ಭಿಕ್ಷೆ ಬೇಡುತ್ತಿದ್ದ ಈ ಯುವಕ ಮಾಡಿರುವ ಕೆಲಸ ನೋಡಿ ಇಡೀ ಜಗತ್ತೇ ತಿರುಗಿ ನೋಡುತ್ತಿದೆ ! ಈ ಹುಡುಗ ಮಾಡಿದ್ದಾದ್ರೂ ಏನು ಗೊತ್ತಾ ?

Inspire

ಸ್ನೇಹಿತರೇ, ಸತತ ಪರಿಶ್ರಮದಿಂದ ಮನುಷ್ಯ ಏನಾದರೂ ಕೂಡ ಸಾಧನೆ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ನೈಜ ಉದಾಹರಣೆ. ಜೀವನದಲ್ಲಿ ಏನೇ ಅಡೆತಡೆಗಳು ಎದುರಾಗಿ ಬಂದರೂ ಕೂಡ ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಯಾವುದೇ ಕಾರ್ಯ ಅಸಾಧ್ಯವಲ್ಲ ಎಂಬುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಹೌದು, ತಮಿಳುನಾಡಿನ ಚೆನ್ನೈನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಹುಡುಗನೊಬ್ಬ ಈಗ ಲಂಡನ್ ನ ದೊಡ್ಡ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ನಿಮಗೆ ಅಚ್ಚರಿ ಆಗಬಹುದು ಆಲ್ವಾ..ಭಿಕ್ಷೆ ಬೇಡುತ್ತಿದ್ದವ ಇಂಜಿನಿಯರ್ ಆಗಿದ್ದೇಗೆ ? ಲಂಡನ್ ಗೆ ಹೋಗಿದ್ದೇಗೆ ಅಂತಾ..

ಹೌದು, ಸುಮಾರು ಮೂವತ್ತೊಂದು ವರ್ಷಗಳ ಹಿಂದೆ ಜೈವಿಲ್ ಎಂಬ ಹುಡುಗನ ಪೋಷಕರು ಕೈತುಂಬಾ ಸಾಲ ಮಾಡಿಕೊಂಡ ಕಾರಣ ಚೆನ್ನೈಗೆ ಬಂದು ಬಿಡುತ್ತಾರೆ. ಇನ್ನು ಈ ವೇಳೆ ಅವರಿಗೆ ಯಾವುದೇ ಕೆಲಸ ಸಿಗದ ಕಾರಣ ಒಂದೊತ್ತಿನ ಊಟಕ್ಕೂ ಕಷ್ಟವಾಗಿ ಕೊನೆಗೆ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಸಂಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಇನ್ನು ಹೀಗೆ ದಿನಗಳು ಕಲಿಯುತ್ತಿದ್ದಂತೆ ಜೈವಿಲ್ ಆರೋಗ್ಯದ ಸಮಸ್ಯೆಯಿಂದ ಸಾವನ್ನಪ್ಪುತ್ತಾರೆ. ಕಷ್ಟಗಳು ಬಂದಾಗ ಹಿಂದೆ ಹಿಂದೆ ಕಷ್ಟಗಳು ಹೆಚ್ಚಾಗುತ್ತವೆ ಎಂಬಂತೆ ಜೈವಿಲ್ ಅವರ ತಾಯಿ ಕೂಡ ಅನಾರೋಗ್ಯಕ್ಕೆ ಈಡಾಗುತ್ತಾರೆ. ಇನ್ನು ಆಗ ಜೈವಿಲ್ ಗೆ ಸುಮಾರು ಆರೇಳು ವರ್ಷವಷ್ಟೇ ವಯಸ್ಸು. ಇನ್ನು ಮಗುವಾಗಿದ್ದ ಜೈವಿಲ್ ತನ್ನ ತಾಯಿಯ ಪಕ್ಕ ಕೂತು ಅಳುತ್ತಿರುವುದನ್ನ ಅಲ್ಲೇ ಹೋಗುತ್ತಿದ್ದ ಉಮಾ ಮುತುರಮನ್ಎಂಬುವವರು ನೋಡುತ್ತಾರೆ.

ಆ ಮಗುವಿನ ಸಂಕಟವನ್ನ ಕಂಡ ಉಮಾ ಈ ಮಗುವಿಗೆ ಹೇಗಾದರೂ ಸಹಾಯ ಮಾಡಬೇಕು ಎಂದು ಯೋಚಿಸಿ ಆ ಮಗುವಿನ ಫೋಟೋ ಹಿಡಿದು, ಅದಕ್ಕೊಂದು ತಲೆಬರಹ ಕೊಟ್ಟು ಸಾಮಾಜಿಕ ಪೋಸ್ಟ್ ಮಾಡುತ್ತಾರೆ. ಇನ್ನು ಆ ಫೋಟೋ ನೋಡಿದವರಲ್ಲಿ ಕೆಲವರು ಮಗುವಿನ ಸಹಾಯಕ್ಕೆ ಧಾವಿಸುತ್ತಾರೆ. ಇನ್ನು ಉಮಾ ಅವರು ಸೂಯಂ ಎನ್ನೋ NGO ಟ್ರಸ್ಟ್ ಒಂದರಿಂದ ಜೈವಿಲ್ ವಿದ್ಯಾಭ್ಯಾಸಕ್ಕೆ ಬೇಕಾದ ಹಣವನ್ನ ನೀಡುತ್ತಾರೆ. ಇನ್ನು ಜೈವಿಲ್ ಬೆಳಗಿನ ಸಮಯದಲ್ಲಿ ಶಾಲೆಗೆ ಹೋಗುತ್ತಾ, ಶಾಲೆಯಿಂದ ಬಂದ ಬಳಿಕ ಭಿಕ್ಷೆ ಬೇಡಿ ತಾಯಿಯನ್ನ ನೋಡಿಕೊಂಡು PUC ಮುಗಿಸಿ, ಅದರಲ್ಲಿ ಉತ್ತಮ ರ್ಯಾಂಕ್ ಕೂಡ ಪಡೆದುಕೊಳ್ಳುತ್ತಾನೆ. ಇನ್ನು ಇವನ ಪಿಯುಸಿಯಲ್ಲಿ ತೆಗೆದಿರುವ ರ್ಯಾಂಕ್ ನ್ನ ನೋಡಿದ ಅನೇಕರು ಜೈವಿಲ್ ನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಮುಂದೆ ಬರುತ್ತಾರೆ.

ಬಳಿಕ ದಾನಿಗಳ ಸಹಾಯದಿಂದ ಇಂಜಿನಿಯರಿಂಗ್ ಪದವಿ ಪಡೆದುಕೊಂಡ ಜೈವಿಲ್ ಲಂಡನ್ ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಂಟ್ರೆನ್ಸ್ ಪರೀಕ್ಷೆಯನ್ನ ಬರೆದು ಅಲ್ಲಿ ಕೆಲಸ ಪಡೆದುಕೊಳ್ಳುತ್ತಾನೆ. ಹೀಗೆ ಮುಂದೆ ತಾನು ಸಂಪಾದನೆ ಮಾಡಿದ ಹಣದಿಂದ ನನ್ನ ತರಹದ ಕಷ್ಟ ಬೇರೆಯವರು ಅನುಭವಿಸಬಾರದೆಂದು ಭಿಕ್ಷುಕರು ಮತ್ತು ಬಡವರಿಗಾಗಿ ತಾನೇ ಟ್ರಸ್ಟ್ ಒಂದನ್ನ ಸ್ಥಾಪನೆ ಮಾಡಿ ಅದರ ಮೂಲಕ ಅವರಿಗೆಲ್ಲಾ ವಿದ್ಯಾಭ್ಯಾಸಕ್ಕೆ ಬೇಕಾದ ಸಹಾಯ ಮಾಡುತ್ತಾನೆ. ನೋಡಿ ಸ್ನೇಹಿತರೇ, ಜೀವನದಲ್ಲಿ ಸಾಧಿಸುವ ಛಲ ಇದ್ದು, ನಿಚ್ಚಲವಾದ ಗುರಿ ಇದ್ದಲ್ಲಿ ಭಿಕ್ಷುಕ ಕೂಡ ಎಷ್ಟೋ ಜನರಿಗೆ ಸಹಾಯ ಮಾಡುವ ಮಟ್ಟಕ್ಕೆ ಬೆಳೆಯಬಹುದು ಎಂಬುದಕ್ಕೆ ಜೈವಿಲ್ ಗಿಂತ ನೈಜ ನಿದರ್ಶನ ಬೇಕಾಗಿಲ್ಲ ಅಲ್ಲವೇ..