ಸರ್ಪ ಕಡಿದಾಗ ಕೂಡ ಬಳಸಲಾಗುವ ಈ ಕಣಗಿಲೆಯ ಗಿಡ ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ !

Kannada News
Advertisements

ಇಡೀ ಜಗತ್ತಿನಲ್ಲೇ ಭಾರತದ ಆಯುರ್ವೇದ ಪದ್ದತಿಗೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಇನ್ನು ಆಯುರ್ವೇದದಲ್ಲಿ ಉಲ್ಲೇಖ ಮಾಡಿರುವಂತೆ ನಮ್ಮ ಸುತ್ತ ಮುತ್ತಲಿರುವ ಗಿಡ ಮೂಲಿಕೆಗಳು ಔಷಧೀಯ ಸಸ್ಯಗಳು ಬಹುತೇಕ ಕಾಯಿಲೆಗಳಿಗೆ ರಾಮಬಾಣವಾಗಿವೆ. ಆದರೆ ಅವುಗಳನ್ನ ಗುರುತಿಸಿ ಸರಿಯಾದ ಬಳಕೆ ಮಾಡುವ ಜ್ನ್ಯಾನ ಇರಬೇಕಷ್ಟೆ.

ಇದೆ ರೀತಿಯ ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ ಕಣಗಿಲೆ ಹೂವಿನ ಗಿಡ. ಹಳ್ಳಿಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಸಿಗುವ ಇದಕ್ಕೆ ಬಸವನ ಪಾದದ ಹೂವಿನ ಗಿಡ ಅಂತಲೂ ಕರೆಯುತ್ತಾರೆ.ವಿಶೇಷ ಶಕ್ತಿ ಹೊಂದಿರುವ ಕಣಗಿಲೆಯ ಹಲವಾರು ಕಾಯಿಲೆಗಳನ್ನ ನಿವಾರಿಸುವ ಔಷಧೀಯ ಗಿಡವಾಗಿದೆ.

ಕಜ್ಜಿ ತುರಿಕೆಯಿಂದ ಸಂಕಟಪಡುತ್ತಿರುವವರು ಕಣಗಿಲೆಯ ಗಿಡದ ರಸಕ್ಕೆ ಸಾಸಿವೆ ಎಣ್ಣೆಯನ್ನ ಮಿಕ್ಸ್ ಮಾಡಿ ತಯಾರಿಸಿದ ಎಣ್ಣೆಯನ್ನ ಕಜ್ಜಿಯಾದ ಜಗದಲ್ಲಿ ಹಚ್ಚುವುದರಿಂದ ಕಜ್ಜಿ ನಿವಾರಣೆಯಾಗುತ್ತದೆ. ಇನ್ನು ಕುಷ್ಠರೋಗಿಗಳಿಗೆ ಇದು ಉತ್ತಮವಾಗಿ ಕೆಲಸ ಮಾಡಲಿದ್ದು ಕಣಗಿಲೆಯ ತೊಗಟೆಯ ಕಷಾಯ ತಯಾರು ಮಾಡಿ ಅದಕ್ಕೆ ಅಷ್ಟೇ ಪ್ರಮಾಣದ ಸಾಸಿವೆ ಎಣ್ಣೆಯನ್ನ ಮಿಕ್ಸ್ ಮಾಡಿ ಆ ಎಣ್ಣೆಯನ್ನ ಕುಷ್ಠರೋಗದ ಗಾಯಗಳಿಗೆ ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತವೆ ಎಂದು ಹೇಳಲಾಗಿದೆ.

ಕಣಗಿಲೆಯ ಎಲೆಯನ್ನ ಅರೆದು ಅದನ್ನ ಹುಳುಕಡ್ಡಿ ಆದ ಜಾಗದಲ್ಲಿ ಹಚ್ಚುವುದರಿಂದ ಹುಳುಕಡ್ಡಿ ವಾಸಿಯಾಗುತ್ತೆ. ಇನ್ನು ಕಣಗಿಲೆಯ ಬೇರನ್ನ ನೀರಿನಲ್ಲಿ ಚೆನ್ನಾಗಿ ಅರಿದು ಲೇಪಿಸುವುದರಿಂದ ಮೂಲವ್ಯಾಧಿ ವಾಸಿಯಾಗುತ್ತೆ. ಇನ್ನು ಈ ಹೂವು ತಲೆ ನೋವಿಗೂ ನಿವಾರಕವಾಗಿದ್ದು ಇದರ ಬೇರಿನ ಪುಡಿಯನ್ನ ಹಣೆಗೆ ಹಚ್ಚಿ ಉಜ್ಜುವುದರಿಂದ ತಲೆನೋವು ಮಾಯವಾಗುತ್ತದೆ. ಇನ್ನು ಈ ಕಣಗಿಲೆಯ ಹೂವಿನ ಗಿಡ ಹಾವು ಕಚ್ಚಿದಾಗ ಕೂಡ ಉತ್ತಮವಾಗಿ ಕೆಲಸ ಮಾಡುತ್ತೆ ಎಂದು ಹೇಳಲಾಗಿದ್ದು ಈ ಬಿಳಿ ಕಣಗಿಲೆಯ ಹೂಗಳನ್ನ ಒಣಗಿಸಿ ಪುಡಿ ಮಾಡಿ ಅದರ ಸಮಭಾಗದಷ್ಟೇ ತಂಬಾಕಿನ ಪುಡಿಯೊಂದಿಗೆ ಬೆರೆಸಿ ಜೊತೆಗೆ ಇದಕ್ಕೆ ಏಲಕ್ಕಿ ಪುಡಿಯನ್ನ ಸಹ ಸೇರಿಸಿ ನುಣ್ಣಗೆ ಪುಡಿ ಮಾಡಿ ನಸ್ಯ ಮಾಡಿಸಬೇಕು ಎಂದು ಹೇಳಲಾಗಿದೆ.