ಪಾದರಾಯನಪುರದಲ್ಲಿ ನಡೆದ ಗಲಾಟೆಬಗ್ಗೆ ಸ್ಪಷ್ಟನೆ ಕೊಟ್ಟ ಶಾಸಕ ಜಮೀರ್ ಅಹ್ಮದ್ ಹೇಳಿದ್ದೇನು ಗೊತ್ತಾ.?

News
Advertisements

ಬೆಂಗಳೂರಿನ ಪಾದರಾಯನಪುರದಲ್ಲಿ ಸೀಲ್ ಡೌನ್ ಆಗಿದ್ದರೂ, ಅಲ್ಲಿನ ಪುಂಡ ಪೋಕರಿಗಳು ಪೆಂಡಾಲ್, ಬ್ಯಾರಿ ಕೇಡ್ ಗಳನ್ನ ಕಿತ್ತು ಹಾಕಿದ್ದಲ್ಲದೆ, ವೈದ್ಯರ ಮೇಲೆ ಕೂಡ ಗಲಾಟೆ ಮಾಡಿದ್ದು ಈಗಾಗಲೇ ೫೦ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಈ ಘಟನೆ ನಡೆದ ಬಳಿಕ ಆ ಕ್ಷೇತ್ರದ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ರವರು ವ್ಯತಿರಿಕ್ತ ಹೇಳಿಕೆಗಳನ್ನ ನೀಡಿದ್ದರು.

Advertisements

ಈಗ ಪಾದರಾಯನಪುರದಲ್ಲಿ ನಡೆದ ಘಟನೆ ಮತ್ತು ತಾವು ಮಾತನಾಡಿದ ಹೇಳಿಕೆಗಳ ಕುರಿತು ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಸೀಲ್ ಡೌನ್ ಆಗಿರುವ ಇಂತಹ ಸಮಯದಲ್ಲಿ ಜನರು ಈ ರೀತಿ ಮಾಡಿರುವುದನ್ನ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ತಮ್ಮ ಪ್ರಾಣ ಕಾಪಾಡಲು ಬಂದಿರುವವರ ಮೇಲೆ ಈ ರೀತಿ ಹಲ್ಯಗೆ ಜನ ಮುಂದಾಗಿರುವುದು ಬೇಸರದ ಸಂಗತಿ. ಇನ್ನು ನನ್ನ ಅಪ್ಪಣೆ ಪಡೆದೇ ನನ್ನ ಕ್ಷೇತ್ರಕ್ಕೆ ಬರಬೇಕು ಎಂದು ನಾನು ಎಲ್ಲಿ ಹೇಳಿಲ್ಲ. ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಲಾಗಿದೆ.

ಇನ್ನು ಎಲ್ಲಾ ಮಾಧ್ಯಮವಾದವರು ಒಂದೇ ಬಾರಿ ನನ್ನ ಮೇಲೆ ಮುಗಿಬಿದ್ದಿದ್ದರಿಂದ ನಾನು ಯಾರಿಗೂ ಉತ್ತರ ಕೊಡಲಾರದೆ ಅಲ್ಲಿಂದ ಹೊರಟೆ. ನನ್ನ ಕ್ಷೇತ್ರದ ಜನರು ಈ ರೀತಿಯಾಗಿ ನಡೆದುಕೊಳ್ಳುತ್ತಾರೆ ಎಂದು ನಾನೇ ಊಹಿಸಿರಲಿಲ್ಲ.

ಯಾರೋ ಕೆಲವೊಬ್ಬ ಕಿಡಿಗೇಡಿಗಳು ಮಡಿದ ಕೆಲಸಕ್ಕೆ ಇಡೀ ಸಮುದಾಯವನ್ನ ದೂರುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.ಇನ್ನು ಈ ಘಟನೆಯಿಂದ ನನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನ ಪಟ್ಟರೂ ನಾನು ಜನಸೇವೆ ಮಾಡೋದಕ್ಕೆ ಹಿಂದೆ ಬೀಳೋದಿಲ್ಲ ಎಂದು ಸರಣಿ ಟ್ವೀಟ್ ಗಳನ್ನ ಮಾಡಿದ್ದಾರೆ.