ಕೋಮಲ್ ಕುರಿತಂತೆ ಇಷ್ಟು ದಿವಸ ಮುಚ್ಚಿಟ್ಟಿದ್ದ ವಿಷಯವನ್ನ ಬಹಿರಂಗ ಮಾಡಿ ನೋವು ತೋಡಿಕೊಂಡ ಜಗ್ಗೇಶ್ ಹೇಳಿದ್ದೇನು ಗೊತ್ತಾ !

Cinema

ಸ್ನೇಹಿತರೇ, ನೆನ್ನೆ ತಾನೇ ನಟಿ ಮಾಲಾಶ್ರೀ ಪತಿ ಕೋಟಿ ರಾಮು ಅವರು ಕೊ’ರೋನಾ ಸೋಂಕಿಗೆ ತುತ್ತಾಗಿ ಅಗಲಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವೇ. ಆದರೆ ಈಗ ಸ್ಯಾಂಡಲ್ವುಡ್ ನ ಹಾಸ್ಯ ಹಾಗು ನಾಯಕ ನಟನಾಗಿ ಮಿಂಚಿದ್ದ ನಟ ಕೋಮಲ್ ಅವರಿಗೂ ಕೂಡ ಕೊ’ರೋನಾ ಇರುವುದು ಧೃಡಪಟ್ಟಿದ್ದು ಈ ವಿಷಯ ಮಾತ್ರ ತುಂಬಾ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಕೆಲ ದಿನಗಳ ಹಿಂದೆಯೇ ನಟಿ ಕೋಮಲ್ ಅವರು ಪಾಸಿಟೀವ್ ಆಗಿದ್ದು ಈ ವಿಷಯವನ್ನ ನವರಸನಾಯಕ ನಟ ಜಗ್ಗೇಶ್ ಅವರು ಮುಚ್ಚಿಟ್ಟಿದರು ಮುಚ್ಚಿಟ್ಟಿದ್ದರು ಎಂದು ಹೇಳಲಾಗಿದ್ದು ಈಗ ಅವರೇ ಈ ವಿಚಾರವನಂ ಬಹಿರಂಗ ಮಾಡಿ ತಮಗಾದ ನೋವನ್ನ ತೋಡಿಕೊಂಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಾವು ಮುಚ್ಚಿಟ್ಟಿದ್ದ ವಿಚಾರವನ್ನ ಬಹಿರಂಗ ಮಾಡಿರುವ ಜಗ್ಗೇಶ್ ಅವರು ಮಾಧ್ಯಮದವರಿಗೂ ಕೂಡ ತಿಳಿಯದಂತೆ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಕೊಡಿಸಿದ್ದು, ಈಗ ಕೋಮಲ್ ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೋಮಲ್ ಬಗ್ಗೆ ಬರೆದುಕೊಂಡಿರುವ ಜಗ್ಗೇಶ್ ಅವರು ಸಿನಿಮಾರಂಗದಲ್ಲಿ ಸಂಕಷ್ಟ ಅನುಭವಿಸಿದ ನನ್ನ ತಮ್ಮ ಕೋಮಲ್, ಬೆಂಗಳೂರಿನ ಕಾರ್ಪೊರೇಷನ್ ನಲ್ಲಿ ಸ್ವಂತ ವ್ಯವಹಾರವೊಂದನ್ನ ಶುರು ಮಾಡಿ ಅದರಲ್ಲಿ ಯಶಸ್ಸಿಯಾಗಿದ್ದ. ಆದರೆ ಅಲ್ಲಿನ ಕೆಲ ಲಂಚ ಬಾಕ ಅಧಿಕಾರಿಗಳಿಂದ ಕೋಮಲ್ ಗೆ ಬರಬೇಕಾದ ಬಿಲ್ ಪಾಸ್ ಮಾಡದೆ ಹಣಕ್ಕಾಗಿ ಪೀಡಿಸಿ ಅಲೆದಾಡಿಸಿದ್ದಾರೆ. ಇನ್ನು ಇದರ ಓಡಾಡುತ್ತಿದ್ದ ಕೋಮಲ್ ಗೆ ಸೋಂಕು ತಗುಲಿ ತುಂಬಾ ಸೀರಿಯಸ್ ಆಗಿದ್ದ. ಇನ್ನು ಅಣ್ಣನಾಗಿ ನಾನು ಇದೆಲ್ಲವನ್ನು ಮುಚ್ಚಿಟ್ಟು ಪಟ್ಟ ಆ ನೋವು ಆ ದೇವರಿಗೆ ಗೊತ್ತು ಎಂದು ಜಗ್ಗೇಶ್ ಹೇಳಿದ್ದಾರೆ.

ಇನ್ನು ಜಗ್ಗೇಶ್ ಅವರು ತಮ್ಮ ಟ್ವೀಟ್ ನಲ್ಲಿ ನಟ ಕೋಮಲ್ ಅವರು ಆಕ್ಸಿಜೆನ್ ತೆಗೆದುಕೊಳ್ಳುತ್ತಿರುವ ಫೋಟೋವೊಂದನ್ನ ಪೋಸ್ಟ್ ಮಾಡಿದ್ದಾರೆ. ನಾನು ಇಷ್ಟು ದಿನಗಳ ಕಾಲ ನನ್ನ ಮನಸ್ಸಿನಲ್ಲೇ ಮುಚ್ಚಿಟ್ಟು ನೋವು ಅನುಭವಿಸುತ್ತಿದ್ದದ್ದು ಮಂತ್ರಾಲಯದ ಗುರು ರಾಯರಿಗೆ ಮಾತ್ರ ಗೊತ್ತು. ನನ್ನ ತಮ್ಮನ ಜೀವಕ್ಕಾಗಿ ರಾಯರ ಬಳಿ ನಾನು ಬೇಡಿಕೊಂಡಿದ್ದು, ಸ್ವತಃ ರಾಯರೇ ನನ್ನ ಬೇಡಿಕೆಯನ್ನ ಈಡೇರಿಸುವ ಸಲುವಾಗಲಿ ಬೃಂದಾವನದಿಂದ ಎದ್ದು ಬಂದು, ಪಕ್ಕ ನಿಂತು ನನ್ನ ತಮ್ಮನ ಜೀವ ಉಳಿಸಿಬಿಟ್ಟರು ಎಂದು ನಟ ಜಗ್ಗೇಶ್ ರವರು ಬರೆದುಕೊಡಿದ್ದು ಈಗ ನನ್ನ ಸಹೋದರ ಸೋಂಕಿನಿಂದ ಸೇಫ್ ಆಗಿದ್ದಾನೆ ಎಂದು ಹೇಳಿದ್ದಾರೆ.