ಲಕ್ವ(ಪಾರ್ಶ್ವವಾಯು) ಹೊಡೆದವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ ಈ ಮಹಾನ್ ವ್ಯಕ್ತಿ

Kannada News
Advertisements

ಪಾರ್ಶ್ವವಾಯು ಅಂತಲೇ ಹೇಳಲಾಗುವ ಈ ಲಕ್ವಾ ಬಂದರೆ ಅಂತಹ ಮನುಷ್ಯನ ಕೈ ಕಾಲುಗಳು ಮೆದುಳಿನ ಸಂಪರ್ಕಕ್ಕೆ ಬರುವುದಿಲ್ಲ. ರಕ್ತವು ಮೆದುಳಿಗೆ ಪೂರೈಕೆಯಾಗದಿದ್ದಲ್ಲಿ ಅಥ್ವಾ ಸ್ಥಗಿತಗೊಂಡಲ್ಲಿ ಸ್ಟ್ರೋಕ್ ಹೊಡೆಯುವ ಸಾಧ್ಯತೆಗಳು ಹೆಚ್ಚು. ಇನ್ನು ಲಕ್ವಾಗೆ ಒಳಗಾದವರು ಅಂಗಾಂಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು ಅಥವಾ ಪೂರ್ತಿ ಇಲ್ಲದ೦ತಾಗುವುದು.

ಇನ್ನು ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿಂದ 4 ರಿಂದ 6 ಗಂಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸಂಪೂರ್ಣ ಗುಣಹೊಂದುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಅನೇಕರು ಲಕ್ವಾ ಹೊಡೆದರೆ ಮುಗಿತು ಅಂತಹವನ ಜೀವನವೇ ಮುಗಿತು ಎಂದು ಹೇಳುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಂಡಲ್ಲಿ ಖಂಡಿತಾ ಗುಣವಾಗುತ್ತದೆ. ಹಾಗೂ ಲಕ್ವಾಗೆ ಆಯುರ್ವೇದ ಪದ್ದತಿಯಲ್ಲಿ ಔಷಧಿ ಕೊಡುವ ಹಲವರು ನಮ್ಮ ನಡುವೆ ಇದ್ದಾರೆ. ಅವರಲ್ಲಿ ಒಬ್ಬರ ಪರಿಚಯನವನ್ನ ನಾವು ಹೇಳುತ್ತೇವೆ ನೋಡಿ..

ಇನ್ನು ಇಲ್ಲಿ ಲಕ್ವಾ ಹೊಡೆದ ಸಾವಿರಾರು ಜನರು ಇಲ್ಲಿ ಬಂದು ಗುಣ ಮಾಡಿಕೊಂಡು ಹೋಗಿರುವ ಹಲವಾರು ನಿದರ್ಶನಗಳು ಇವೆ ಎಂದು ಹೇಳಲಾಗಿದೆ. ಹಾಗಾದ್ರೆ ಆ ಪುಣ್ಯಾತ್ಮ ಯಾರೆಂದು ನೋಡೋಣ ಬನ್ನಿ.. ಯಾವ ಮನುಷ್ಯನ ದೇಹದ ಅಂಗಾಂಗಳು ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ಅಂಗಾಂಗಗಳ ಚಲನೆ ಇಲ್ಲದೆ ಇರುತ್ತದೆಯೋ ಅಂತವರಲ್ಲಿ ಈ ರೀತಿಯಾದ ಸಮಸ್ಯೆಗಳು ಬರುತ್ತವೆ ಎಂದು ಆ ವ್ಯಕ್ತಿ ಹೇಳುತ್ತಾರೆ.ಇನ್ನು ಇವರೇ ಹೇಳುವ ಪ್ರಕಾರ ಈ ರೀತಿಯ ಕಾಯಿಲೆಗಳು ಬಂದಿರುವುದು ನೋಡಿರುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅವರು ಹೆಚ್ಚಾಗಿ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಹಾಗಾಗಿ ಹೆಣ್ಣುಮಕ್ಕಳಲ್ಲಿ ಲಕ್ವಾ ಹೊಡೆಯೋದು ತುಂಬಾ ಕಡಿಮೆ ಎಂದು ಅವರು ಹೇಳುತ್ತಾರೆ.

ಇನ್ನು ಲಕ್ವಾಗೇ ಉಚಿತವಾಗಿ ಆಯುರ್ವೇದದ ಔಷಧಿ ನೀಡುವ ಟಿಪ್ಪು ಬಾಯ್ ಎನ್ನುವವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಾರಿಗನೂರು ಎಂಬುದು ಇವರ ಊರು. ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿಂದ 4 ರಿಂದ 6 ಗಂಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಲಕ್ವಾ ವಾಸಿಯಾಗುತ್ತೆ ಎಂಬುದು ಇವರ ಅಭಿಪ್ರಾಯ. ಇನ್ನು ನಯಾ ಪೈಸೆ ತೆಗೆದುಕೊಳ್ಳದೇ ಪಾರ್ಶ್ವವಾಯುವಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ ಟಿಪ್ಪು ಬಾಯ್.ಆಯುರ್ವೇದ ತೈಲವನ್ನ ಬಳಸಿ ಮಸಾಜ್ ಮಾಡುವ ರೀತಿಯಲ್ಲಿ ಚಿಕಿತ್ಸೆ ನೀಡುವ ಟಿಪ್ಪು ಬಾಯ್ ದೇಹವನ್ನೆಲ್ಲಾ ಫ್ರೀ ಆಗುವಂತೆ ಮಾಡುತ್ತಾರೆ.ಸ್ನೇಹಿತರೆ ಈ ಮಾಹಿತಿಯನ್ನ ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..ಯಾರಿಗಾದ್ರೂ ಉಪಯೋಗವಾಗಬಹುದು.