ಸ್ಯಾಂಡಲ್ವುಡ್ ಮೋಸ್ಟ್ ಬ್ಯೂಟಿಫುಲ್ ನಟಿ ಅಭಿನಯ ಶಾರದೆ ನಟಿ ಜಯಂತಿ ಇನ್ನಿಲ್ಲ..ಏನಾಗಿತ್ತು ಗೊತ್ತಾ ?

Cinema

ಚಂದನವನದ ಅಭಿನಯ ಶಾರದೆ, ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆದ ಮೇರು ನಟಿ ಜಯಂತಿ ಅವರು ಅನಾರೋಗ್ಯದ ಕಾರಣ ಬೆಂಗಳೂರಿನ ಅವರ ಮನೆಯಲ್ಲಿ ವಿಧಿವಶರಾಗಿದ್ದಾರೆ. ಸ್ಯಾಂಡಲ್ವುಡ್ ಕಂಡ ಮೋಸ್ಟ್ ಬ್ಯೂಟಿಫುಲ್ ನಟಿಗೆ 76ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿಯೂ ನಟಿಸಿ ದಕ್ಷಿಣ ಭಾರತ ಸಿನಿಮಾರಂಗದ ಮೇರು ನಟಿಯಾಗಿ ಮೆರೆದವರು ಹಿರಿಯ ನಟಿ ಜಯಂತಿ ಅವರು. ಸುಮಾರು ೫೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅಭಿನಯ ಶಾರದೆ ಜಯಂತಿ ಅವರು ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್ ಹಾಗೂ ತಲುಗು ತಮಿಳಿನ ಮೇರು ನಟರಾದ ಏನ್.ಟಿ.ಆರ್, ಎಮ್.ಜಿ.ಆರ್, ಶಿವಾಜಿ ಗಣೇಶನ್ ಅವರ ಜೊತೆ ಅಭಿನಯಿಸಿದ ಖ್ಯಾತಿ ಜಯಂತಿ ಅವರಿಗಿದೆ.

ಅಣ್ಣಾವ್ರ ಜೊತೆ ೪೫ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಯಾಗಿ ನಟಿಸಿರುವ ಜಯಂತಿ ಅವರು, ರಾಜಣ್ಣ ಅವರನ್ನ ರಾಜ್ ಎಂದೇ ಸಂಭೋದಿಸಿ ಕರೆಯುತ್ತಿದ್ದ ಕನ್ನಡ ಚಿತ್ರರಂಗದ ಏಕೈಕ ನಟಿ. ಇನ್ನು ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಹೇಳಿರುವಂತೆ ಬೆಂಗಳೂರಿನ ಬನಶಂಕರಿಯ ಅವರ ಮನೆಯಲ್ಲಿ ಎಂದಿನಂತೆ ನೆನೆ ರಾತ್ರಿ ಊಟ ಮಾಡಿ ಮಲಗಿದವರು ಬೆಳಗ್ಗೆ ಹೇಳಲೇ ಇಲ್ಲ. ರಾತ್ರಿ ಯಾವಾಗ ಅಮ್ಮ ತೀರಿಹೋದರೋ , ಏನಾಯಿತೋ ಗೊತ್ತಿಲ್ಲ. ಬೆಳಗ್ಗೆ ಅಮ್ಮನನ್ನ ಎಬ್ಬಿಸಿದಾಗಲೇ ಗೊತ್ತಾಗಿದ್ದು ಅವರು ಇಹಲೋಜಾ ತ್ಯಜಿಸಿದ್ದಾರೆ ಅಂತ. ಹಾರ್ಟ್ ಅ’ಟ್ಯಾಕ್ ಏನಾದರು ಆಗಿದೆಯೋ, ಏನೋ ಅನ್ನೋದು ಕೂಡ ನಮಗೆ ಗೊತ್ತಿಲ್ಲ ಎಂದು ಮಗ ಹೇಳಿದ್ದಾರೆ.

ಬಳ್ಳಾರಿಯಲ್ಲಿ ೧೯೫೦ರಲ್ಲಿ ಹುಟ್ಟಿದ ಜಯಂತಿ ಅವರಿಗೆ ೭೬ವರ್ಷ ವಯಸ್ಸಾಗಿತ್ತು. ಇನ್ನು ಜಯಂತಿ ಅವರ ತಂದೆ ಬಾಲಸುಬ್ರಮಣ್ಯಂ ಅವರು ಬೆಂಗಳೂರಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಲಚ್ಚರರ್ ಆಗಿದ್ದರು. ತಾಯಿಯ ಹೆಸರು ಸಂತಾನ ಲಕ್ಷ್ಮಿ ಎಂದು. ಜಯಂತಿಯವರ ಮೂಲ ನಾಮಧೇಯ ಕಮಲಾ ಕುಮಾರಿ ಎಂದು. ಜಯಂತಿಯವರಿಗೆ ಇಬ್ಬರು ಸಹೋದರರಿದ್ದಾರೆ. ಅಪ್ಪ ಅಮ್ಮ ಡೈವರ್ಸ್ ತೆಗೆದುಕೊಂಡ ಕಾರಣ ಜನಯತಿ ಅವರು ತಾಯಿಯ ಜೊತೆ ಮದ್ರಾಸ್ ನಲ್ಲಿ ಬೆಳೆದವರು. ಇನ್ನು ‘ಜೇನು ಗೂಡು’ ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಜಯಂತಿಯವರು ದಶಕಗಳ ಕಾಲ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಅಭಿನಯ ಶಾರದೆಯಾಗಿ ಮಿಂಚಿದರು.