ನೆಟ್ಟಗೆ ಡೈಲಾಗ್ ಹೇಳೋಕೆ ಬರಲ್ವ ರಾಂಗ್ ಫಾಸಸ್ ತಗೋತ್ತಾನೆ ! ಸೆಟ್ ಗೇ ಕುಡಿದು ಬರ್ತಾರೆ..ಜೆಕೆಗೆ ಹೀಗಂದಿದ್ಯಾಕೆ ಅವರು?

Advertisements

ಜೆಕೆ. ಜಯರಾಮ್ ಕಾರ್ತಿಕ್ ಅಂದ್ರೆ ಥಟ್ ಅಂತ ನೆನಪಿಗೆ ಬರೋದು ಹೆಂಡ್ತಿ ಎಂಬ ಕೂಗು. ಕಲಸ್೯ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ‘ಅಶ್ವಿನಿ ನಕ್ಷತ್ರ’ ಸಿರೀಯಲ್ ನಲ್ಲಿ ನಟ ಜೆಕೆ ಮತ್ತು ನಟಿ ಮಯೂರಿ ಗಂಡ-ಹೆಂಡ್ತಿ ಪಾತ್ರ ನಿರ್ವಹಿಸಿದ್ದರು. ಆ ಸಿರೀಯಲ್ ಜಯರಾಮ್ ಕಾರ್ತಿಕ್ ಗೆ ಬಹಳ ಖ್ಯಾತಿ ಕೊಡ್ತು. ಜೆಕೆಗೆ ಸವಾಲೆಸೆಯೋ ಹೆಣ್ಣಾಗಿ, ಯಾವುದಕ್ಕೂ ಡೋಂಟ್ ಎನ್ನದ ದೊಡ್ಡ ಉದ್ಯಮಿ ಜೆಕೆಯನ್ನ ಪಳಗಿಸೋ ಪಾತ್ರದಲ್ಲಿ ಕೃಷ್ಣ ಲೀಲಾ ಸಿನಿಮಾ ಖ್ಯಾತಿಯ ನಟಿ ಮಯೂರಿ ನಟಿಸಿದ್ದರು. ಅದಾದ ಕೆಲವು ಸಿನಿಮಾಗಳಲ್ಲಿ ಜೆಕೆ ಹೀರೋ ಆಗಿ ಪಾತ್ರ ಮಾಡಿದ್ರೂ, ಅದು ಹಿಟ್ ಆಗಲಿಲ್ಲ. ಈ ಹಿಂದೆಯೂ ಸಹ ಹಲವು ಚಿತ್ರಗಳಲ್ಲಿ ಜಯರಾಮ್ ಕಾರ್ತಿಕ್ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ.

[widget id=”custom_html-4″]

Advertisements

ಆದ್ರೆ ಹೀರೋ ಆಗಲು ಬೇಕಾದ ಎಲ್ಲಾ ಕ್ವಾಲಿಟಿ ಇದ್ರುನೂ ಜೆಕೆ ಮಾತ್ರ ಸೈಡ್ ಲೈನ್ ಆದ್ರಾ ಎಂಬ ಪ್ರಶ್ನೆ ಸ್ವತಃ ಜೆಕೆನೇ ಸ್ಪಷ್ಟನೆ ನೀಡಿದ್ದಾರೆ. ಸುದ್ದಿವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿರೋ ನಟ ಜಯರಾಮ್ ಕಾರ್ತಿಕ್, ಜೆಕೆನಾ ನೋಡಿದ್ರೆ ಎಲ್ಲಾ ಅಹಂಕಾರ, ದುರಂಕಾರ ಅಂತ ತಿಳ್ಕೋತ್ತಾರೆ. ಸಿನಿಮಾ ಸೆಟ್ ಗೇನೇ ಕುಡಿದುಕೊಂಡು ಬರ್ತಾರೆ ಅಂತಲೂ ಕೆಲವೊಬ್ರು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಅಂದಿದ್ದಾರೆ. ಅದಲ್ದೇ, ಸ್ಯಾಂಡಲ್ ವುಡ್ ನಲ್ಲಿ ಆಪರ್ ಚ್ಯುನಿಟಿ ಅಷ್ಟಾಗಿ ಸಿಕ್ತಿಲ್ಲ ಅನ್ನೋದಕ್ಕೂ ಕಾರಣ ನೀಡಿರೋ ಜೆಕೆ, ಯಾರ ಮೇಲೂ ಬ್ಲೇಮ್ ಮಾಡಲ್ಲ.

[widget id=”custom_html-4″]

ಕನ್ನಡ ಕಲಾವಿದರನ್ನ ಗುರುತಿಸದೇ, ಅವರಿಗೆ ಮೊದಲ ಆದ್ಯತೆ ನೀಡ್ತಿಲ್ಲ. ಕನ್ನಡದವರನ್ನ ಬಿಟ್ಟು ಬೇರೆ ಭಾಷೆಯವರನ್ನ ಕರೆ ತರ್ತಾರೆ. ಆದ್ರೆ, ಅವರಿಗೆ ಸರಿಯಾಗಿ ಲಿಪ್ ಸಿಂಕ್ ಕೂಡ ಮಾಡಲು ಬರಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಅದಲ್ದೇ, ನಟ ಜೆಕೆಗೆ ಬೆಸ್ಟ್ ಸಪೋರ್ಟಿವ್ ಆ್ಯಕ್ಟರ್ ಅಂತ ಅವಾಡ್೯ ಕೂಡ ಬಂದಿರುತ್ತೆ. ಆದ್ರೆ, ನಾಮಿನೇಟ್ ಆದ್ರೂ ಯಾರು ನಮ್ಮನ್ನ ಕರೆಯಲಿಲ್ಲ ಅಂತ ಜೆಕೆ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಡೈಲಾಗ್ ಹೇಳೋದಕ್ಕೂ ಈತನಿಗೆ ಬರಲ್ಲ. ರಾಂಗ್ ಫಾಸಸ್ ಕೊಡ್ತಾನೆ ಅಂತಲೂ ಹಲವರು ಟೀಕೆ ಮಾಡಿದ್ದಾರೆ ನಟ ಜಯರಾಮ್ ಕಾರ್ತಿಕ್ ಗೆ. ಹೀಗಾಗಿ, ಇಲ್ಲಿ ನಡೆಯೋದೇನಿದ್ರೂ ಜೆಕೆ ರೂಲ್ಸ್, ಜೆಕೆ ಸ್ಟೈಲ್ ಮಾತ್ರ ಅಂತ ಠಕ್ಕರ್ ಕೊಟ್ಟಿದ್ದಾರೆ. ಜೆಕೆ ನಟಿಸಿರೋ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟವಾಯಿತು? ಕಾಮೆಂಟ್ ಮಾಡಿ ತಿಳಿಸಿ..