ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಬಿಗ್ ಟ್ವಿಸ್ಟ್ ! ಎಂಟ್ರಿ ಕೊಡಲಿದ್ದಾರೆ ಕನ್ನಡ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ..ಯಾರು ಗೊತ್ತಾ ಆ ನಟಿ ?

Entertainment

ಸ್ನೇಹಿತರೇ, ಕನ್ನಡ ಕಿರುತೆರೆ ಲೋಕದಲ್ಲೇ ಒಂದು ದೊಡ್ಡ ಸೆನ್ಸೇಶನ್ ಕ್ರಿಯೇಟ್ ಮಾಡಿದ ಜೊತೆ ಜೊತೆಯಲಿ ಧಾರವಾಹಿ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನ ನೀಡುತ್ತಿದೆ. ಜೊತೆಗೆ ಅತ್ತ್ಯತ್ತಮ ಟಿಆರ್ಪಿ ರೇಟನ್ನ ಪಡೆದುಕೊಂಡು ಬರುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ಎಪಿಸೋಡ್ ಗಳ ಬಗ್ಗೆ ವೀಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಶುರುವಿನಲ್ಲಿ ನಂಬರ್ ಒನ್ ಟಿಆರ್ಪಿ ರೇಟನ್ನ ಗಳಿಸಿಕೊಂಡಿದ್ದ ಬರುಬರುತ್ತ ಕೊಂಚ ಮಟ್ಟಿಗೆ ರೇಟಿಂಗ್ ಸ್ಥಾನವನ್ನ ಕಳೆದುಕೊಂಡಿತ್ತು. ಈಗ ಅನು ಸಿರಿಮನೆ ಮದುವೆಯ ಎಪಿಸೋಡ್ ಗಳು ಶುರುವಾಗಿದ್ದು ವೀಕ್ಷಕರಲ್ಲಿ ಕುತೂಹಲವನ್ನ ಹುಟ್ಟುಹಾಕಿದ್ದು ಜೊತೆಗೆ ಮತ್ತೆ ರೇಟಿಂಗ್ ನಲ್ಲಿ ಮೊದಲನೇ ಸ್ಥಾನ ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ.

ಇನ್ನು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಅಣು ಸಿರಿಮನೆ ಮದುವೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೊನೆಯ ಕ್ಷಣದಲ್ಲಿ ಇದು ತಿರುವು ಪಡೆಯಲಿದ್ದು ಅನು ಸಿರಿಮನೆ ಆರ್ಯವರ್ಧನ್ ಅವರನ್ನ ಮದುವೆಯಾಗಲಿದ್ದಾರೆ ಎಂಬಂತಹ ಫೋಟೋಗಳು ಕೂಡ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಇದೆ ವೇಳೆ ಜೊತೆ ಜೊತೆಯಲಿ ಸೀರಿಯಲ್ ನಿರ್ದೇಶಕರು ಮತ್ತೊಂದು ಟ್ವಿಸ್ಟ್ ಕೊಡಲಿದ್ದು ಬಾಲಿವುಡ್ ನಟಿ, ಕನ್ನಡದ ಚಿತ್ರವೊಂದರಲ್ಲಿ ನಟಿಸಿದ್ದ ನಟಿಯ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ. ಹೌದು ಆ ನಾಯಕಿಯ ಹೆಸರೇ ಎರಿಕಾ ಫರ್ನಾಂಡಿಸ್. ಕನ್ನಡದ ನಿನ್ನಿಂದಲೇ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಹೆಜ್ಜೆ ಹಾಕಿದವರು.

ಈ ನಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿನ ರಾಜನಂಧಿನಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಹೌದು, ರಾಜನಂಧಿನಿ ಪಾತ್ರವು ಈ ಸೀರಿಯಲ್ ನ ನಾಯಕನ ಪಾತ್ರವಾದ ಆರ್ಯವರ್ಧನ ಅವರ ಮೊದಲನೇ ಹೆಂಡತಿಯ ಪಾತ್ರದ ಹೆಸರಾಗಿದೆ. ಇನ್ನು ನಟಿ ಎರಿಕಾ ಫರ್ನಾಂಡಿಸ್ ರಾಜನಂಧಿನಿ ಪಾತ್ರದಲ್ಲಿ ಆರ್ಯವರ್ಧನ್ ಅವರ ಪತ್ನಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಈಗಾಗಲೇ ಸ್ಯಾಂಡಲ್ವುಡ್ ನ ಬಿಗ್ ಸ್ಕ್ರೀನ್ ಮಿಂಚಿದ ಎರಿಕಾ ಫರ್ನಾಂಡಿಸ್ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡಲಿದ್ದಾರಾ ಎಂದು ಕಾದು ನೋಡಬೇಕಾಗಿದೆ..