ಅಪ್ಪು ಅಭಿಮಾನಿಗಳ ಕುರಿತು ಮಹತ್ವದ ವಿಚಾರ ತಿಳಿಸಿದ ಪೊಲೀಸ್ ಆಯುಕ್ತ ಕಮಲ್​ ಪಂತ್.!ಅಭಿಮಾನಿಗಳು ಫುಲ್ ಖುಷ್..

ಸುದ್ದಿ

ಸ್ನೇಹಿತರೇ, ಕರುನಾಡಿನ ಮಾಣಿಕ್ಯ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮೆಲ್ಲರನ್ನ ಬಿಟ್ಟು ಆಗಲಿ ತಿಂಗಳಿಗಿಂತ ಹೆಚ್ಚಾಗಿದೆ. ಇನ್ನು ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರು ಆಕ್ಟೊಬರ್ ೨೯ರಂದು ನಿಧನರಾದಾಗ ಸ್ಯಾಂಡಲ್ವುಡ್ ಸೇರಿದಂತೆ ಇಡೀ ಕರ್ನಾಟಕವೇ ಕಣ್ಣೀರಿಟ್ಟಿತ್ತು. ಇನ್ನು ಕೇವಲ ೪೬ವರ್ಷಕ್ಕೆ ನಮ್ಮನ್ನೆಲ್ಲಾ ಬಿಟ್ಟು ಅಗಲಿದ ಅಪ್ಪು

ಅಂತಿಮ ದರ್ಶನಾರ್ಥವಾಗಿ ಕಂಠೀರವ ಸ್ಟೇಡಿಯಂ ನಲ್ಲಿ ಅವರ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಅಪ್ಪು ಅಂತಿಮ ದರ್ಶನ ಪಡೆಯುವ ಸಲುವಾಗಿ ಇಡೀ ಸ್ಯಾಂಡಲ್ವುಡ್ ಸಿನಿಮಾರಂಗ ಸೇರಿದಂತೆ, ಪಕ್ಕದ ರಾಜ್ಯಗಳ ಸಿನಿಮಾ ಸ್ಟಾರ್ ನಟರು ಕೂಡ ಬಂದು ಅಪ್ಪು ಅಂತಿಮ ದರ್ಶನ ಪಡೆದರು. ಇನ್ನು ತಮ್ಮ ಮೆಚ್ಚಿನ ನಟನನ್ನ ಕಳೆದುಕೊಂಡ ಲಕ್ಷಾಂತರ ಅಭಿಮಾನಿಗಳು ಕಣ್ಣೀರಿಡುತ್ತಾ ಬಂದು ಅಪ್ಪು ದರ್ಶನ ಪಡೆದರು..ಮಾಹಿತಿಗಳ ಪ್ರಕಾರ ಅಪ್ಪು ಅಂತಿಮ ದರ್ಶನ ಪಡೆಯಲು 25 ಲಕ್ಷಕ್ಕಿಂತ ಹೆಚ್ಚು ಜನ ಸೇರಿದ್ದರು ಎನ್ನಲಾಗಿದೆ.

ಇನ್ನು ಇಷ್ಟೊಂದು ಲಕ್ಷಾಂತರ ಜನ ಸೇರಿದ್ರು ಕೂಡ ಯಾವುದೇ ರೀತಿಯ ಅಹಿತ ಕರ ಘ’ಟನೆಗಳು ನಡೆಯಲಿಲ್ಲ. ಲಕ್ಷಾಂತರ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಅಗಲಿಕೆ ನೋವಿದ್ದರೂ ಕೂಡ ಎಲ್ಲಿಯೂ ಕೂಡ ಯಾವುದೇ ರೀತಿಯ ಗಲಾಟೆಗಳು ನಡೆದಿರಲಿಲ್ಲ. ಇದೆ ಅಲ್ಲವೇ ಅಪ್ಪು ಅವರಿಗೆ ಅವರ ಅಭಿಮಾನಿಗಳು ದೊಡ್ಡ ಗೌರವ..ಇನ್ನು ಇದೆ ಕಾರಣದಿಂದಲೇ ಬೆಂಗಳೂರು ಪೊಲೀಸ್​ ಆಯುಕ್ತರಾಗಿರುವ ಕಮಲ್ ಪಂಥ್ ಅವರು ಅಪ್ಪು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುತ್ತಾ ಕಮಿಷನರ್ ಕಮಲ್ ಪಂಥ್ ಅವರು, ಅಪ್ಪು ಅಗಲಿದ ದಿನ ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿತ್ತು. ಅಪ್ಪು ಅಂತಿಮ ದರ್ಶನಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಬಂದಿದ್ದರು.

ಅಭಿಮಾನಿಗಳು ಸಹಕಾರದಿಂದ ಎಲ್ಲವು ಶಾಂತಿಯುತವಾಗಿ ನಡೆದಿದ್ದು ಯಾವುದೇ ರೀತಿಯ ಅಹಿತಕರವಾದ ಘಟನೆಗಳು ನಡೆದಿಲ್ಲ. ಆ ಎರಡು ಮೂರೂ ದಿನ ಎಲ್ಲವು ಶಾಂತಿಯುತವಾಗಿ ನಡೆದಿದೆ. ಹಾಗಾಗಿಯೇ ಅಪ್ಪು ಅವರ ಅಂತಿಮ ಕಾರ್ಯಗಳನ್ನ ಬಹಳ ಗೌರವಪೂರ್ವಕವಾಗಿ ನೆರವೇರಿಸಲಾಗಿದೆ. ಶಾಂತಿಯುತವಾಗಿ ಸಹಕರಿಸಿದ ಎಲ್ಲಾ ಪುನೀತ್ ರಾಜ್ ಕುಮಾರ್ ಅಭಿಮಾನಿಗಳೇ ನಾನು ವಂದಿಸುತ್ತೇನೆ ಎಂದು ಕಮಲ್ ಪಂಥ್ ಅವರು ಹೇಳಿದ್ದಾರೆ. ಇನ್ನು ಬೆಂಗಳೂರಿನ ಪೊಲೀಸರು ಸಹ ಇಡೀ ಬೆಂಗಳೂರಿನಾದ್ಯಂತ ಬಿಗಿ ಬಂದೋ ಬಸ್ತ್ ಮಾಡಿದ್ದರು. ಹಾಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಮಿಷನರ್ ಕಮಲ್ ಪಂಥ್ ಅವರು ಹೇಳಿದ್ದಾರೆ. ಇನ್ನು ಪೊಲೀಸ್ ಕಮಿಷನರ್ ಅವರು ಈ ವಿಚಾರ ಕೇಳಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಂತಸಗೊಂಡಿದ್ದಾರೆ.