ಮಧ್ಯರಾತ್ರಿ ನಡೆದ ಘಟನೆಗೆ ಬೆಚ್ಚಿಬಿದ್ದ ಪತ್ನಿ ! ವಾಪಸ್ ಬಂದುಬಿಡಪ್ಪಾ ಎಂದು ಅಂಗಲಾಚಿದ ಮಕ್ಕಳು..

Kannada Mahiti

ಸ್ನೇಹಿತರೇ, ಕೊರೋನಾ ಸೋಂಕಿನ ಎರಡನೇ ಅಲೆಯಿಂದಾಗಿ ಅದೆಷ್ಟೋ ಕುಟುಂಬಗಳು ತಮ್ಮವರನ್ನ ಕಳೆದುಕೊಂಡು ಬೀದಿಗೆ ಬಂದಿವೆ. ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿರುವ ಮಕ್ಕಳು ಅನಾಥರಾಗಿದ್ದಾರೆ. ಇದೆ ರೀತಿಯ ಘಟನೆಯೊಂದು ಸುಖಿ ಸಂಸಾರದ ಕುಟುಂಬದಲ್ಲಿ ನಡೆದಿದೆ. ನಿಜಕ್ಕೂ ಇಂತಹ ದುಸ್ಥಿತಿ ಬೇರೆ ಯಾವುದೇ ಕುಟುಂಬಕ್ಕೆ ಬಾರದಿರಲಿ..ಇನ್ನು ಮನಕಲಕುವ ಈ ಘಟನೆ ನಡೆದಿರುವುದು ಕೊಳ್ಳೇಗಾಲದ ಮುಡಿಗುಂಡಂ ಎಂಬ ಗ್ರಾಮದಲ್ಲಿ. ಇದೆ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ನಿವಾಸಿ ಜಯಶಂಕರ್ ಎಂಬುವವರಿಗೆ ತಂದೆ ತಾಯಿ, ಪತ್ನಿ ಇಬ್ಬರು ಮಕ್ಕಳಿದ್ದ ಸುಖೀ ಸಂಸಾರದ ಕುಟುಂಬವಿತ್ತು. ೩೬ವರ್ಷದ ಈತನೇ ಆ ಮನೆಯ ಆಧಾರ ಸ್ತಂಬವಾಗಿದ್ದ. ಇನ್ನು ದುರಾದ್ರಷ್ಟವಷಾತ್ ಎಂಬಂತೆ ಕೆಲ ದಿನಗಳ ಹಿಂದಷ್ಟೇ ಜಯಶಂಕರ್ ಗೆ ಕೊ’ರೋನಾ ಸೋಂಕು ಕಾಣಿಸಿಕೊಂಡಿದ್ದು ಚಾಮರಾಜನಗರದಲ್ಲಿರೋ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಆದರೆ ಮೊನ್ನೆ ರಾತ್ರಿ ಇದ್ದಕಿದ್ದಂತೆ ಜಯಶಂಕರ್ ಅವರ ಪ್ರಾ’ಣ ಹೋಗಿದೆ ಬಂದು ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯವರು ಅವರ ಕುಟುಂಬದವರಿಗೆ ಹೇಳಿದ್ದಾರೆ. ಇನ್ನು ಈ ಸುದ್ದಿಯನ್ನ ಕೇಳಿದ ಜಯಶಂಕರ್ ಅವರ ಪತ್ನಿ ಸಿದ್ಧರಾಜಮ್ಮ ಅವರು ಶಾಕ್ ಗೆ ಒಳಗಾಗಿದ್ದು, ಏನು ಮಾಡಬೇಕೆಂದು ಗೊತ್ತಾಗದೆ, ಮಧ್ಯರಾತ್ರಿಯಲ್ಲೇ ಆಂಬುಲೆನ್ಸ್ ಗೆ 2ಸಾವಿರದ ಐನೂರು ಹಣ ಕೊಟ್ಟು ತನ್ನ ಪತಿಯ ಪಾರ್ಥಿವ ಶ’ರೀರವನ್ನ ತಮ್ಮ ಊರಿಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನು ತಮ್ಮ ಜೀ’ವ ಕಳೆದುಕೊಂಡು ಮಲಗಿರುವುದನ್ನ ನೋಡಿ ಆ ಮಕ್ಕಳು ಕಣ್ಣೀರು ಹಾಕುತ್ತಿದ್ದನ್ನ ನೋಡಿದ್ರೆ ಎಂತಹವರ ಕಲ್ಲು ಹೃದಯ ಕೂಡ ಕರುಗುವಂತಿತ್ತು. ಇನ್ನು ಮನೆಗೆ ಆಧಾರವಾಗಿದೆ ಮನೆಯ ಮಗನನ್ನ ಕಳೆದುಕೊಂಡ ತಂದೆ ತಾಯಿ ಹಾಗೂ ಪತಿಯೇ ಸರ್ವಸ್ವ ಎಂದು ನಂಬಿ ಬಂದಿದ್ದ ಪತ್ನಿಯ ಆ ರೋ’ಧನೆ ಮುಗಿಲು ಮುಟ್ಟಿತ್ತು.

ಇನ್ನು ನನ್ನ ಪತಿ ಆಕ್ಸಿಜೆನ್ ಕೊರೆತೆಯಿಂದಾಗಿ ಜೀ’ವ ಕಳೆದುಕೊಂಡಿದ್ದಾರೆ, ಆಕ್ಸಿಜೆನ್ ನಿಂದಾಗಿ ಜೀವ ಕಳೆದುಕೊಂಡವರ ಪಟ್ಟಿಯೊಂದನ್ನ ಆಸ್ಪತ್ರೆಯವರು ಮಾಡುತ್ತಾರೆ. ಆದರೆ ಅಂತಹ ಪಟ್ಟಿಯಲ್ಲೂ ಕೂಡ ನನ್ನ ಪತಿಯ ಹೆಸರಿಲ್ಲ. ಮನೆಗೆ ಆಧಾರವಾಗಿದ್ದ ನನ್ನ ಗಂಡನನ್ನ ಕ’ಳೆದುಕೊಂಡು ನಮ್ಮ ಕುಟುಂಬ ಬೀದಿಗೆ ಬಂದಿದೆ. ಈಗ ನನ್ನ ಎರಡು ಮಕ್ಕಳು ಹಾಗೂ ಅತ್ತೆ ಮಾವನನ್ನ ಹೇಗೆ ಸಾಕಲಿ ಸಿದ್ಧರಾಜಮ್ಮ ಕಣ್ಣೀರು ಹಾಕಿದ್ದಾರೆ. ಇನ್ನು ತನ್ನ ತಂದೆಯನ್ನ ಕಳೆದುಕೊಂಡಿರವ ಮಕ್ಕಳು ಕೂಡ ಅಪ್ಪ ಇದ್ದಾಗ ನಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದು ನಮಗೆ ಏನೇ ಬೇಕಾದ್ರು ಕೊಡಿಸುತ್ತಿದ್ದರು. ಈಗ ಅಮ್ಮ ಒಬ್ಬರೇ..ಇನ್ನು ಆ ಮಕ್ಕಳು ಅಪ್ಪಾ ಬೇಗ ವಾಪಸ್ ಬಂದುಬಿಡಪ್ಪಾ..ಎಂದು ಗೋ’ಳಾಡುತ್ತಿದ್ದದನ್ನ ನೋಡಿದ್ರೆ ಇಂತಹ ಪರಿಸ್ಥಿತಿ ಯಾವ ಮಕ್ಕಳಿಗೂ ಬೇಡ ಎಂದೆನಿಸುತ್ತದೆ. ಒಟ್ಟಿನಲ್ಲಿ ಆಕ್ಸಿಜೆನ್ ಕೊರತೆಯಿಂದಾಗಿ ತಮ್ಮ ಮನೆಯ ಆಧಾರವನ್ನೇ ಕಳೆದುಕೊಂಡು ಸಂಕಟದ ಪರಿಸ್ಥಿತಿಯಲ್ಲಿರುವ ಆ ಕುಟುಂಬಕ್ಕೆ ಸರ್ಕಾರ ನೆರವಾಗಲಿ ಎಂದು ಸ್ಥಳೀಯರು ಮನವಿಮಾಡಿಕೊಂಡಿದ್ದಾರೆ.