ಎಲ್ಲಿ ಹೋದ್ರು ಖ್ಯಾತ ನಟ ಶೋಭ್ ರಾಜ್..ಇಂತಹ ನಟನಿಗೇನೇ ಅವಕಾಶಗಳು ಸಿಗ್ತಾ ಎಲ್ಲಾ ಏಕೆ ?

Cinema

ಸ್ನೇಹಿತರೇ, ಯಾವುದೇ ಸಿನಿಮಾದಲ್ಲೂ ನಾಯಕ ನಟನಿಗೆ ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅಷ್ಟೇ ಪ್ರಾಮುಖ್ಯತೆ ಖಳ ನಟನಿಗೂ ಇರುತ್ತದೆ. ಇನ್ನು ಸ್ಯಾಂಡಲ್ವುಡ್ ನ ಖ್ಯಾತ ಖಳ ನಟರಲ್ಲಿ ನಟ ಶೋಭ್ ರಾಜ್ ಕೂಡ ಒಬ್ಬರು. ವಿಲನ್ ರೋಲ್ ಮಾತ್ರವಲ್ಲದೆ, ಕಾಮಿಡಿ ಪಾತ್ರಗಳಲ್ಲೂ ಸೈ ಎಣಿಸಿಕೊಂಡಿದ್ದಾರೆ ಈ ನಟ. ಆರಡಿ ಎತ್ತರವಿರುವ ನೀಳಕಾಯದ ದೇಹ ಹೊಂದಿದ್ದ ನಟ ಶೋಭ್ ರಾಜ್ ಅವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟ ಇದುವರೆಗೆ 250ಕ್ಕೂ ಕನ್ನಡ ಸಿನಿಮಾಗಳಲ್ಲಿ ಖಳ ನಟನಾಗಿ, ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮೂಲತಃ ತುಮಕೂರಿನವರಾದ ಶೋಭ್ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಗೊಂಡಿದ್ದೆ ವಿಲನ್ ಪಾತ್ರಗಳ ಮೂಲಕ.

ಮಾಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಶೋಭ್ ರಾಜ್ ರವರ ತಂದೆ ವ್ಯಾಪಾರ ಮಾಡುತ್ತಿದ್ದರು. ಬಳಿಕ ವ್ಯವಹಾರದ ಸಲುವಾಗಿ ಶೋಭ್ ರಾಜ್ ಅವರ ಕುಟುಂಬ ಬೆಂಗಳೂರಿನ ಸಂಪಗಿ ರಾಮನಗರಕ್ಕೆ ಬಂದು ವಾಸ್ತವ್ಯ ಹೂಡುತ್ತಾರೆ. ಇನ್ನು ಹುಟ್ಟೂರಿನಲ್ಲೇ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ನಟ ಶೋಭ್ ರಾಜ್ ರವರು ಕುಟುಂಬ ಬೆಂಗಳೂರಿಗೆ ಬಂದ ಬಳಿಕ ಕಾಲೇಜು ಜೀವನವನ್ನ ಕಳೆಯುತ್ತಾರೆ. ಇನ್ನು ಓದಿನಲ್ಲಿ ಅಷ್ಟೇನೂ ಆಸಕ್ತಿ ಎಲ್ಲದ ನಟ ಶೋಭ್ ರಾಜ್ ರವರು ಸ್ನೇಹಿತರೆ ಜೊತೆ ಸುತ್ತೋದು, ಯಾವುದೇ ಕನ್ನಡ ಸಿನಿಮಾ ಬಿಡುಗಡೆಯಾದಾಗ ಮೊದಲ ದಿನವೇ ಫಸ್ಟ್ ಶೋ ನೋಡೋದು ಅವರ ಕೆಳಸವಾಗಿತ್ತಂತೆ. ಇನ್ನು ಚೈತ್ರದ ಪ್ರೇಮಾಂಜಲಿ ಖ್ಯಾತಿಯ ನಟ ರಘುವೀರ್ ಮತ್ತು ಶೋಭ್ ರಾಜ್ ರವರು ಆತ್ಮಿಯ್ಯ ಸ್ನೇಹಿತರಾಗಿದ್ದರಂತೆ. ಹಾಗಾಗಿಯೇ ಚೈತ್ರ ಪ್ರಮಾಂಜಲಿ ಸಿನಿಮಾ ಮೂಲಕವೇ ನಟ ಶೋಭ್ ರಾಜ್ ಕನ್ನಡ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಾರೆ.

ಹೌದು, ಇದರ ಹಿಂದೆಯೂ ಕೂಡ ಒಂದು ರೋಚಕ ಕತೆ ಇದೆ. ರಘುವೀರ್ ಅವರ ಆಪ್ತ ಗೆಳೆಯನಾಗಿದ್ದ ನಟ ಶೋಭ್ ರಾಜ್ ರವರು ಚೈತ್ರದ ಪ್ರೇಮಾಂಜಲಿ ಸಿನಿಮಾ ಚಿತ್ರೀಕರಣ ವೇಳೆ ರಘುವೀರ್ ಅವರ ಹಣಕಾಸು ಲೆಕ್ಕಾಚಾರ ಕುರಿತಂತೆ ನೋಡಿಕೊಂಡು ಓಡಾಡಕೊಂಡಿದ್ದು, ಆ ಸಿನಿಮಾದ ಖಳ ನಟನ ಪಾತ್ರದಲ್ಲಿ ನಟಿಸಬೇಕಿದ್ದ ನಟ ಆ ದಿನದ ಸಿನಿಮಾ ಸೆಟ್ ಬಂದಿರೋದಿಲ್ಲ. ಇನ್ನು ವಿಲನ್ ರೋಲ್ ಗೆ ಹೇಳಿ ಮಾಡಿಸಿದಂತಿದ್ದ ನಟ ಶೋಭ್ ರಾಜ್ ರವರೆ ಆ ಪಾತ್ರ ಮಾಡುತ್ತಾರೆ. ಇನ್ನು ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಿಟ್ ಆಗಿದ್ದು ನಮಗೆಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ಬಳಿಕದ ಮೂರ್ನಾಲ್ಕು ಸಿನಿಮಾಗಳಲ್ಲಿ ಶೋಭ್ ರಾಜ್ ರವರು ರಘುವೀರ್ ಅವರು ಅಭಿನಯಿಸಿದ ಚಿತ್ರಗಳಲ್ಲೆ ಖಳನಟನಾಗಿ ಕಾಣಿಸಿಕೊಳ್ಳುತ್ತಾರೆ.

ಬಳಿಕ ದೇವರಾಜ್, ವಿಷ್ಣುವರ್ಧನ್, ಸಾಯಿಕುಮಾರ್ ಸೇರಿದಂತೆ ವರನಟ ರಾಜಣ್ಣ ಅವರ ಶಬ್ದವೇದಿ ಸಿನಿಮಾದಲ್ಲೂ ಕೂಡ ನಟಿಸುವ ಅವಕಾಶ ನಟ ಶೋಭ್ ರಾಜ್ ರವರು ಪಡೆಯುತ್ತಾರೆ. ಕನ್ನಡದ ಹಲವು ನಾಯಕ ನಟರ ಜೊತೆ ಅಭಿನಯಿಸಿರುವ ಶೋಭ್ ರಾಜ್ ರವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಚಿತ್ರಗಲಳಲ್ಲೂ ಅಭಿನಯಿಸಿದ್ದಾರೆ. ಅನೇಕರಿಗೆ ಗೊತ್ತಿಲ್ಲದ ವಿಚಾರ ಏನೆಂದ್ರೆ ಶೋಭ್ ರಾಜ್ ಅವರ ಅಸಲಿ ನಾಮಧೇಯ ಸುರೇಂದ್ರ ಪಾಲ್ ಎಂದು. ಸಿನಿಮಾರಂಗದಲ್ಲಿ ಈ ಹೆಸರು ಸೂಟ್ ಆಗುವುದಿಲವೆಂದು ನಟ, ನಿರ್ದೇಶಕ ಎಸ್. ನಾರಾಯಣ್ ಅವರು ಶೋಭ್ ರಾಜ್ ಎಂದು ನಾಮಕರಣ ಮಾಡಿದ್ರು. ಇನ್ನು ಅದೇ ಹೆಸರಿಂದಲೇ ಸ್ಯಾಂಡಲ್ವುಡ್ ನಲ್ಲಿ ಫ್ಯಾಮಸ್ ಆದ್ರು ಈ ನಟ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಖ್ಯಾತ ನಟ ಶೋಭ್ ರಾಜ್ ರವರಿಗೆ ಸ್ಯಾಂಡಲ್ವುಡ್ ನಲ್ಲಿ ಅವಕಾಶಗಳೇ ಇಲ್ಲದಂತಾಗಿರುವುದು ಬೇಸರದ ವಿಷಯ. ವಿಲನ್, ಹಾಸ್ಯ, ಪೋಷಕ ಪಾತ್ರಗಳಲ್ಲಿ ಮಿಂಚಿರುವ ನಟ ಶೋಭ್ ರಾಜ್ ರವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ಒಲಿದು ಬರಲಿ ಎನ್ನುವುದು ನಮ್ಮೆಲ್ಲರ ಆಸೆಯಾಗಿದೆ.