ಸಕಲ ಕಲಾವಲ್ಲಭ ನಟ ಕಿಶೋರ್ ಇಂದಿಗೂ ಮಾಡುತ್ತಿರುವ ಕೆಲಸ ಏನು ಗೊತ್ತಾ ? ಇವರ ಹೆಂಡತಿ ಮಕ್ಕಳು ಹೇಗಿದ್ದಾರೆ ನೋಡಿ..

Cinema Inspire

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ನಟ ಕಿಶೋರ್ ಕೂಡ ಒಬ್ಬರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ನಟ ಕಿಶೋರ್ ನಟನೆಗೂ ಸೈ, ಬೆ’ವರಿಳಿಸಿ ದುಡಿಯುವ ರೈತನಾಗಿಯೂ ಸೈ ಎನಿಸಿಕೊಂಡವರು. ೧೪ ಆಗಸ್ಟ್ ೧೯೭೪ರಲ್ಲಿ ಚನ್ನಪಟ್ಟಣದಲ್ಲಿ ಕಿಶೋರ್ ಅವರು ಜನಿಸಿದ್ದು. ಇವರ ತಂದೆ ಪ್ರೊಫೆಸರ್ ಆಗಿದ್ದವರು. ತಮ್ಮ ಶಾಲಾ ವಿಧ್ಯಾಭ್ಯಾಸವನ್ನ ಕುಣಿಗಲ್ ನಲ್ಲಿ ಮುಗಿಸಿದ ಕಿಶೋರ್ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಾರೆ. ಬಳಿಕ ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಪದವಿಯನ್ನ ಪಡೆದುಕೊಳ್ಳುತ್ತಾರೆ. ಇನ್ನು ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಕಿಶೋರ್ ಅವರು ನಂತರ ಫೇಮಸ್ ಫ್ಯಾಶನ್ ಡಿಸೈನರ್ ಅವರಿಗೆ ಅಸಿಸ್ಟೆಂಟ್ ಆಗಿಯೂ ಕೆಲಸ ಮಾಡಿದ್ದಾರೆ.

ಇನ್ನು ಕಿಶೋರ್ ಅವರು ತಾವು ಉಪನ್ಯಾಸ ಮಾಡುತ್ತಿದ್ದ ದಿನಗಳಲ್ಲೇ ಥಿಯೇಟರ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹೀಗೆ ಸಕಲ ಕಲಾವಲ್ಲಭರಾಗಿದ್ದ ಕಿಶೋರ್ ಅವರು ಕನ್ನಡದ ಕಂಠಿ ಚಿತ್ರದ ಮೂಲಕ ೨೦೦೪ರಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಬಳಿಕ ಕನ್ನಡದ ಹಲವಾರು ಚಿತ್ರಗಳಲ್ಲಿ ಖ’ಳ ನಟನಾಗಿ, ಪೋಷಕ ನಟನಾಗಿ, ಪೊಲೀಸ್ ಅಧಿಕಾರಿಯ ಪಾತ್ರಗಳಲ್ಲಿ ನಟಿಸಿರುವ ಕಿಶೋರ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಬಾಲಿ ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ. ನಟ ಕಿಶೋರ್ ಅವರ ಅಭಿನಯ ಕಂಡು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಿಂದ ಹೆಚ್ಚಾಗಿ ಖ’ಳ ನಟನ ಪಾತ್ರಗಳಿಗೆ ಅವಕಾಶಗಳು ಹುಡುಕಿಕೊಂಡು ಬಂದಿವೆ.

ಇನ್ನು ಕಿಶೋರ್ ಅವರು ಕಾಲೇಜಿನಲ್ಲಿದ್ದಾಗ ಪ್ರೀತಿ ಮಾಡುತ್ತಿದ್ದ ವಿಶಾಲಾಕ್ಷಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕಿಶೋರ್ ಅವರು ಮದುವೆಯಾದ ವೇಳೆ ಡೆಕ್ಕನ್ ಎರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಗಳಿಗೆ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರಾ’ಕ್ಷ’ಸ ಚಿತ್ರದಲ್ಲಿನ ಸಪೋರ್ಟಿನ್ಗ್ ರೋಲ್ ನ ಅಭಿನಯಕ್ಕಾಗಿ ನಟ ಕಿಶೋರ್ ಅವರಿಗೆ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ. ಹೀಗೆ ಸಕಲ ವಲ್ಲಭನಾಗಿರುವ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬೇಡಿಕೆ ನಟನಾಗಿರುವ ಕಿಶೋರ್ ಅವರು ರೈತನಾಗಿಯೂ ದುಡಿಯುತ್ತಾ ರೈತರು ಸೇರಿದಂತೆ ಎಷ್ಟೋ ಜನರಿಗೆ ಮಾದರಿ ನಟನಾಗಿದ್ದಾರೆ.