ಮತ್ತೆ ಕರಣಿ ಹಿಡಿದು ಗಾರೆ ಕೆಲಸ ಶುರು ಹಚ್ಚಿಕೊಂಡ ನಟ ಚಿಕ್ಕಣ್ಣ ! ಜೊತೆಗೆ ಅದ್ಭುತ ಕೆಲಸ ಮಾಡುತ್ತಿರುವ ಹಾಸ್ಯ ನಟ..

Cinema
Advertisements

ಸ್ನೇಹಿತರೇ, ಈಗಿನ ಸ್ಯಾಂಡಲ್ವುಡ್ ನ ಖ್ಯಾತ ಹಾಸ್ಯ ನಟರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಈಗ ಬರುತ್ತಿರುವ ಬಹುತೇಕ ಕನ್ನಡ ಚಿತ್ರಗಳಲ್ಲಿ ಹಾಸ್ಯ ನಟ ಚಿಕ್ಕಣ್ಣನ ಪಾತ್ರ ಇದ್ದೆ ಇರುತ್ತದೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೆ ರಾಜ್ಯದಂತಾ ಕರ್ಪ್ಯೂ ವಿಧಿಸಲಾಗಿದ್ದು, ಯಾವುದೇ ಚಿತ್ರೀಕರಣಗಳು ನಡೆಯುತ್ತಿಲ್ಲ. ಎಲ್ಲಾ ನಟ ನಟಿಯರು ತಮ್ಮ ತಮ್ಮ ಮನೆ ಸೇರಿಕೊಂಡಿದ್ದಾರೆ. ಇನ್ನು ನಟ ಚಿಕ್ಕಣ್ಣ ಕೂಡ ಹೌದು. ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮುಂಚೆ ಚಿಕ್ಕಣ್ಣ ಮಾಡುತ್ತಿದ್ದದ್ದೇ ಗಾರೆ ಕೆಲಸ. ಈಗ ಚಿತ್ರೀಕರಣ ಇಲ್ಲದ ಕಾರಣ ನಟ ಚಿಕ್ಕನ್ನ ಮತ್ತೆ ಗಾರೆ ಕೆಲಸ ಮಾಡಲು ಶುರುಹಚ್ಚಿಕೊಂಡಿದ್ದಾರೆ.

[widget id=”custom_html-4″]

Advertisements

ಹೌದು, ಮೈಸೂರಿನಲ್ಲಿ ಫಾರ್ಮ್ ಹೌಸ್ ಹೊಂದಿರುವ ಚಿಕ್ಕಣ್ಣ, ಅಲ್ಲೇ ಮತ್ತೆ ಗಾರೆ ಕೆಲಸ ಶುರುಮಾಡಿದ್ದಾರೆ. ತಮ್ಮ ಮೈಸೂರಿನ ತೋಟದ ಮನೆಯಲ್ಲಿ ತಾವೇ ಸ್ವತಃ ಶೌಚಾಲಯವನ್ನು ಕಟ್ಟುತ್ತಿದ್ದಾರೆ. ಸಿನಿಮಾ ರಂಗಕ್ಕೆ ಬರೋ ಮುನ್ನ ಚಿಕ್ಕಣ್ಣ ಮಾಡುತ್ತಿದ್ದ ಗಾರೆ ಕೆಲಸಕ್ಕೆ ಮತ್ತೆ ಮರಳಿದ್ದಾರೆ. ಕೈಯಲ್ಲಿ ಕರಣಿಯನ್ನ ಹಿಡಿದು, ಗೋಡೆ ಕಟ್ಟುವ ಕೆಲಸ, ಪ್ಲಾಸ್ಟಿಂಗ್ ಕೆಲಸವನ್ನ ಮಾಡುತ್ತಿದ್ದಾರೆ. ಕೇವಲ ತನ್ನ ತೋಟದ ಮನೆ ನೋಡಿಕೊಂಡು ಕಾಲ ಕಳೆಯುತ್ತಿಲ್ಲ ನಟ ಚಿಕ್ಕಣ್ಣ. ತನ್ನ ತೋಟದ ಮನೆಯಲ್ಲಿ ನಟ ಚಿಕ್ಕಣ್ಣ ತಾವೇ ಸ್ವತಃ ಶೌಚಾಲಯ ಕಟ್ಟುತ್ತಿರುವ ವಿಡಿಯೋ ನೋಡಿ..

[widget id=”custom_html-4″]

ಹೌದು, ನಟ ಚಿಕ್ಕಣ್ಣ ಅವರ ತೋಟದ ಮನೆಯ ಸುತ್ತಮುತ್ತಲಿರುವ ಸ್ಥಳೀಯ ಅನೇಕರು, ಕೊರೋನಾದಿಂದಾಗಿ ಮನೆಯಲ್ಲೇ ತಮ್ಮ ತೋಟದ ಮನೆಯಲ್ಲೇ ಐಸೋಲೇಷನ್ ಆಗಿದ್ದು ಊಟದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಹಾಗಾಗಿ ಕರಣಿ ಹಿಡಿದಿದ್ದ ಕೈನಲ್ಲಿ ಸೌಟನ್ನ ಕೂಡ ಹಿಡಿದ ಚಿಕ್ಕಣ್ಣ ತಾವೇ ಸ್ವತಃ ಅಡುಗೆ ಮಾಡಿ ಸಂಕಷ್ಟದಲ್ಲಿರುವರಿಗೆ ಊಟ ಕೊಟ್ಟು ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ನಾವು ಮಾಡುವ ಸೇವೆ ಚಿಕ್ಕ ಪುಟ್ಟದಾದರೂ ಪರವಾಗಿಲ್ಲ ಕಷ್ಟಕಾಲದಲ್ಲಿರುಅ ಜನರ ಜೊತೆಯಾಗಿ ನಿಲ್ಲಬೇಕು ಎಂದು ಹಾಸ್ಯ ನಟ ಚಿಕ್ಕಣ್ಣ ಹೇಳಿದ್ದಾರೆ. ಒಟ್ಟಿನಲ್ಲಿ ಕಷ್ಟದಿಂದಲೇ ಬೆಳೆದು ಬಂದಿರುವ ಚಿಕ್ಕಣ್ಣನವರು ಮಾಡುತ್ತಿರುವ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.