ಹೇಗಿದೆ ನೋಡಿ ಜಗ್ಗಣ್ಣ ಕಟ್ಟಿಸಿಕೊಟ್ಟ ಅಂಧ ಸಹೋದರಿಯರ ಹೊಸ ಮನೆ..

Advertisements

ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಂಗಿಂಗ್ ರಿಯಾಲಿಟಿ ಶೋಗೆ ಬಂದಿದ್ದ, ತುಮುಕೂರು ಜಿಲ್ಲೆಯ ಮಧುಗಿರಿಯವರಾದ ಅಂಧ ಸಹೋದರಿಯರಾದ ರತ್ನಮ್ಮ ಮತ್ತು ಮಂಜಮ್ಮ ಜೀವನಕ್ಕಾಗಿ ತಾವು ಅನುಭವಿಸುತ್ತಿರುವ ನೋವು ಕಷ್ಟಗಳ ಬಗ್ಗೆ ವೇದಿಕೆ ಮೇಲೆ ಹೇಳಿಕೊಂಡಿದ್ದರು.

Advertisements

ಇನ್ನು ಇವರ ಕಷ್ಟವನ್ನ ಆಲಿಸಿದ ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ರವರು ರಾಯರ ಕೃಪೆ ಆಗಿದ್ದು, ಈ ಅಂಧ ಸಹೋದರಿಯರಿಗೆ ಒಂದೇ ತಿಂಗಳಿನಲ್ಲಿ ಮನೆ ಕಟ್ಟಿಸಿಕೊಡುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇನ್ನು ಜಗ್ಗಣ್ಣ ತಾವು ಆಡಿದ ಮಾತಿನಂತಯೇ ನಡೆದುಕೊಂಡಿದ್ದಾರೆ. ಕೇವಲ ಒಂದೇ ತಿಂಗಳಿನಲ್ಲಿ ಅಂಧ ಸಹೋದರಿಯರಿಗಾಗಿ ಮನೆಯನ್ನ ಕಟ್ಟಿಸಿಕೊಟ್ಟಿದ್ದು ಗೃಹ ಪ್ರವೇಶವನ್ನ ಕೂಡ ತಮ್ಮ ಕೈನಾರೆ ನೆರವೇರಿಸಲಿದ್ದಾರೆ.

ಇನ್ನು ಕೇವಲ ಒಂದೇ ತಿಂಗಳಿನಲ್ಲಿ ಅಂಧ ಸಹೋದರಿಯರಿಗೆ ಮನೆ ಕಟ್ಟಿ ಕೊಡಲು ಕಾರಣರಾದವರು ಕೊರಟಗೆರೆಯ ಜಗ್ಗೇಶ್ ಅಭಿಮಾನಿಗಳ ಸಂಘ ಹಾಗೂ ಫ್ರೆಂಡ್ಸ್ ಗ್ರೂಪ್. ಇದೀಗ ಆ ಮನೆ ಸಂಪೂರ್ಣವಾಗಿ ರೆಡಿಯಾಗಿದ್ದು ಇದೆ ತಿಂಗಳು ೧೨ರಂದು ಗೃಹ ಪ್ರವೇಷ ನಡೆಯಲಿದೆ. ಇನ್ನು ರೆಡಿಯಾಗಿರುವ ಮನೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಸಾಮಾಜಿಕ ಕಳಕಳಿ ಇರುವ ಜಗ್ಗೇಶ್ ರವರಿಗೆ ಧನ್ಯವಾದಗಳನ್ನ ತಿಳಿಸುತ್ತಿದ್ದಾರೆ.

ಇನ್ನು ಈ ವಿಶೇಷ ಎಂದರೆ ಅಂಧ ಸಹೋದರಿಯರ ಈ ಹೊಸ ಮನೆಯ ಮೇಲೆ ಜಗ್ಗೇಶ್ ಪರಿಮಳ ನಿಲಯ ಎಂದು ಬರೆಯಲಾಗಿದ್ದು, ಗೋಡೆಯ ತುಂಬೆಲ್ಲಾ ಸಂಗೀತಾಕ್ಷರಗಳ ಚಿನ್ಹೆಗಳನ್ನ ಬಿಡಿಸಲಾಗಿದೆ. ಇನ್ನು ಮನೆ ಚಿಕ್ಕದಾಗಿದ್ದರೂ ನೋಡಲು ತುಂಬಾ ಚೆನ್ನಾಗಿದೆ. ಇದೆ ತಿಂಗಳು ಈ ಮನೆಯ ಗೃಹ ಪ್ರವೇಶ ನಡೆಯಲಿದ್ದು, ಸ್ವತಹ ಜಗೇಶ್ ರವರು ತಮ್ಮ ಪತ್ನಿಸಮೇತ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ.