂಡ ಬೆಳೆಯುತ್ತಿದ್ದಾರೆ. ಸಿನಿಮಾ ನಟರಿಗೂ ಕಡಿಮೆಯಿಲ್ಲ ಎಂಬಂತೆ ಫ್ಯಾನ್ ಫಾಲೋಯಿಂಗ್ ಈತನಿಗೆ ಇದೆ..

ಇನ್ನು ಜಬರ್ದಸ್ತ್  ನರೇಶ್ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, 17 ಜುಲೈ 2000ನೇ ಇಸವಿಯಲ್ಲಿ ಹುಟ್ಟಿದ ನರೇಶ್ ಗೆ ಈಗ 21ವರ್ಷ. ತೆಲಂಗಾಣದ ವಾರಂಗಲ್ ನ ಬಡಕುಟುಂಬವೊಂದರಲ್ಲಿ ನರೇಶ್ ಹುಟ್ಟಿದ್ದು. ಶಾಲೆಯ ವಿಧ್ಯಭ್ಯಾಸವನ್ನ ವಾರಂಗಲ್ ನಲ್ಲೆ ಮುಗಿಸಿದ್ದ ನರೇಶ್ ಪದವಿ ಪಡೆಯಬೇಕೆಂದು ಹೈದರಾಬಾದ್ ನ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿ ಅಂಡ್ ಸೈನ್ಸ್ ಕಾಲೇಜಿಗೆ ಸೇರಿದ. ಆದರೆ ಅಭಿನಯ ಮಾಡಬೇಕೆಂಬ ಕನಸು ಕಂಡಿದ್ದ ನರೇಶ್ ತನ್ನ ಪದವಿ ವಿಧ್ಯಾಭ್ಯಾಸವನ್ನ ಅರ್ಧಕ್ಕೆ ಬಿಟ್ಟು, ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ. ತನ್ನ ದೇಹ ಬೆಳವಣಿಗೆ ಆಗದ ಕಾರಣ ತುಂಬಾ ನೋವು ತಿಂದಿದ್ದ ನರೇಶ್ ತನ್ನ ಎಲ್ಲಾ ಚಿಂತೆ ನೋವುಗಳನ್ನ ಪಕ್ಕಕ್ಕಿಟ್ಟು ಇಂದು ಹಾಸ್ಯ ಕಲಾವಿದನಾಗಿ ತುಂಬಾ ಎತ್ತರಕ್ಕೆ ಬೆಳೆದಿದ್ದಾನೆ.

ಇನ್ನು ನರೇಶ್ ಗೆ ೨೦೧೫ರಲ್ಲೇ ಹೈದರಾಬಾದ್ ನ ತ್ರಿಪುರಾಂಬಿಕಾ ಎಂಬುವವರನ್ನ ಮದ್ವೆಯಾಗಿದ್ದು, ಆ ಸಮಯಕ್ಕೆ ತ್ರಿಪುರಾಂಬಿಕಾ ನರೇಶ್ ಗಿಂತ ಐದಾರು ವರ್ಷ ದೊದ್ದವಳಾಗಿದ್ದಳು ಎಂದು ಹೇಳಲಾಗಿದೆ. ಕೆಲ ಮಾಹಿತಿಗಳ ಪ್ರಕಾರ ನರೇಶ್ ಅವರ ಪತ್ನಿ ಮದ್ವೆಯಾದ ಕೆಲ ವರ್ಷಗಳಲ್ಲೇ ಆ’ತ್ಮಹ’ತ್ಯೆ ಮಾಡಿಕೊಂಡಿದ್ದು, ಇದಕ್ಕೆ ವ’ರದಕ್ಷಿಣಯೇ ಕಾರಣ ಎಂದು, ತ್ರಿಪುರಾಂಬಿಕಾ ತಂದೆ ನರೇಶ್ ಮತ್ತು ಅವರ ಮನೆಯವರ ಮೇಲೆ ಕೇಸ್ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಇದೆ. ಒಟ್ಟಿನಲ್ಲಿ ನರೇಶ್ ಅವರ ಅಭಿನಯ ವಿಚಾರದಲ್ಲಿ ಹೇಳುವುದಾದರೆ ನರೇಶ್ ಸಾಧನೆ ಜೀವನದಲ್ಲಿ ಏನಾದರು ಮಾಡಬೇಕೆಂಬ ಛಲ ಇರುವವರಿಗೆ ಸ್ಫೂರ್ತಿ ಎಂದರೆ ತಪ್ಪಾಗೊದಿಲ್ಲ..