ಜನವರಿ 28 ಮಕರ ರಾಶಿಗೆ ಶುಕ್ರನ ಪ್ರವೇಶ ! ಈ 5 ರಾಶಿಗಳಿಗೆ ಶುಭಫಲ..ನಿಮ್ಮ ರಾಶಿಯೂ ಇದೆಯಾ ನೋಡಿ..

Astrology

ನಮಸ್ತೇ ಸ್ನೇಹಿತರೇ, ಗ್ರಹಗಳು ಮತ್ತು ರಾಶಿಗಳಲ್ಲಿ ಆಗುವ ಬದಲಾವಣೆ ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಇದೇ ಜನವರಿ 28 ಗುರುವಾರದಂದು ಹುಣ್ಣಿಮೆಯ ದಿನವಾಗಿದ್ದು, ಇಂದು ಮಕರರಾಶಿಗೆ ಶುಕ್ರನು ಪ್ರವೇಶಿಸುವುದರಿಂದ ಕೆಲವೊಂದು ರಾಶಿಯವರಿಗೆ ಶುಭಫಲ ದೊರೆಯಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಶುಭ ಫಲಗಳು ದೊರೆಯಲಿವೆ ಎಂಬುದನ್ನ ಮುಂದೆ ನೋಡೋಣ ಬನ್ನಿ..

ವೃಷಭ ರಾಶಿ : ನಿಮಗೆ ಸಮಾಜದಲ್ಲಿ ಒಳ್ಳೆಯ ಗೌರವ ಲಭಿಸಲಿದೆ. ನೀವು ಮಾಡುವ ಉತ್ತಮ ಕಾರ್ಯಗಳಿಗೆ ಪ್ರಶಂಸೆ ದೊರಕುತ್ತದೆ. ನಿಮ್ಮ ವರ್ಚಸ್ ಹೆಚ್ಚಾಗಲಿದೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಮನೆಗೆ ಅತಿಥಿಗಳ ಆಗಮ ಆಗಲಿದೆ. ಇದರಿಂದ ನಿಮಗೆ ಕೌಟುಂಬಿಕ ಸುಖ ದೊರಕಲಿದೆ. ಅನಾರೋಗ್ಯ ಸಮಸ್ಯೆಗಳು ಬಗೆ ಹರಿಯಲಿವೆ. ಅದೃಷ್ಟವೂ ಬಹಳ ಚೆನ್ನಾಗಿದೆ. ನಿಮ್ಮ ಗೌರವ ಹೆಚ್ಚುವ ಸಮಯ.

ಮಿಥುನ ರಾಶಿ : ಈ ರಾಶಿಯಲ್ಲಿ ಜನಿಸಿದವರಿಗೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ದೊರಕಲಿದೆ. ಅಧಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಇದರಿಂದ ನಿಮಗೂ ನಿಮ್ಮ ಕುಟುಂಬದವರಿಗೂ ಏಳಿಗೆ ಆಗಲಿದೆ. ನಿಮ್ಮ ಪರಿವಾರದ ಬೆಂಬಲ ಎಲ್ಲಾ ವಿಷಯದಲ್ಲೂ ಸಿಗುತ್ತದೆ. ಇದರಿಂದ ಎಷ್ಟೋ ಸಮಸ್ಯೆಗಳನ್ನು ನೀವು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ನಿಮ್ಮ ಕುಟುಂಬದವರು ಮತ್ತು ನಿಮ್ಮ ಪ್ರೇಯಸಿ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ತೋರಿಸುತ್ತಾರೆ.

ಮಕರ ರಾಶಿ : ನಿಮಗೆ ಧನಾಗಮನ ಆಗಲಿದೆ. ಹಣಕಾಸಿನ ಸಮಸ್ಯೆಯಿಂದ ಕೊಂಚ ಬಿಡುಗಡೆ ಸಿಗಲಿದೆ. ಮಕ್ಕಳಿಗೆ ಯಶಸ್ಸು ಸಿಗಲಿದೆ. ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಬಂಧುಗಳ ಆಗಮನದಿಂದ ಸಂತೋಷ ನೆಮ್ಮದಿ ಸಿಗಲಿದ್ದು, ನಿಮ್ಮ ಹಲವು ವಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ವೃಶ್ಚಿಕ ರಾಶಿ : ದಾಂಪತ್ಯ ಜೀವನದಲ್ಲಿ ಸುಖ ನೆಮ್ಮದಿ ಸಿಗಲಿದೆ. ಕ’ಲಹಗಳು ಬಗೆ ಹರಿಯಲಿವೆ. ಶ’ತ್ರುಗಳ ಕಾಟ ಕಡಿಮೆಯಾಗುವುದು. ಆಸ್ತಿಯ ವ್ಯಾಜ್ಯ ಬಗೆಹರಿಯುವ ಸಾಧ್ಯತೆಗಳು ಇವೆ. ಸ್ವಲ್ಪ ತಾಳ್ಮೆಯಿಂದ ವರ್ತಿಸಿದರೆ ನೆರೆ ಹೊರೆಯವರಿಂದ ತುಂಬಾ ಲಾಭ ಆಗಲಿದೆ.

ತುಲಾ ರಾಶಿ : ನಿಮ್ಮ ರಾಶಿಯವರಿಗೆ ಉದ್ಯೋಗದಲ್ಲಿ ಲಾಭ ದೊರಕಲಿದೆ. ಉನ್ನತ ಸ್ಥಾನಗಳಿಗೆ ಬಡ್ತಿ ಸಿಗುವ ಯೋಗವಿದೆ. ಮದುವೆಯ ಯೋಗ ಒದಗಿಬರುವುದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಸಂತಾನದ ಭಾಗ್ಯವೂ ಇದೆ. ಮಕ್ಕಳಿಂದ ಸಂತೋಷ ಸಿಗಲಿದೆ. ಗುರು ಹಿರಿಯರ ಆಶೀರ್ವಾದದಿಂದ ಹೆಚ್ಚಿನ ಸುಖ ಶಾಂತಿ ಸಿಗಲಿದೆ.