ಜಗ್ಗಣ್ಣ ಕಟ್ಟಿಸಿಕೊಟ್ಟ ಅಂಧ ಸಹೋದರಿಯರ ಮನೆಗೆ ಖರ್ಚಾಗಿದ್ದು ಎಷ್ಟು ಗೊತ್ತಾ.?

Advertisements

ನಟ ನವರಸನಾಯಕ ಜಗ್ಗೇಶ್ ರವರು ಹೇಳಿದಂತೆ ಇಂದು, ಗಾನಕೊಗಿಲೆಗಳಾದ ರತ್ನಮ್ಮ ಮಂಜಮ್ಮ ಅಂಧ ಸಹೋದರಿಯರಿಗೆ ಹೊಸ ಮನೆಯ ಗೃಹ ಪ್ರವೇಶವನ್ನ ನೆರವೇರಿಸಿಕೊಟ್ಟಿದ್ದಾರೆ. ಒಂದೇ ತಿಂಗಳಿನಲ್ಲಿ ಅಂಧ ಸಹೋದರಿಯರಿಗೆ ಸೂರು ಕಲ್ಪಿಸುವುದಾಗಿ ಹೇಳಿದ್ದ ಜಗ್ಗಣ್ಣ ತಾವು ಕೊಟ್ಟ ಮಾತಿನಂತಯೇ ನಡೆದುಕೊಂಡಿದ್ದಾರೆ.

Advertisements

ಹೌದು, ಇಂದು ತುಮಕೂರು ಜಿಲ್ಲೆಯ ಮಧುಗಿರಿಯ ಡಿ.ವಿ ಹಳ್ಳಿ ಗ್ರಾಮದ ಅಂಧ ಸಹೋದರಿಯರ ಹೊಸ ಮನೆಯ ಗೃಹ ಪ್ರವೇಶಕ್ಕೆ ತಮ್ಮ ಪತ್ನಿ ಸಮೇತರಾಗಿ ಹೋಗಿದ್ದ ಜಗ್ಗೇಶ್ ರವರು ರಿಬ್ಬನ್ ಕಟ್ ಮಾಡಿ, ಗೃಹ ಪ್ರವೇಶದ ಕಾರ್ಯಕ್ರಮವನ್ನ ನಡೆಸಿಕೊಟ್ಟಿದ್ದಾರೆ. ಇನ್ನು ಜಗ್ಗೇಶ್ ಅಭಿಮಾನಿಗಳ ಸಂಘ ಮತ್ತು ಕೊರಟಗೆರೆ ಫ್ರೆಂಡ್ಸ್ ಗ್ರೂಪ್ ವತಿಯಿಂದ ಜಗ್ಗಣ್ಣರವರ ಸೂಚನೆಯಂತೆ ಮುಂದೆ ನಿಂತು ಒಂದು ತಿಂಗಳಿನಲ್ಲಿ ಮನೆಯನ್ನ ಚಂದವಾಗಿ ಕಟ್ಟಿಸಿಕೊಟ್ಟಿದ್ದಾರೆ.

ಇನ್ನು ಅಂಧ ಗಾಯಕಿಯರು ವಾಸ ಮಾಡುತ್ತಿದ್ದ ಹಳೆಯ ಮನೆಯನ್ನ ಕೆಡವಿ, ಅದೇ ಸುಮಾರು ೯ಚದರ ವಿಸ್ತೀರ್ಣ ಜಾಗದಲ್ಲಿ ಕಟ್ಟಲಾಗಿದೆ. ಇನ್ನು ಕೇವಲ ೩೫ದಿನದಲ್ಲಿ ಈ ಮನೆಯನ್ನ ಕಟ್ಟಲಾಗಿದ್ದು, ಹಾಲ್, ಅಡುಗೆಮನೆ, ಬಾತ್ ರೂಮ್ ನ್ನ ನಿರ್ಮಿಸಲಾಗಿದೆ. ಇನ್ನು ಇದಕ್ಕೆಲ್ಲಾ ಬರೋಬ್ಬರಿ ೮ ಲಕ್ಷ ಖರ್ಚಾಗಿದೆ ಎಂದು ಹೇಳಲಾಗಿದೆ. ಇನ್ನು ತಮ್ಮ ಕಷ್ಟವನ್ನ ಆಲಿಸಿ ತಮಗೆ ಹೊಸದಾದ ಸುಂದರವಾದ ಮನೆ ಕಟ್ಟಿ ಕೊಟ್ಟ ಜಗ್ಗೇಶ್ ದಂಪತಿಗಳಿಗೆ ಹೃದಯತುಂಬಿ ನಮಸ್ಕಾರ ಮಾಡಿದ್ದಾರೆ ರತ್ನಮ್ಮ ಮತ್ತು ಮಂಜಮ್ಮ.

ಇನ್ನು ಜೊತೆಗೆ ಜಗ್ಗೇಶ್ ರವರ ಪತ್ನಿ ಪರಿಮಳ ಅವರಿಗೆ ಉಡಿ ತುಂಬಿ ಧನ್ಯವಾದ ತಿಳಿಸಿದ್ದಾರೆ. ಇನ್ನು ಇದೇ ಶುಭ ಸಂಧರ್ಭದಲ್ಲಿ ಗಾನಕೋಗಿಲೆಗಳಾದ ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ಜೀವನ ಪರ್ಯಂತ ಉಚಿತವಾಗಿ ರೈಲಿನಲ್ಲಿ ಓಡಾಡಲು ಉಚಿತ ಪಾಸ್ ಕೂಡ ನೀಡಲಾಗಿದೆ. ಇನ್ನು ಅಭಿಮಾನಿಗಳು ಜಗ್ಗೇಶ್ ರವರ ಕಾರ್ಯಕ್ಕೆ ಮೆಚ್ಚಿ ಕಾಮೆಂಟ್ ಗಳನ್ನ ಮಾಡಿದ್ದಾರೆ. ಅಭಿಮಾನಿಯೊಬ್ಬ ನಿಮ್ಮ ಇಂತಹ ಕಾರ್ಯಗಳನ್ನು ಕರ್ನಾಟಕದ ಜನತೆ ಎಂದಿಗೂ ಮರೆಯುದಿಲ್ಲ, ನಿಮ್ಮ ಮಾನವೀಯ ಗುಣ, ಹಳ್ಳಿಗರನ್ನು ಪ್ರೀತಿಸೋ ರೀತಿ, ಹಿರಿಯರಿಗೆ ಗೌರವಿಸಿ ಸದಾ ನೆನೆಯೋ ದೊಡ್ಡತನ, ಕನ್ನಡದ ಬಗೆಗಿನ ಅಭಿಮಾನ, ಹೀಗೆ ಹಲವಾರು ವಿಷಯಗಲಿಂದ ಸದಾ ನಮ್ಮ ಮನದಲ್ಲಿ ನೀವಿದ್ದಿರ ಅಣ್ಣಾ. ನಿಮಗೆ ಆ ರಾಯರು ನೀವು ಬಯಸಿದ್ದೆಲ್ಲವ ಕೊಟ್ಟು ಕಾಪಾಡಲಿ ದೇವರಲ್ಲಿ ಕೇಳಿಕೊಂಡಿದ್ದಾರೆ.