ಆರ್ಯವರ್ಧನ್ ಬಾಲ್ಯ ಪಾತ್ರದಲ್ಲಿ ಮಿಂಚುತ್ತಿರುವ ಜೊತೆಜೊತೆಯಲಿ ಸೀರಿಯಲ್ ನ ಈ ಪುಟ್ಟ ಬಾಲಕ ಯಾರು ಗೊತ್ತಾ ?

Entertainment

ಕನ್ನಡ ಕಿರುತೆರೆಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸೀರಿಯಲ್ ಎಂದರೆ ಅದು ಜೊತೆಜೊತೆಯಲಿ. ಶುರುವಾದಾಗಿನಿಂದಲೂ ಉತ್ತಮ ಟಿಆರ್ಪಿ ರೇಟಿಂಗ್ ಪಡೆದುಕೊಂಡಿರುವ ಈ ಸೀರಿಯಲ್ ನಟ ಅನಿರುದ್ದ್ ಅವರಿಗೆ ಒಳ್ಳೆಯ ಹೆಸರನ್ನ ತಂದುಕೊಟ್ಟಿತು. ಇನ್ನು ಧಾರಾವಾಹಿಯ ಕತೆಯೂ ಕೂಡ ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದ್ದು ಈಗಲೂ ಕೂಡ ಟಾಪ್ ರೇಟಿಂಗ್ ನ್ನ ಪಡೆದು ಪ್ರಸಾರವಾಗುತ್ತಿದೆ. ಇನ್ನು ಈಗ ಅನಿರುದ್ಧ ಅವರು ಅಭಿನಯಿಸುತ್ತಿರುವ ಆರ್ಯವರ್ಧನ್ ಪಾತ್ರದ ಬಾಲ್ಯ ಜೀವನದ ಬಗ್ಗೆ ಪ್ರಸಾರವಾಗುತ್ತಿದ್ದು, ಈ ಪಾತ್ರದಲ್ಲಿ ನಟಿಸಿರುವ ಪುಟ್ಟ ಬಾಲಕನ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಹೌದು, ಆರ್ಯವರ್ಧನ್ ಅವರ ಬಾಲ್ಯಜೀವನದ ಸಂಜಯ್ ಪಾಟೀಲ್ ಪಾತ್ರದಲ್ಲೂ ನಟಿಸಿರುವ ಪುಟ್ಟ ಬಾಲಕನ ಪಾತ್ರವನ್ನ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಬಾಲಕನ ಹೆಸರು ಅನುರಾಗ್ ಎಂದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವನು ಈ ಅನುರಾಗ್. ಈಗ ಸಂಜಯ್ ಪಾಟೀಲ್ ಪಾತ್ರದ ಮೂಲಕ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾನೆ. ಇನ್ನು ಅನುರಾಗ್ ಅವರ ಸಂಜಯ್ ಪಾಟೀಲ್ ಪಾತ್ರಕ್ಕೆ ವಿಕ್ಷಕರು ಕೂಡ ಮನಸೋತಿದ್ದು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.

ಸ್ನೇಹಿತರೇ, ಸಂವಿಧಾನ ಶಿಲ್ಪಿ ಡಾ. ಬಿಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತಂತೆ ಮಹಾನಾಯಕ ಧಾರವಾಹಿ ಜೀ ಕನ್ನಡ ವಾಹಿನಿಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವೇ. ಹೌದು, ಮಹಾನಾಯಕದಲ್ಲಿ ಪುಟ್ಟ ಅಂಬೇಡ್ಕರ್ ಆಗಿ ಅಭಿನಯಿಸುತ್ತಿರುವ ಬಾಲಕನ ಪಾತ್ರಕ್ಕೆ ಕನ್ನಡದ ಧ್ವನಿಯಾಗಿರುವುದು ಇದೆ ಬಾಲ ಪ್ರತಿಭೆ ಅನುರಾಗ್. ಇನ್ನು ಈ ಪುಟ್ಟ ಕಲಾವಿದನಿಗೆ ಮತ್ತಷ್ಟು ಅವಕಾಶಗಳು ಸಿಕ್ಕಿ ಉತ್ತಮ ಪಾತ್ರಗಳಲ್ಲಿ ಮಿಂಚಿ ದೊಡ್ಡ ನಟನಾಗಿ ಬೆಳೆಯಲಿ ಎಂದು ಹಾರೈಸೋಣ..