ಇಡೀ ಜಗತ್ತೇ ಲಾಕ್ ಡೌನ್ ಆಗಿದ್ದರೂ ಜಪಾನ್ ನಲ್ಲಿ ಮಾತ್ರ ಎಂದಿನಂತಯೇ ಇದೆ.?ಕಾರಣ ಏನ್ ಗೊತ್ತಾ.?

News
Advertisements

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಮಹಾಮಾರಿ ಕೊರೋನಾ ವೈರಸ್ ಗೆ ಇಡೀ ಜಗತ್ತೇ ನಿಶ್ಯಬ್ದವಾಗಿಬಿಟ್ಟಿದೆ. ಅಮೆರಿಕಾ ಸೇರಿದಂತೆ ದೊಡ್ಡ ದೊಡ್ಡ ದೇಶಗಳೇ ಈ ಸೋಂಕನ್ನ ತಡೆಯಲಾಗದೆ ಕೈಕಟ್ಟಿ ಕುಳಿತಿವೆ. ಇನ್ನು ಇಟಲಿ, ಸ್ಪೈನ್ ಸೇರಿದಂತೆ ಈ ಕೊರೋನಾ ಅಂಟಿದ ಮತ್ತೊಂದು ದೇಶ ತಾಂತ್ರಿಕತೆಯಲ್ಲಿ ಮುಂದುವರೆದ ಜಪಾನ್.

Advertisements

ಜಗತ್ತಿನ ಹಲವು ದೇಶಗಳ್ಲಲಿ ಕೊರೋನಾ ಈಗಾಗಲೇ ನಾಲ್ಕನೇ ಹಂತಕ್ಕೆ ತಲುಪಿದೆ. ಇನ್ನು ಜಪಾನ್ ನಲ್ಲಿ ಇದವರೆಗಿನ ಸೋಂಕಿತರ ಸಂಖ್ಯೆ ಒಂದು ಸಾವಿರ ಎಂದು ಹೇಳಲಾಗಿದೆ. ಹಾಗಾದ್ರೆ ಅವರು ಕೊರೋನಾ ಸೋಂಕನ್ನ ಹೇಗೆ ಕಂಟ್ರೋಲ್ ಮಾಡುತ್ತಿದ್ದಾರೆ ಎಂಬುದೇ ಕುತೂಹಲದ ವಿಷಯವಾಗಿದೆ.

ಇನ್ನು ಜಪಾನ್ ನಲ್ಲಿ ಜನರ ಜೀವನ ಮಾಮೂಲಿಯಂತಯೇ ಸಾಗಿದೆ. ಯಾವುದೇ ಲಾಕ್ ಡೌನ್ ಆಗಿಲ್ಲ. ಎಲ್ಲಾ ಆಫೀಸ್ ಗಳು ತೆರೆದಿದ್ದು ಮಾಮೂಲಿ ದಿನಗಳಂತೆ ಜನರು ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದಾರೆ. ಮಾಲ್ ರೆಸ್ಟೋರೆಂಟ್ ಗಳು ತೆಗೆದಿವೆ.ಜನರಿಗೆ ಅಗತ್ಯವಿರುವ ದಿನನಿತ್ಯದ ವಸ್ತುಗಳು ಮಾಮೂಲಿಯಂತೆ ದೊರಕುತ್ತಿವೆ. ಇನ್ನು ಬುಲೆಟ್ ಟ್ರೈನ್ ಕೂಡ ಎಂದಿನಂತೆಜಪಾನ್ ನಲ್ಲಿ ತನ್ನ ಚಲಿಸುತ್ತಾ ಇದೆ. ಇನ್ನು ಇಟಲಿ ದೇಶದಲ್ಲಿರುವಂತೆ ವಯಸ್ಸಾಗಿರುವವರ ಸಂಖ್ಯೆ ಜಪಾನ್ ನಲ್ಲಿ ಕೂಡ ಇದೆ.

ಇನ್ನು ಈ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹರಡುತ್ತಿರುವ ಹಿನ್ನಲೆಯಲ್ಲಿ ಹಲವಾರು ದೇಶಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಆದರೆ ಜಪಾನ್ ನಲ್ಲಿ ಮಾತ್ರ ಲಾಕ್ ಡೌನ್ ಆಗಿಲ್ಲ. ಇನ್ನು ಜಪಾನ್ ದೇಶದ ಬಗ್ಗೆ ಹೇಳಬೇಕೆಂದರೆ ಭೂಕಂಪಗಳು, ಸುನಾಮಿ ಸೇರಿದಂತೆ ಪ್ರಕೃತಿವಿಕೋಪಗಳು ಅಲ್ಲಿ ಆಗಾಗ ಆಗುತ್ತಲೇ ಇರುತ್ತದೆ. ಹಾಗಾಗಿ ಅಲ್ಲಿನ ಜನರಿಗೆ ಈ ರೀತಿಯ ಪ್ರಕೃತಿ ವಿಕೋಪಗಳು ಆಗಾಗ ಉಆವ ರೀತಿ ಇರಣೆಕು ಎಂಬುದರ ಬಗ್ಗೆ ಶಾಲಾ ಸಮಯದಿಂದಲೇ ಕಲಿಸಲಾಗುತ್ತದೆ. ಜೊತೆಗೆ ಅಲ್ಲಿನ ವೈದ್ಯಕೀಯ ವ್ಯವಸ್ಥೆ ಸೇರಿದಂತೆ, ಯಾವುದೇ ವ್ಯವಸ್ಥೆ ಕೂಡ ಈ ವಿಕೋಪಗಳನ್ನ ಎದುರಿಸಲು ಸದಾ ಸಜ್ಜಾಗಿರುತ್ತದೆ.

ಇನ್ನು ಕೊರೋನಾ ಸೋಂಕು ಜಪಾನ್ ನಲ್ಲಿ ನಿಯಂತ್ರಣಕ್ಕೆ ಬರಲು ಬಹು ಮುಖ್ಯ ಕಾರಣ ಏನೆಂದರೆ, ನಾವು ಈ ಕೊರೋನಾ ಸೋಂಕು ಬಂದಾಗಿನಿಂದ ಮಾತ್ರ ಮಾಸ್ಕ್ ಧರಿಸುತ್ತಿದ್ದೇವೆ. ಆದರೆ ಜಪಾನ್ ನಲ್ಲಿ ಯಾವುದೇ ಮಾರಣಾಂತಿಕ ಸೋಂಕು ಬರಲಿ ಇರಲಿ ಅಲ್ಲಿನ ಮಕ್ಕಳು ಸೇರಿದಂತೆ ಹಿರಿಯರು ಸಹ ಮಾಸ್ಕ್ ಧರಿಸದೇ ಹೊರಗೆ ಹೋಗುವುದಿಲ್ಲ. ನೆಗಡಿ, ಕೆಮ್ಮು ಬಂದರೆ ಖಡ್ಡಾಯವಾಗಿ ಮಾಸ್ಕ್ ನ್ನ ಧರಿಸಲೇಬೇಕು. ಈಗಾಗಿ ಮಾಸ್ಕ್ ಜಪಾನ್ ಜನರ ಜೀವನದ ಅವಿಭಾಜ್ಯವಾಗಿಬಿಟ್ಟಿದೆ.

ಇನ್ನು ಜಪಾನ್ ಜನರು ಶಿಸ್ತಿಗೆ ಹೆಸರುವಾಸಿಯಾದವರು. ನಮ್ಮ ದೇಶದಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಉಗುಳಿದಂತೆ ಜಪಾನ್ ದೇಶದ ಜನರು ಎಲ್ಲೆಂದರಲ್ಲಿ ಉಗುಳುವುದಿಲ್ಲ. ಒಂದು ವೇಳೆ ಉಗುಳಲೇಬೇಕೆಂದರೆ ಅದಕ್ಕಾಗಿ ಮೀಸಲಿಟ್ಟ ಜಾಗ, ಡಬ್ಬಿಗಳಲ್ಲಿ ಉಗುಳುತ್ತಾರೆ. ಇನ್ನು ಈ ಶುಚಿತ್ವದ ಪಾಠ ಶಾಲಾ ದಿನಗಳಿಂದಲೇ ಅಲ್ಲಿನ ಜನರಿಗೆ ಕಳುಹಿಸಲಾಗಿರುತ್ತದೆ. ಇನ್ನು ಶುಚಿತ್ವ ಕೂಡ ಅಲ್ಲಿನ ಜನರ ಸಂಸ್ಕೃತಿಯಲ್ಲಿ ಬೆರೆತುಹೋಗಿದೆ. ಇನ್ನು ಜಪಾನ್ ನಲ್ಲಿ ಹ್ಯಾಂಡ್ ಶೇಕ್ ಮಾಡುವ ಸಂಸ್ಕೃತಿಯಿಲ್ಲ. ಬದಲಿಗೆ ದೇಹವನ್ನ ಸ್ವಲ್ಪ ಬಾಗಿಸಿ ಶುಭಾಶಯ ಹೇಳುವ ಸಂಸ್ಕೃತಿ ಇದೆ.

ಇನ್ನು ಜಪಾನ್ ದೇಶದ ಯಾವುದೇ ಸರ್ಕಾರಿ ಕಚೇರಿ, ಪ್ರೈವೇಟ್ ಆಫೀಸ್ ಗಳು ಸೇರಿದಂತೆ ಅಲ್ಲಿನ ಶೌಚಾಲಯಗಳಲ್ಲೂ ಕೂಡ ಕೈ ತೊಳೆಯಲು ಸ್ಯಾನಿಟೈಸರ್ ಗಳನ್ನ ಇಟ್ಟಿರುತ್ತಾರೆ. ಇದೆಲ್ಲದರ ಜೊತೆಗೆ ಅಲ್ಲಿನ ಜನ ಸರ್ಕಾರದ ಆದೇಶಗಳನ್ನ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಇದೆಲ್ಲವೂ ಸಹ ಅಲ್ಲಿ ಕೊರೋನಾ ವೈರಸ್ ಹೆಚ್ಚಾಗಿ ಹರಡದಂತೆ ತಡೆಯಲು ಕಾರಣವಾಗಿದೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ.